लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಣಿಕೆಯಲ್ಲಿ  201ರಿಂದ 203 ಮತಗಳ ಲೀಡ್ ಸಾಧಿಸಿ ಶಾಸಕ ಸ್ಥಾನ ಭದ್ರ ಮಾಡಿಕೊಂಡ ರಾಜೇಗೌಡ…..

1 min read

‎ಅವಿನ್ ಟಿವಿ ಸುದ್ದಿಜಾಲ ✍️: ರಾಜೇಗೌಡರಿಗೆ ಎರಡು ಮತಗಳ ಅಂತರ ಹೆಚ್ಚು ಮಾಡಿದ ಜೀವರಾಜ್: ಮರು ಎಣಿಕೆಯಲ್ಲಿ  201ರಿಂದ 203 ಮತಗಳ ಲೀಡ್ ಸಾಧಿಸಿ ಶಾಸಕ ಸ್ಥಾನ ಭದ್ರ ಮಾಡಿಕೊಂಡ ರಾಜೇಗೌಡ.
‎
‎ಚಿಕ್ಕಮಗಳೂರು ಮೇ ೦೨: ಕಳೆದ ಮೂರು ವರ್ಷಗಳ ಹಿಂದೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದ ವಿಧಾನ ಸಭೆಯ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಪರಾಭವ ಗೊಂಡ  ಬಿಜೆಪಿಯ ಅಭ್ಯರ್ಥಿ ಡಿ.ಎನ್.ಜೀವರಾಜ್ ಹೈಕೋರ್ಟ್ ನಲ್ಲಿ ಆಕ್ಷೇಪ ಸಲ್ಲಿಸಿದ್ದರು.
‎
‎ನ್ಯಾಯಾಲಯ ವಿಚಾರಣೆ ನಡೆಸಿ ಅಂಚೆ ಮತಗಳ ಮರು ಎಣಿಕೆ ಮಾಡಲು ಆದೇಶ ನೀಡಿದ್ದರ ಹಿನ್ನೆಲೆಯಲ್ಲಿ ಇಂದು ಮರು ಎಣಿಕೆ ಕಾರ್ಯಾ ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ನಡೆಯಿತು.
‎
‎ಬೆಳಗ್ಗೆ ಎಂಟು ಘಂಟೆಗೆ ಸ್ಟ್ರಾಂಗ್ ರೂಮ್ ತರೆದಾಗ ಇಪ್ಪತ್ತು ಬಾಕ್ಸ್ ಗಳಲ್ಲಿ ಹದಿನೈದು ಬಾಕ್ಸ್ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಕಾಂಗ್ರೆಸ್ ಪಕ್ಷದ ಚುನಾವಣಾ ಏಜೆಂಟ್ ಆಕ್ರೋಶ ಮತ್ತು ಆಕ್ಷೇಪ ವ್ಯಕ್ತಪಡಿಸಿ ಮತಗಳ ಎಣಿಕೆ ಮಾಡದಂತೆ ಕೋರಿದರು.
‎
‎ ಆದರೆ,ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತಗಳ ಎಣಿಕೆ ಮಾಡುವುದು ಅನಿವಾರ್ಯವಾಗಿತ್ತು.
‎
‎ಒಟ್ಟು ಚಲಾವಣೆಯಾದ ಅಂಚೆ ಮತಗಳು1822.
‎ ತಿರಸ್ಕರಿಸಿದ ಅಂಚೆ ಮತಗಳು 279.ಇವುಗಳ ಏಣಿಕೆ ಕಾರ್ಯ ಇಂದು ನಗರದಲ್ಲಿ ನಡೆದು . ಮರು ಎಣಿಕೆಯಲ್ಲಿ 02 ಹೆಚ್ಚು ಮತಗಳನ್ನು ಪಡೆದು 201 ರಿಂದ 203 ಮತಗಳ ಅಂತರದಲ್ಲಿ ಟಿಡಿ ರಾಜೇಗೌಡ ಅವರು ಗೆಲುವು ಸಾಧಿಸಿ, ಎದುರಾಗಿದ್ದ ಆತಂಕವನ್ನು ದೂರ ತಳ್ಳಿ ನಗುವಿನ ಅಲೆ ಬೀರಿದ್ದಾರೆ.
‎
‎ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟು,ಕೊತ ಕೊತ ಕುದಿಯುತ್ತಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಈ ಎಲ್ಲ ಅನುಮಾನ ಮತ್ತು ಗೊಂದಲಗಳಿಗೆ ಔಷಧಿ ನೀಡಿ,ಷರಾ ಬರೆದು  ಮುಕ್ತಾಯಮಾಡಿದೆ.
‎
‎ಮರುಮತ ಎಣಿಕೆಯ ಫಲಿತಾಂಶದಲ್ಲಿ  ಅನುಕೂಲವಾಗಬಹುದೆಂಬ  ಲೆಕ್ಕಾಚಾರ ಹಾಕಿದ್ದ ಡಿ ಏನ್ ಜೀವರಾಜ್ ಅವರಿಗೆ ನಿರಾಸೆಯಾಗಿದೆ
‎       ••••••••••••••
‎ಡಿ ಎಂ ಮಂಜುನಾಥಸ್ವಾಮಿ
‎ಅವಿನ್ ಟಿವಿ ಸುದ್ದಿಜಾಲ ….. ✍️
‎ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed