ಸರಸ್ವತಿ ಕನ್ನಡ ರತ್ನ ರಾಜ್ಯ ಪ್ರಶಸ್ತಿಗೆ ಜಾನಪದ ಕಲಾವಿದೆ ಅಜ್ಜಂಪುರದ ಗಾಯಿತ್ರಮ್ಮ ಭಾಜನ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಸರಸ್ವತಿ ಕನ್ನಡ ರತ್ನ ರಾಜ್ಯ ಪ್ರಶಸ್ತಿಗೆ ಜಾನಪದ ಕಲಾವಿದೆ ಅಜ್ಜಂಪುರದ ಗಾಯಿತ್ರಮ್ಮ ಭಾಜನ.
ಚಿಕ್ಕಮಗಳೂರು ಮೇ ೦೧: ತುಂಬಾ ಓದಿಕೊಂಡವರು ಅಕ್ಷರವಂತರು, ಹೆಚ್ಚು ತಿಳಿದುಕೊಂಡವರು ವಿದ್ಯಾವಂತರು, ಈ ಕಾರಣಕ್ಕೆ ನಮ್ಮ ಜನಪದರು ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎನ್ನುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಗಾಯತ್ರಮ್ಮನವರು ಹೆಚ್ಚೇನೂ ಶಿಕ್ಷಣವನ್ನು ಕಲಿತವರಲ್ಲ, ಪ್ರಥಮ ಪಿಯುಸಿ ಯನ್ನು ಒಂದು ವರ್ಷವಷ್ಟೇ ಓದಿ, ಕಾಲೇಜು ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತನ್ನ ಪತಿಯೊಂದಿಗೆ ಕೌಟುಂಬಿಕ ಜೀವನಕಷ್ಟೆ ಬದುಕನ್ನು ಸೀಮಿತಗೊಳಿಸಿಕೊಂಡಿದ್ದರು, ಎ ಎಸ್ ಐ ಆಗಿದ್ದ ಪತಿ ಬಸವರಾಜ್ ಅವರು ಸೇವೆಯಲ್ಲಿದ್ದಾಗಲೇ ಅಕಾಲಿಕ ಮರಣಕ್ಕೆ ತುತ್ತಾದ ಕಾರಣ, ಹಾಗೂ ತಾನು ಬಾಲಕಿಯಾಗಿದ್ದಾಗಲೇ ತನ್ನೊಳಗೆ ಗುನುಗುತ್ತಿದ್ದ ಸಾಂಸ್ಕೃತಿಕ ಧನಿಗೆ ಮರುಜೀವ ಕೊಟ್ಟು, ಇದ್ದ ಒಬ್ಬನೇ ಮಗನಿಗೆ ವಿದ್ಯಾಭ್ಯಾಸ ಮಾಡಿಸಿ, ಸರ್ಕಾರಿ ನೌಕರಿ ಕೊಡಿಸಿ ತದನಂತರ ತನ್ನನ್ನು ತಾನು ಸಂಪೂರ್ಣವಾಗಿ ಸಾಹಿತ್ಯಿಕ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು, ಕಳೆದ ಎಂಟು ವರ್ಷಗಳಿಂದ ಸಂಪೂರ್ಣವಾಗಿ ಜಿಲ್ಲೆಯ ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಯಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿದ್ದಾರೆ.
ಹೆಚ್ಚೇನೂ ವಿದ್ಯಾಭ್ಯಾಸ ಮಾಡದ ಗಾಯತ್ರಿನಮ್ಮನವರೊಳಗೆ ಸಾಹಿತ್ಯದ ಅಭಿರುಚಿಯ ತುಡಿತವಿದೆ, ಈ ತುಡಿತ ಕವಿತೆ ಚುಟುಕು ಇನ್ನಿತರೆ ಬರಹಗಳಿಗೆ ಪ್ರೇರಣೆ ಕೊಟ್ಟು ಅವುಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಕಾತುರದಲ್ಲಿದ್ದಾರೆ,ಜೊತೆಗೆ ಸ್ಥಳೀಯ ಕಲಾವಿದರನ್ನು ಸಂಘಟಿಸಿ, ಸಪ್ತಸ್ವರ ಸಂಗೀತ ತಂಡವನ್ನು ಕಟ್ಟಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ಸುತ್ತಾಡುತ್ತಾ ಜಾನಪದ ಮತ್ತು ವಚನ ಗಾಯನವನ್ನು ಪಸರಿಸುತ್ತಾ ಬರುತ್ತಿದ್ದಾರೆ, ಹಾಗೂ ರಂಗೋಲಿ ಬಿಡಿಸುವುದರಲ್ಲಿ, ಹೆಣತೆ ನೈಗೆಯಲ್ಲಿ ಕೊಡ ಗಾಯತ್ರಿಮ್ಮನವರು ಪರಿಣಿತರು.
ಅಕ್ಕನ ಬಳಗ, ಕದಳಿ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಾಗತಿಕ ಲಿಂಗಾಯಿತ ಮಹಾಸಭಾ , ಸ್ವಾಮಿ ವಿವೇಕಾನಂದ ಟ್ರಸ್ಟ್, ಮಹಿಳಾ ಸ್ಪೂರ್ತಿ ಸಮಾಜ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಕಲಾವಿದೆಯಾಗಿ, ಸಂಘಟಕಿಯಾಗಿ , ಪದಾಧಿಕಾರಿಯಾಗಿ ದುಡಿಯುತ್ತಿದ್ದಾರೆ.
ಇವರ ಈ ಎಲ್ಲಾ ಸೇವೆಯನ್ನು ನಾಡಿನ ಹಲವು ಸಂಘ ಸಂಸ್ಥೆಗಳು ಪರಿಗಣಿಸಿ ಅನೇಕ ಗೌರವ ಮತ್ತು ಪ್ರಶಸ್ತಿಗಳನ್ನು ಕೂಡ ಮಾಡಿವೆ, 2026ರ ಏಪ್ರಿಲ್ ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಮಾಡುವ ಜಿಲ್ಲಾ ಕನ್ನಡ ಶ್ರೀ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತು ಕೊಡ ಮಾಡುವ ಜಿಲ್ಲಾ ಜಾನಪದ ಸಿರಿ ಪ್ರಶಸ್ತಿ ಪಡೆಯುವುದರ ಜೊತೆಗೆ, ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ,ಉಡುಪಿಯ ಸಾಲಿಗ್ರಾಮದ ಶ್ರೀಮತಿ ಸರಸ್ವತಿ ದಾಸಪ್ಪ ಶಣೈ ಪ್ರತಿಷ್ಠಾನ ಕೊಡ ಮಾಡುವ 20206ನೇ ಸಾಲಿನ *ಸರಸ್ವತಿ ಕನ್ನಡರತ್ನ* ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಾನಪದ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಈ ಕನ್ನಡ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

