लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಅಂಚೆ ಮತಗಳ ಮರು ಎಣಿಕೆಯತ್ತ ಎಲ್ಲರಚಿತ್ತ
‎
‎* ಜಿಲ್ಲಾಡಳಿತ ಅಗತ್ಯಸಿದ್ದತೆ * ಮದ್ಯಮಾರಾಟನಿಷೇಧ * ಪೋಲಿಸ್ ಬಿಗಿಬಂದೋಬಸ್ತ್
‎
‎ ಚಿಕ್ಕಮಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವೆಣೆಯ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯು ಹೈಕೋರ್ಟ್ ಆದೇಶದಂತೆ ಇಂದು (ಶನಿವಾರ) ಬೆಳಿಗ್ಗೆ ನಗರದ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜಿನಲ್ಲಿ ಆರಂಭವಾಗಲಿದೆ.
‎
‎ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಅವರು ಮುನ್ನೆಚ್ಚರಿಕಾ ಕ್ರಮವಾಗಿ ಮತ ಎಣಿಕೆ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ನಿರ್ಬಂಧಗಳನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.
‎
‎ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಕೇಂದ್ರದಿಂದ ಒಂದು ಕೀ.ಮೀ.ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
‎
‎ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ತಡೆಯಲು ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ ಹಾಗೂ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ
‎
‎ಜಿಲ್ಲಾಡಳಿತವು ಮುನ್ನೆಚ್ಚರಿಕಾ ಕ್ರಮವಾಗಿ ಮತ ಎಣಿಕೆ ಕೇಂದ್ರದ ಸಮೀಪವಿರುವ ಸೈಬರ್ ಕೆಫೆ ಹಾಗೂ ಝರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಇದರೊಂದಿಗೆ `ವಿಜಯೋತ್ಸವ ಆಚರಿಸುವುದು, ಘೋಷಣೆಗಳನ್ನು ಕೂಗುವುದು ಮತ್ತು ಧ್ವನಿವರ್ಧಕಗಳ ಬಳಕೆಗೆ ತಡೆ ನೀಡಲಾಗಿದ್ದು, ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ
‎
‎ಕೃತ್ಯಗಳ ಮೇಲೆ ಕಣ್ಣಿಡಲು ಸೈಬರ್ ವಿಭಾಗ ಮತ್ತು ಪೊಲೀಸರಿಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಅಹಿತಕರ ಘಟನೆಗಳು ಸಂಭವಿಸದಂತೆ ಇಡೀ ಪ್ರದೇಶದಲ್ಲಿ ಪೊಲೀಸ್ ಕಾವಲು ಹೆಚ್ಚಿಸಲಾಗಿದೆ.
‎
‎ಏನಿದು ಪ್ರಕರಣ ?
‎
‎ಶೃಂಗೇರಿ ಕ್ಷೇತ್ರದಲ್ಲಿ 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ಅವರನ್ನು 201 ಮತಗಳ ಅಂತರದಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಚಲಾವಣೆ ಆಗಿರುವ 2811 ಅಂಚೆ ಮತಗಳ ಪೈಕಿ 279 ಮತಗಳು
‎ತಿರಸ್ಕೃತಗೊಂಡಿದ್ದವು. ಇದಕ್ಕೆ ಸ್ಥಳದಲ್ಲೇ ಜೀವರಾಜ್ ಆಕ್ಷೇಪಿಸಿದ್ದರು. ಆದರೆ, ಚುನಾವಣಾಧಿಕಾರಿಗಳು ಕೇಳಲಿಲ್ಲ. ಮತಗಳ ಮರು ಪರಿಶೀಲನೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ 2023 ರ ಜೂನ್ 27 ರಂದು ಹೈಕೋರ್ಟಿನ ಮೆಟ್ಟಿಲು ಏರಿದ್ದರು.ಕ್ಷೇತ್ರದ ಮತಗಳ ಮರು ಪರಿಶೀಲನೆಗೆ ಹೈಕೋರ್ಟ್ -ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
‎
‎ನ್ಯಾಯಕ್ಕಾಗಿ ಹೋರಾಟ. 2023ರ ಚುನಾವಣಾ ವೇಳೆ ಅಂಚೆ ಮತಗಳ ಎಣಿಕೆಯನ್ನು ಮತಗಳಿಗಿಂತ ಮೊದಲೇ ಮಾಡಬೇಕಾಗಿತ್ತು, ಆದರೆ ನಿಯಮದಂತೆ ಮಾಡದೆ
‎ಐದು ಗಂಟೆ ನಂತರ ಎಣಿಕೆ ಮಾಡಲಾಗಿತ್ತು ಎಂದು ಜೀವರಾಜ್ ಆರೋಪಿಸಿದ್ದಾರೆ. ಆರಂಭದಲ್ಲಿ ತಾವು 40 ಮತಗಳ ಅಂತರದಿಂದ ಗೆದ್ದಿರುವುದಾಗಿ ತಿಳಿದುಬಂದಿತ್ತು. ಆದರೆ ನಂತರ ರಾಜೇಗೌಡ ಅವರು 151 ಮತಗಳಿಂದ ಗೆದ್ದಿದ್ದಾರೆ ಎಂದು ಘೋಷಿಸಲಾಯಿತು. ಮರು ಎಣಿಕೆಗಾಗಿ ನೀಡಿದ ಮನವಿಯನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರಿಂದ, ಸಂವಿಧಾನ ಬದ್ಧವಾಗಿ ನ್ಯಾಯ ಪಡೆಯಲು ಹೈಕೋರ್ಟ್ ಮೆಟ್ಟಿಲೇರಿದ್ದಾಗಿ ಅವರು ತಿಳಿಸಿದ್ದಾರೆ.
‎
‎ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ
‎
‎ಹಾಲಿ ಶಾಸಕ ರಾಜೇಗೌಡ ಪ್ರತಿಕ್ರಿಯೆ ನೀಡಿದ್ದು ಸುಳ್ಳು ಆರೋಪಗಳ ಹಿನ್ನೆಲೆಯಲ್ಲಿ ಹೋರಾಟ ನಡೆಸಬೇಕಾ ಯಿತು ಮತ್ತು ಈಗ ನ್ಯಾಯಾಲಯ ನೀಡುವ ನಿರ್ದೇಶನಕ್ಕೆ ತಾವು ಸದಾ ತಲೆಬಾಗುವುದಾಗಿ ಅವರು ತಿಳಿಸಿದ್ದಾರೆ. ಎದುರಾಳಿ ಅಭ್ಯರ್ಥಿ ಡಿ.ಎನ್. ಜೀವರಾಜ್ ತಮ್ಮ ಮೇಲೆ ಹೊರಿಸಿದ್ದ ಭ್ರಷ್ಟಾಚಾರ, ಅಕ್ರಮ ಆಸ್ತಿ ಮತ್ತು ಮಾಧ್ಯಮಗಳಿಗೆ ಲಂಚ ನೀಡಿದಂತಹ ಗಂಭೀರ ಆರೋಪಗಳನ್ನು ಹೈಕೋರ್ಟ್ ಈಗಲೇ ತಿರಸ್ಕರಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‎
‎ಮರು ಎಣಿಕೆಯ ನಂತರವೂ ಸತ್ಯಕ್ಕೆ ಜಯ ಸಿಗಲಿದೆ ಮತ್ತು ತಾವೇ ವಿಜಯಶಾಲಿಯಾಗಿ ಹೊರಬರುತ್ತೆವೆ ಎಂದು ರಾಜೇಗೌಡ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed