लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹೊಂದಿರಬೇಕು : ಶಾಸಕ ಹೆಚ್.ಡಿ. ತಮ್ಮಯ್ಯ….

1 min read

‎ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹೊಂದಿರಬೇಕು : ಶಾಸಕ ಹೆಚ್.ಡಿ. ತಮ್ಮಯ್ಯ.

‎

‎ಚಿಕ್ಕಮಗಳೂರು: ಜೀವನದಲ್ಲಿ ಗುರಿ ಹಾಗೂ ಅದನ್ನು ತಲುಪುವ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.
‎
‎ನಗರದ ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಬುಧವಾರ ನಡೆದ ಕಾಲೇಜಿನ 2025-26 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್. ಎಸ್.ಎಸ್., ಎನ್.ಸಿ.ಸಿ., ಯುವ ರೆಡ್ ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‎
‎ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನ ತಿಳಿದುಕೊಳ್ಳಬೇಕು. ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಗ್ರಂಥಾಲಯದಲ್ಲಿ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮೊಬೈಲ್ ಗಳನ್ನು ಒಳ್ಳೆಯದಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂದರು.
‎
‎ಶಿಕ್ಷಣ ಎಂದರೆ ಕೇವಲ ಜ್ಞಾನ ಪಡೆಯಲು, ರ್ಯಾಂಕ್ ಪಡೆಯಲು ಅಂದುಕೊಂಡಿದ್ದಾರೆ. ಆದರೆ, ಕಾಲೇಜು ಶಿಕ್ಷಣ ಎಂದರೆ ಅದು ಕೇವಲ ಪುಸ್ತಕದ ಜ್ಞಾನ ಅಲ್ಲ, ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಪ್ರಮುಖ ಹಂತವಾಗಿದೆ ಎಂದರು.
‎
‎ಸ್ನೇಹ ಮತ್ತು ಶಿಸ್ತು, ಹೊಣೆಗಾರಿಕೆ ಹಾಗೂ ಜೀವನದ ಮೌಲ್ಯವನ್ನು ಕಲಿಯುವಂತಹ ಸಂದರ್ಭ ಈ ಕಾಲೇಜ್ ದಿನಗಳು, ಇದಕ್ಕೆ ಸಹಕಾರ ನೀಡುವವರು ನಮ್ಮ ಪೋಷಕರು, ನಮ್ಮ ಉಪನ್ಯಾಸಕರು. ಅವರುಗಳು ನಮ್ಮ ಬದುಕಿಗೆ ದಾರಿ ದೀಪವಾಗಿರುತ್ತಾರೆ ಎಂಬುದನ್ನ ನಾವುಗಳು ಮರೆಯಬಾರದು ಎಂದು ಹೇಳಿದರು.
‎
‎ಉಪನ್ಯಾಸರು ನೀಡುವಂತ ಜ್ಞಾನ, ಮೌಲ್ಯಗಳು ನಿಮ್ಮ ಭವಿಷ್ಯವನ್ನು ಉತ್ತಮ ಸಹಾಯವಾಗುತ್ತದೆ. ಪಠ್ಯದ ಭವಿಷ್ಯನಾಗಿ ರೂಪಿಸಿಕೊಳ್ಳಲು
‎
‎ಜೊತೆ ಪತ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ದೈಹಿಕವಾಗಿ ಹಾಗೂ ಮಾನಸಿಕವಾಗಿ ಗಟ್ಟಿಯಾಗಲು ಈ ಚಟುವಟಿಕೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.
‎
‎ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ನಮ್ಮ ನಾಡು, ನುಡಿ, ಸಂಸ್ಕೃತಿ, ದೇಶ, ಇವೆಲ್ಲವನ್ನೂ ಉಳಿಸುವಂತಹ ಹಾಗೂ ಬೆಳೆಸುವಂತಹ ಜವಾಬ್ದಾರಿ ನಮ್ಮ ಮೇಲಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವು ದರಿಂದ ಮಾತ್ರ ಗೊತ್ತಾಗುತ್ತದೆ ಎಂದು ಹೇಳಿದರು.
‎
‎ಸಾಮಾನ್ಯರಾಗಿ ಹುಟ್ಟಿದವರು ದೃಢ ನಂಬಿಕೆಯಿಂದ, ಕಠಿಣ ಪರಿಶ್ರಮದಿಂದ ಅಸಾಮಾನ್ಯರಾಗಿದ್ದಾರೆ. ಅವರನ್ನು ನೋಡಿ ನಾವುಗಳು ಕೂಡ ಸಾಮಾನ್ಯರಿಂದ ಅಸಾಮಾನ್ಯರಾಗಬಹುದು. ಈ ಛಲ ನಿಮ್ಮಲ್ಲಿ ಮೂಡಬೇಕು ಎಂದ ಅವರು, ಸಣ್ಣ ಅವಕಾಶಗಳು ಮುಂದಿನ ಸಾಧನೆಗೆ ಮೆಟ್ಟಿಲು ಮಾಡಿಕೊಳ್ಳಬೇಕು. ಈ ಮಾತು ಸ್ವಾಮಿ ವಿವೇಕಾನಂದ ಅವರು ಹೇಳಿದ್ದಾರೆ ದೊಡ್ಡ ಅವಕಾಶಕ್ಕೆ ಕಾಯಬೇಡಿ ಎಂದು ಸ್ವಾಮಿ ವಿವೇಕಾನಂದರ ಮಾತನ್ನು ನೆನಪಿಸಿಕೊಂಡರು.
‎
‎ಗುರಿ ಇರಬೇಕು ಅದು ದೊಡ್ಡದಾಗಿರಬೇಕು. ಭವಿಷ್ಯವನ್ನು ರೂಪಿಸಬೇಕೆಂದು ನಿಮ್ಮ ತಂದೆ ತಾಯಿಯವರು ಕಷ್ಟಪಟ್ಟು ನಿಮ್ಮನ್ನು ಕಾಲೇಜಿಗೆ ಕಳುಹಿಸುತ್ತಿದ್ದಾರೆ ಎಂದು ಹೇಳಿದರು.
‎
‎ಐ.ಡಿ.ಎಸ್.ಜಿ. ಕಾಲೇಜಿನ ಪ್ರಾಂಶುಪಾಲರಾದ ತಸನಿಮ್ ಕೌಸರ್ ಮನಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ರಾಧಾ ಸುಂದರೇಶ್, ಭದ್ರೇಗೌಡ, ಆದೀಲ್, ಉಪನ್ಯಾಸಕರಾದ ಜಯಣ್ಣ, ಡಾ. ಲೋಕೇಶ್, ಗಿರೀಶ್, ಕಾಂತರಾಜ್ ಉಪಸ್ಥಿತರಿದ್ದರು. ಡಾ. ಪೂರ್ಣಿಮಾ ಹಾಗೂ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು. ಸುಧಾ ಅವರು ಪಾಸ್ತಾವಿಕವಾಗಿ ಮಾತನಾಡಿದರು.

About Author

Leave a Reply

Your email address will not be published. Required fields are marked *

You may have missed