लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮೂಡಿಗೆರೆಯಲ್ಲಿ ಅಂಬೇಡ್ಕರ್ ಜಯಂತಿ: ಒಂದೇ ವೇದಿಕೆಯಲ್ಲಿ ಆಚರಣೆಗೆ ಒತ್ತಾಯ….

1 min read

‎ಮೂಡಿಗೆರೆಯಲ್ಲಿ ಅಂಬೇಡ್ಕರ್ ಜಯಂತಿ: ಒಂದೇ ವೇದಿಕೆಯಲ್ಲಿ ಆಚರಣೆಗೆ ಒತ್ತಾಯ
‎ಮೂಡಿಗೆರೆ, ಏ.22: ತಾಲೂಕಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ವಿಭಿನ್ನವಾಗಿ ಆಚರಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಒಂದೇ ವೇದಿಕೆಯಲ್ಲಿ ಸಂಯುಕ್ತವಾಗಿ ಆಚರಿಸಬೇಕೆಂದು ಚಲವಾದಿ ಮಹಾಸಭಾ ಒತ್ತಾಯಿಸಿದೆ.
‎ಮಾಹಿತಿಯ ಪ್ರಕಾರ, ಮೂಡಿಗೆರೆ ಪಟ್ಟಣದಲ್ಲಿ ಎರಡು ವಿಭಿನ್ನ ಸಮಿತಿಗಳು ಪ್ರತ್ಯೇಕ ದಿನಾಂಕಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲು ಮುಂದಾಗಿವೆ. ಒಂದು ಸಮಿತಿ ಏಪ್ರಿಲ್ 24 ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರೆ, ಮತ್ತೊಂದು ಸಮಿತಿ ಏಪ್ರಿಲ್ 27 ರಂದು ಆಚರಣೆಗೆ ತೀರ್ಮಾನಿಸಿದೆ.
‎ಈ ರೀತಿಯ ವಿಭಜಿತ ಆಚರಣೆಗಳಿಂದ ಸಮಾಜದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದ್ದು, ಇದು ಸಮುದಾಯದ ಏಕತೆಗೆ ಧಕ್ಕೆಯುಂಟುಮಾಡುತ್ತದೆ ಎಂದು ಮಹಾಸಭಾ ಆತಂಕ ವ್ಯಕ್ತಪಡಿಸಿದೆ.
‎ಈ ಹಿನ್ನೆಲೆಯಲ್ಲಿ ಎಲ್ಲಾ ಸಂಘಟನೆಗಳು ಮತ್ತು ಸಮುದಾಯದ ಮುಖಂಡರು ಒಂದಾಗಿ ಸೇರಿ, ಒಂದೇ ದಿನ ಒಂದೇ ವೇದಿಕೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುವ ಮೂಲಕ ಸಮಾಜದಲ್ಲಿ ಐಕ್ಯತೆ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಲಾಗಿದೆ.
‎ಚಲವಾದಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಬೆಟ್ಟಿಗೆರೆ ಮಂಜುನಾಥ್ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಸಮಾಜದ ಹಿತದೃಷ್ಟಿಯಿಂದ ಒಗ್ಗಟ್ಟಿನ ಆಚರಣೆಗೆ ಸಹಕಾರ ನೀಡುವಂತೆ ಕರೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed