ಪಂಚ ರಾಜ್ಯಗಳ ಚುನಾವಣೆ ಎನ್ ಡಿ ಎ ಉತ್ತಮ ಫಲಿತಾಂಶ ಬಿಜೆಪಿ ಸಂಭ್ರಮಾಚರಣೆ….
1 min read
ಪಂಚ ರಾಜ್ಯಗಳ ಚುನಾವಣೆ ಎನ್ ಡಿ ಎ ಉತ್ತಮ ಫಲಿತಾಂಶ ಬಿಜೆಪಿ ಸಂಭ್ರಮಾಚರಣೆ
ಆಲ್ದೂರು: ಪಂಚ ರಾಜ್ಯಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶವನ್ನು ಎನ್ ಡಿ ಎ ಪಡೆದ ಹಿನ್ನೆಲೆ ಬಿಜೆಪಿ ಆಲ್ದೂರು ಮಂಡಲ ವತಿಯಿಂದ ಪದಾಧಿಕಾರಿಗಳು ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂತಸವನ್ನು ಹಂಚಿಕೊಂಡರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕವೀಶ್ ಹೆಚ್ಎಸ್,ಮಂಡಲ ಅಧ್ಯಕ್ಷ ರವಿ ಬಸರವಳ್ಳಿ,ಮಂಡಲ ಉಪಾಧ್ಯಕ್ಷೆ ಭವ್ಯ ನಟೇಶ್, ಪ್ರಧಾನ ಕಾರ್ಯದರ್ಶಿ ಗಳಾದ
ರವೀಂದ್ರ ಆನಿಗನಹಳ್ಳಿ, ಅರವಿಂದ್ ಕೂದುವಳ್ಳಿ, ಮುಖಂಡರಾದ ಸಂಪತ್ ಹೆಡದಾಳು, ಹೋಬಳಿ ಘಟಕದ ಅಧ್ಯಕ್ಷ ನಾಗೇಶ್ ಭೂತನ ಕಾಡು,
ಉಪಾಧ್ಯಕ್ಷ ಮಿಥುನ್ ಹಳಿಯೂರು, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರತಿಭಾ ನವೀನ್, ಎಸ್ ಸಿ ಮೋರ್ಚಾ ಅಧ್ಯಕ್ಷ ನಾಗೇಶ್ ಡಿಜೆ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ


ದೀಪ ನಾಗೇಶ್, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಿಂಧು ಕುಮಾರ್, ಪ್ರಧಾನ ಕಾರ್ಯದರ್ಶಿ ಆತ್ಮಿಕ್ ಗೌಡ, ಶಂಕರ್, ಕಾರ್ಯಕರ್ತರುಗಳು ಭಾಗವಹಿಸಿದ್ದರು.

