ಆಲ್ದೂರು: ಸಮೀಪದ ಯಲಗುಡಿಗೆ ಗ್ರಾಮದ ಬಸವರಾಜ್ (56) ಅನಾರೋಗ್ಯದಿಂದ ನಿಧನರಾದರು.
ಬಸವರಾಜ್ ದಲಿತ ಸಂಘರ್ಷ ಸಮಿತಿ ಡಿಜಿ ಸಾಗರ್ ಬಣದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಹಲವು ದಶಕಗಳಿಂದ ಚಳುವಳಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದು, ಅವರಿಗೆ ಪತ್ನಿ, ಓರ್ವ ಪುತ್ರ ಪುತ್ರಿ ಇದ್ದಾರೆ.
ಅಂತ್ಯ ಸಂಸ್ಕಾರವನ್ನು ಸ್ವಗ್ರಾಮದಲ್ಲಿ ಸೋಮವಾರ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.