लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಸಮರ್ಪಕ ರಸ ಗೊಬ್ಬರ ವಿತರಣೆಗೆ ಆಗ್ರಹ*
‎ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆಯು ವ್ಯಾಪಕವಾಗಿ ಆಗುತ್ತಿದ್ದು, ರೈತರು ಮತ್ತು ಬೆಳೆಗಾರರು ಗೊಬ್ಬರ ಹಾಕುವ ತರಾತುರಿಯಲ್ಲಿದ್ದಾರೆ. ಆದರೆ ಗೊಬ್ಬರದ ಅಂಗಡಿಗಳಿಗೆ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯಿಂದ ಗೊಬ್ಬರ  ವಿತರಿಸದಂತೆ ಸೂಚಿಸಲಾಗಿದೆ ಎಂಬ ವದಂತಿ ಹರಡಿದ್ದು, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘ(ರಿ ), ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ತಿರುಮಲೇಶ್ ಅವರೊಂದಿಗೆ ಮಾತನಾಡಿದ್ದು, ಜಿಲ್ಲೆಯಲ್ಲಿ ಈಗಾಗಲೇ 50 ಲಕ್ಷ ಮೆಟ್ರಿಕ್ ಟನ್ ನಷ್ಟು ರಸಗೊಬ್ಬರವನ್ನು ದಾಸ್ತಾನಿಟ್ಟಿದ್ದು, ಬೆಳೆಗಾರರು, ರೈತರು ಆತಂಕವಿಲ್ಲದೆ ತಕ್ಷಣವೇ ರಸಗೊಬ್ಬರವನ್ನು ಖರೀದಿ ಮಾಡಲು ಅನುವು ಮಾಡಿಕೊಡುತ್ತೇವೆಂದು ಜಂಟಿ ನಿರ್ದೇಶಕರು ತಿಳಿಸಿರುವುದಾಗಿ ಜಿಲ್ಲಾ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿಮಹೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‎ ಮಲೆನಾಡು ಭಾಗಗಳಲ್ಲಿ ಗುಡ್ಡಗಾಡು ಪ್ರದೇಶದಲ್ಲಿರುವ ಕಾಫಿ ಬೆಳೆಗಾರರು ಮುಂಗಾರು ಮಳೆಯ ಮುಂಚಿತವಾಗಿ ತಮ್ಮ ಶೆಡ್ ಮತ್ತು ಗೋಡನ್ ಗಳಲ್ಲಿ ಗೊಬ್ಬರವನ್ನು ದಾಸ್ತಾನು ಇಡಬೇಕಾಗುತ್ತದೆ.  ಕಾರಣ ಮಳೆ ಹಿಡಿದ ನಂತರ ತಮ್ಮ ತೋಟಗಳಿಗೆ ವಾಹನಗಳಲ್ಲಿ ಗೊಬ್ಬರವನ್ನು ಸಾಗಾಟ ಮಾಡಲು ಸಾಧ್ಯವಾಗುವುದಿಲ್ಲ. ಎಕರೆಗೆ ಇಂತಿಷ್ಟು ಗೊಬ್ಬರವೆಂದು ನಿಗದಿಪಡಿಸಿದ್ದು ಸರಿಯಲ್ಲ. ಏಕೆಂದರೆ ಪಹಣಿ ಇರುವ ತೋಟಗಳನ್ನು ಹೊರತುಪಡಿಸಿ ಒತ್ತುವರಿ ಜಮೀನುಗಳು ಸಹ ಇರುವುದರಿಂದ ಗೊಬ್ಬರದ ವಿತರಣೆಯಲ್ಲಿ ನಿಯಮವನ್ನು ಸಡಿಲಿಕೆ ಮಾಡಿ ಬೆಳೆಗಾರರಿಗೆ ಸಾಕಾಗುವಷ್ಟು ಗೊಬ್ಬರವನ್ನು ವಿತರಿಸಬೇಕೆಂದು ಆಗ್ರಹಿಸಿದ್ದಾರೆ.
‎ ಯೂರಿಯಾ ಗೊಬ್ಬರ ಉತ್ಪಾದನೆ ಕುಂಠಿತಗೊಂಡಿದ್ದು,ಕಾರಣ ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಯೂರಿಯಾವನ್ನು ಬಳಸಲಾಗುತ್ತದೆ ಎಂಬ ಕಾರಣದಿಂದ ಯೂರಿಯ ಗೊಬ್ಬರಕ್ಕೆಇರುವ ಮಿತಿಯನ್ನು ಹೊರತುಪಡಿಸಿ ಇನ್ನುಳಿದ ಕಾಂಪ್ಲೆಕ್ಸ್ ಗೊಬ್ಬರಕ್ಕೆ ಯಾವುದೇ ಮಿತಿಯನ್ನು ನಿಗದಿಪಡಿಸದೆ ತಕ್ಷಣವೇ ರೈತರಿಗೆ ವಿತರಿಸಬೇಕೆಂದು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed