ಬ್ರಾಹ್ಮಣ ಮಹಾಸಭಾದಿಂದ ಹೋರಾಟ ರೂಪಿಸುವ ಎಚ್ಚರಿಕೆ…
1 min read
ಬ್ರಾಹ್ಮಣ ಮಹಾಸಭಾದಿಂದ ಹೋರಾಟ ರೂಪಿಸುವ ಎಚ್ಚರಿಕೆ
ಚಿಕ್ಕಮಗಳೂರು: ಸಿ.ಇ.ಟಿ. ಪರೀಕ್ಷಾರ್ಥಿಗಳ ಜನಿವಾರ ತೆಗೆಸಿ ಸಂಸ್ಕೃತಿಯ ಮೇಲೆ ಅಪಚಾರ ಎಸಗಿರುವ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಇಡೀ ಸಮುದಾಯವನ್ನು ಒಗ್ಗೂಡಿಸಿ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಗಮನ ಸೆಳೆದಿದೆ.
ಜಿಲ್ಲಾಧಿಕಾರಿ ಕಚೇರಿಯ ಅಧೀನ ಅಧಿಕಾರಿಗಳಿಗೆ ಗುರುವಾರ ಈ ಸಂಬಂಧ ಮನವಿ ಸಲ್ಲಿಸಿದ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಮತ್ತಿತರರು, ಸಿ.ಇ.ಟಿ. ಪರೀಕ್ಷಾರ್ಥಿಗಳ ಜನಿವಾರ ತೆಗೆಸಿರುವ ಅತಿರೇಕತನ ಕೆಇಎ ಅಧಿಕಾರಿಗಳಿಂದ ಮರುಕಳಿಸಿದ್ದು, ಬೆಂಗಳೂರಿನ ಮಡಿವಾಳದ ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸ ಪ್ರವೇಶಿಸುವ ಮುನ್ನ ಜನಿವಾರವನ್ನು ತೆಗೆಸಲಾಗಿದೆ. ಇದು ಅತ್ಯಂತ ಹೇಯ ಕೃತ್ಯವಾಗಿದ್ದು, ಈ ದೌರ್ಜನ್ಯವನ್ನು ನಮ್ಮ ಇಡೀ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷರಾದ ಕೆ.ಎ.ಗೋಪಿನಾಥ್, ನಿರ್ದೇಶಕರುಗಳಾದ ಎಂ.ಪುಂಡ-ರೀಕಾಕ್ಷ ಉಡುಪ, ಬಾಟಾ ನಾಗೇಂದ್ರ, ಶಶಿಕಲಾ ಶಿವಶಂಕರ್, ಕೆ.ಯು.ವಿನೀತ್‌ಕುಮಾರ್, ಹೆಚ್.ಎನ್.ಪ್ರಕಾಶ್, ನವೀನ್.ಮತ್ತಿತರರು ಹಾಜರಿದ್ದರು

