लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಆಲ್ದೂರು ತೋಟಗಾರಿಕಾ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ನೂತನ ನಿರ್ದೇಶಕರುಗಳ ಸಭೆ….

1 min read

‎ಆಲ್ದೂರು ತೋಟಗಾರಿಕಾ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ನೂತನ ನಿರ್ದೇಶಕರುಗಳ ಸಭೆ
‎
‎ಕಂಪೆನಿಯ ವ್ಯವಹಾರಕ್ಕೆ ಸ್ಪಂದಿಸದಿರುವ ನಿರ್ದೇಶಕರುಗಳನ್ನು ವಜಾ ಗೊಳಿಸಲು ಸಭೆಯಲ್ಲಿ ನಿರ್ಧಾರ
‎
‎
‎
‎ಆಲ್ದೂರು: ಪಟ್ಟಣದ ಸಮೀಪದ ಆಲ್ದೂರು ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಕಾರ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾಗಿರುವ ಆಡಳಿತ ಮಂಡಳಿಯ ನಿರ್ದೇಶಕರುಗಳ ಸಭೆ  ಮಂಗಳವಾರ ನಡೆಯಿತು.
‎
‎ಸಭೆಯಲ್ಲಿ ಕಂಪನಿಯ ಗೊಬ್ಬರ ಖರೀದಿ, ಇನ್ನಿತರ ವ್ಯವಹಾರಗಳನ್ನು ನಡೆಸಲು ನಿರ್ದೇಶಕರುಗಳ ಸಹಿ ಖಾತೆ ಬದಲಾವಣೆಗೂ ಅವಶ್ಯಕತೆ ಇದ್ದು, ಇದರ ಕುರಿತು 4 ಬಾರಿ ಸಭೆ ಕರೆದರು ನಿರ್ದೇಶಕರುಗಳಾದ ಎಚ್‌ಟಿ ಗುರುನಾಥ್  ಹುಕ್ಕುಂದ, ಹೆಚ್ ಎಂ ನಾಗೇಶ್, ಸಿ ಎಸ್ ಬೈರೇಗೌಡ, ಸಭೆಗೆ ಹಾಜರಾಗದೆ ನಿರ್ಣಯ ಪುಸ್ತಕಕ್ಕೆ ಸಹಿ ಹಾಕದೆ ಹಾರೈಕೆ ಉತ್ತರಗಳನ್ನು ನೀಡುತ್ತಾ ಬಂದಿದ್ದು, ಈ ವಿದ್ಯಮಾನದಿಂದ ಕಂಪನಿಯ ಮೂಲಕ ರೈತರಿಗೆ ಪುನರ್ ಸೇವೆ ನೀಡಲು ಸಮಸ್ಯೆ ಉಂಟಾಗಿದೆ. ರೈತರಿಗೆ ದೊರೆಯುವ ಸಾಕಷ್ಟು ರಿಯಾಯಿತಿ ಸವಲತ್ತುಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.
‎ಇದರಿಂದ ಕಂಪನಿಯ ಷೇರುದಾರರಿಗೂ
‎ದ್ರೋಹವೆಸಗಿದ್ದಾರೆ. ಆದ್ದರಿಂದ ಮಂಗಳವಾರ ಕಂಪನಿಯ ನೂತನ ಅಧ್ಯಕ್ಷರಾದ ಎಎಚ್ ರುದ್ರೇಗೌಡರ ಅಧ್ಯಕ್ಷತೆಯಲ್ಲಿ
‎ಮತ್ತು ನೂತನ ಹೊಸ ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಕಂಪನಿಯ ಮೂಲಕ ವ್ಯಾಪಾರ ವ್ಯವಹಾರ ವಹಿವಾಟು ನಡೆಸಲು ತೊಡಕಾಗಿರುವ ಸಹಕಾರ ನೀಡದಿರುವ ಮೇಲಿನ ನಿರ್ದೇಶಕರುಗಳನ್ನು ಷೇರುದಾರರಿಗೂ ಸರ್ವಾನು ಮತದೊಂದಿಗೆ ಉಚ್ಛಾಟಿಸಲಾಗಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಂಪನಿಯ ಪದಾಧಿಕಾರಿಗಳು ಮಾಹಿತಿ ನೀಡಿದರು.
‎ಸಭೆಯಲ್ಲಿ ನಿರ್ದೇಶಕರುಗಳಾದ ಡಿಬಿ ಈಶ್ವರ್, ಎಸ್ ಟಿ, ನಾರಾಯಣ ಆಚಾರ್ಯ,
‎ಡಿ ಏನ್ ನಟೇಶ್, ಪಿಡಿ ಮನು, ಕೆಎಚ್ ಶಿವಕುಮಾರ್, ಡಿಆರ್ ರವೀಂದ್ರ, ಎಚ್‌ಜಿ ಗೋಪಾಲ್ ಗೌಡ, ಸಿಇಒ ಅಮಿತಾ ರಾಜೀವ್ ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed