ಬಿದರಹಳ್ಳಿ ದರ್ಗಾದಲ್ಲಿ ಏ. 28 ಉರೂಸ್….
1 min read
ಬಿದರಹಳ್ಳಿ ದರ್ಗಾದಲ್ಲಿ ಏ. 28 ಉರೂಸ್
ಮೂಡಿಗೆರೆ ತಾಲೂಕ್ ಬಿದರಹಳ್ಳಿ ಗ್ರಾಮದಲ್ಲಿರುವ ಸೈಯದ್ ಫಯಾಜ್ ಅಲಿಶಾ ಖಾದ್ರಿ ದರ್ಗಾದಲ್ಲಿ ಏ. 28 ರಂದು ಉರೂಸ್ ಕಾರ್ಯಕ್ರಮ ನಡೆಯಲಿದೆ. ಏ. 27 ರಂದು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ದರ್ಗಾ ಸಮಿತಿಯ ಅಧ್ಯಕ್ಷ ಅಬ್ರಾರ್ ಅಹಮದ್ ತಿಳಿಸಿದರು.
ಏ. 27ರಂದು ರಾತ್ರಿ 8 ಕ್ಕೆ ದರ್ಗಾ ಆವರಣದಲ್ಲಿ ಝಕ್ ಮಜ್ಜಿಸ್ ಕಾರ್ಯಕ್ರಮ ನಡೆಯಲಿದೆ. 28ರಂದು ಸಂಜೆ 4 ಕ್ಕೆ ಸಂದಲ್ ಮೆರವಣಿಗೆ ನಡೆಯಲಿದೆ. ಸಂಜೆ 7 ಕ್ಕೆ ದರ್ಗಾಕ್ಕೆ ಚಾದರ ಅರ್ಪಣೆ, ಸಂದಲ್, ದುವಾ, ಸಲಾಂ ಕಾರ್ಯಕ್ರಮ ನಡೆಯಲಿದೆ. ನಂತರ ರಾತ್ರಿ 9ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಧಾರ್ಮಿಕ ವಿದ್ವಾಂಸರಾದ ಮುಫ್ರಿ ಮುಹಮ್ಮದ್ ಅಝರ್ ಉದ್ದೀನ್ ಸಾಹೇಬ್, ಮುಹಮ್ಮದ್ ಮುಖೀಸ್ ರಝಾ, ಮಂಗಳೂರಿನ ಕಾಳಕಟ್ಟೆ ಹಜರತ್ ಮಹಮ್ಮದ್ ಫಾಝಿಲ್ ರಜ್ಜಿ, ಹಾಸನದ ಹಫೀಝ್ ಖಾರಿ ನಾಸೀರ್ ಹುಸೇನ್ ಸೇರಿದಂತೆ ಅನೇಕ ಧಾರ್ಮಿಕ ಪಂಡಿತರು ಭಾಗವಹಿಸಲಿದ್ದಾರೆ. ಚಿಕ್ಕಮಗಳೂರು, ಮಂಗಳೂರು, ಉಡುಪಿ, ಹಾಸನ, ಶಿವಮೊಗ್ಗ, ಕೊಡಗು, ಮೈಸೂರು, ಬೆಂಗಳೂರು ಸಹಿತ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ದರ್ಗಾದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಬಿದರಹಳ್ಳಿ ಸೈಯದ್ ಫಯಾಜ್ ಅಲಿಶಾ ಖಾದ್ರಿ ದರ್ಗಾದ ಆಡಳಿತ ಸಮಿತಿ ಪದಾಧಿಕಾರಿಗಳಾದ ಮಝರ್ ಆಸಿಫ್, ಅಬ್ದುಲ್ ಸತ್ತಾರ್, ಅಬ್ದುಲ್ ಮಜೀದ್, ಲೀಯಾಕತ್ತಾಲಿ ಇದ್ದರು.

