लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರಿ ಕಾಲೇಜುಗಳ ಫಲಿತಾಂಶದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ~ ಸಖರಾಯಪಟ್ಟಣ ಪದವಿ ಪೂರ್ವ ಕಾಲೇಜು….

1 min read

ಅವಿನ್ ಟಿವಿ ಸುದ್ದಿಜಾಲ ✍️: ಸರ್ಕಾರಿ ಕಾಲೇಜುಗಳ ಫಲಿತಾಂಶದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ~ ಸಖರಾಯಪಟ್ಟಣ ಪದವಿ ಪೂರ್ವ ಕಾಲೇಜು.

ಸಖರಾಯಪಟ್ಟಣ ಏ ೧೪: ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರುವುದಿಲ್ಲ ಎಂಬ ಸಮೂಹ ಸನ್ನಿಗೆ ಈ ಸಮಾಜ ಒಳಗಾಗಿ,ಈ ಕಾರಣ ದಿನದಿಂದ ದಿನಕ್ಕೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಮುಖವಾಗುತ್ತಿದೆ ಎಂಬ ನೆಪ ಹೇಳಿ ಶಾಲಾ ಕಾಲೇಜುಗಳ ಬಾಗಿಲನ್ನು ಮುಚ್ಚಿ, ಡಣ ಡಣ ಗಂಟೆ ಶಬ್ದ ಮಾಯವಾಗುತ್ತಿರುವ ಶಿಕ್ಷಣೋದ್ಯಮದ ಈ ಹೊತ್ತಿನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳನ್ನು ಉಳಿಸಿಕೊಳ್ಳುವುದೇ ಒಂದು ಸವಾಲಾಗಿದೆ, ಇಂತಹ ಈ ದಿನಮಾನದಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಕಡೂರು ತಾಲೂಕು ಸಖರಾಯಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಕಾಲೇಜುಗಳ ಮಟ್ಟದಲ್ಲಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದು ಪೋಷಕರ ಮತ್ತು ಜನಮನದ ಗಮನ ಸೆಳೆದಿದೆ.

ವಿಜ್ಞಾನ,ವಾಣಿಜ್ಯ ಮತ್ತು ಕಲಾವಿಭಾಗದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 85 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು ಅದರಲ್ಲಿ 82 ವಿದ್ಯಾರ್ಥಿಗಳು ಉತ್ತೀರ್ಣರಾಗಿ 97. 67 ಶೇಕಡವಾರು ಫಲಿತಾಂಶವನ್ನು ಪಡೆದುಕೊಂಡಿದೆ.

ವಾಣಿಜ್ಯ ವಿಭಾಗದಲ್ಲಿ ಪಿ. ಸಿಂಚನ 560 , ವಿಜ್ಞಾನ ವಿಭಾಗದಲ್ಲಿ ರುಚಿತ 548, ಕಲಾ ವಿಭಾಗದಲ್ಲಿ ಮನೋಜ್ 538 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಅತ್ಯುತ್ತಮ ಶ್ರೇಣಿಯಲ್ಲಿ ಶ್ರೇಣಿಯಲ್ಲಿ 15, ಪ್ರಥಮ ದರ್ಜೆ 54, ದ್ವಿತೀಯ ದರ್ಜೆಯಲ್ಲಿ 9. ತೃತೀಯ ದರ್ಜೆಯಲ್ಲಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಶೇಷವೆಂದರೆ ವಿಜ್ಞಾನ ವಿಭಾಗದಲ್ಲಿ ನೂರಕ್ಕೆ ನೂರು ಶೇಕಡವಾರು ಫಲಿತಾಂಶವನ್ನು ಪಡೆದ ಈ ಕಾಲೇಜು
ವಾಣಿಜ್ಯ ಭಾಗದಲ್ಲಿ 96.87 ಮತ್ತು ಕಲಾವಿಭಾಗದಲ್ಲಿ 93. 10 ಶೇಕಡವಾರು ಫಲಿತಾಂಶವನ್ನು ಪಡೆದಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಉಮಾ ಮಹೇಶ್ ತಿಳಿಸಿದ್ದಾರೆ, ಜೊತೆಗೆ ಇಂತಹ ಫಲಿತಾಂಶವನ್ನು ಹೊರತೆಗೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ, ಪರಿಣಾಮಕಾರಿಯಾಗಿ ಬೋಧನೆ ಮಾಡಿದ ಭೋದಕ ವರ್ಗಕ್ಕೆ ಸಹಕರಿಸಿದ ಪೋಷಕರಿಗೆ, ಆಸಕ್ತಿಯಿಂದ ಓದಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed