….ನಿಧನ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಇಹ ಬದುಕಿಗೆ ವಿದಾಯ ಹೇಳಿ ಹೊರಟು ಹೋದ ದಿಣ್ಣೇಕೆರೆ ಪುಟ್ಟಮ್ಮ.
ನಿಧನವಾರ್ತೆ ಏ ೨೧: ವಸ್ತಾರೆ ಸಮೀಪದ ದಿಣ್ಣೇಕೆರೆ ಗ್ರಾಮದ ದಿವಂಗತ ಡಿ.ಐ.ಭದ್ರೆಗೌಡರ ಧರ್ಮಪತ್ನಿ ಪುಟ್ಟಮ್ಮನವರು ಇಂದು ಬೆಳಿಗ್ಗೆ ಘಂಟೆ 10:20ರ ಸಮಯದಲ್ಲಿ ನಿಧನರಾಗಿದ್ದಾರೆ.
ಮೃತ ಪುಟ್ಟಮ್ಮನವರು 90 ವರ್ಷಗಳ ಒಂದು ಸುಧೀರ್ಘವಾದ ತುಂಬು ಜೀವನವನ್ನು ನಡೆಸಿ, ಮನೆತನವನ್ನು ಕಟ್ಟಿ, ಒಂದು ತುಂಬು ಕುಟುಂಬದ ಹಿರಿಯ ಸೊಸೆಯಾಗಿ ಸಂಸಾರವನ್ನು ಸಮರ್ಥವಾಗಿ ನಿಭಾಯಿಸಿದ ಅವರ ವ್ಯಕ್ತಿತ್ವ ಇತರೆ ಕುಟುಂಬಗಳಿಗೆ ಮಾದರಿಯಾಗಿದೆ.
ಓದು ಬರಹವನ್ನು ಹೆಚ್ಚು ಕಲಿಯದಿದ್ದರೂ ಸಹ ಬದುಕಿನ ಅನುಭವವನ್ನು, ಸಂಸಾರದ ಜಾಣ್ಮೆಯನ್ನು ಜಾಣತನದೊಂದಿಗೆ ಧಕ್ಕಿಸಿಕೊಂಡಿದ್ದರು, ಹಾಗಾಗಿ ಇಡೀ 90 ವರ್ಷಗಳ ಅವರ ಬದುಕು ಒಂದು ಸಮಚಿತ್ತದ ನಡಿಗೆಯಾಗಿತ್ತು, ಅವರು ಆಡುತ್ತಿದ್ದ ಪ್ರತಿ ಮಾತುಗಳು ಹಳ್ಳಿಯ ಬದುಕಿನ ಕಳ್ಳು ಬಳ್ಳಿಯ ಅನ್ಯೂನ್ಯ ಸಂಬಂಧದಂತೆ ಆಪ್ತತೆಯಿಂದ ಕೂಡಿರುತ್ತಿದ್ದವು.
ಮೃತರು,ಡಿ ಬಿ ಈರಪ್ಪಗೌಡ. ಡಿ ಬಿ ಮಂಜುನಾಥ ಹಾಗೂ ಡಿ ಬಿ ಶಾಂತ ಎರಡು ಗಂಡು ಒಂದು ಹೆಣ್ಣು ಮಗಳು ಸೇರಿದಂತೆ, ಮೊಮ್ಮಕ್ಕಳು, ಮರಿಮಕ್ಕಳಾದಿಯಾಗಿ ದೊಡ್ಡ ಕುಟುಂಬ ವರ್ಗವನ್ನು ಬಿಟ್ಟು, ರೈತಾಪಿ ಬದುಕಿನೊಂದಿಗೆ ತುಂಬು ಜೀವನವನ್ನು ನಡೆಸಿ, ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಇಂದು ಸಂಜೆ ಘಂಟೆ 4:00ಕ್ಕೆ ಮೃತರ ಸ್ವ ಗ್ರಾಮ ದಿಣ್ಣೇಕೆರೆಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.
•••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

