ಡಾ. ಬಿ. ಆರ್.ಅಂಬೇಡ್ಕರ್ ಇಡೀ ಮಾನವಕುಲಕ್ಕೆ ದಾರಿದೀಪ ವಾದ ವಿಶ್ವ ಮಾನವ.: ಡಾ. ಮೋಹನ್ ರಾಜಣ್ಣ….
1 min read
ಮೂಡಿಗೆರೆ:ಡಾ. ಬಿ. ಆರ್.ಅಂಬೇಡ್ಕರ್ ಇಡೀ ಮಾನವಕುಲಕ್ಕೆ ದಾರಿದೀಪ ವಾದ ವಿಶ್ವ ಮಾನವ.: ಡಾ. ಮೋಹನ್ ರಾಜಣ್ಣ.
ಮೂಡಿಗೆರೆ :ಡಾ. ಬಿ ಆರ್.ಅಂಬೇಡ್ಕರ್ ಅವರು ಕೇವಲ ಒಂದು ವರ್ಗ ದ ನಾಯಕರಾಗಿರಲಿಲ್ಲ. ಅವರು ಇಡೀ ಮಾನವ ಕುಲಕ್ಕೆ ದಾರಿ ದೀಪವಾದ ವಿಶ್ವ ಮಾನವ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಹೇಳಿದರು.
ಅವರು ಇಂದು ಗೋಣಿಬೀಡು ಶ್ರೀ ಪುಷ್ಪಗಿರಿ ಸದನದಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ಸಂಸ್ಥೆ ಯಿಂದ ಡಾ. ಬಿ ಆರ್ ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮ ಏರ್ಪಡಿಸಿದ್ದು ಭಾವಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು..
ಅವರ ಜೀವನ ವಿಚಾರ ದಾರೆ ಗಳಿಂದ ನಾವು ಇಂದಿನ ಕಾಲಕ್ಕೆ ಅಳವಡಿಸಿ ಕೊಳ್ಳ ಬೇಕಾದ ಪ್ರಮುಖ ಮಾನವೀಯ ಮೌಲ್ಯ ಗಳು ಎಂದರು.
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದ ಮೆನೇಜಿಂಗ್ ಟ್ರಸ್ತಿ ಶ್ರೀಮತಿ ಉಮಾ ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಮಹಿಳೆಯರಉದ್ದಾರ ವಿಲ್ಲದೆ ದೇಶ ಉದ್ದಾರ ಸಾಧ್ಯ ವಿಲ್ಲ ಎಂಬುದು ಅಂಬೇಡ್ಕರ್ ರವರ ದೃಢ ನಿಲುವಾಗಿತ್ತು. ಮಹಿಳೆಯರಿಗೆ ಆಸ್ತಿ ಹಕ್ಕು. ಶಿಕ್ಷಣ ಮತ್ತು ಕೆಲಸದ ಸ್ಥಳ ದಲ್ಲಿ ಸುರಕ್ಷತೆ ಗಾಗಿ ಅವರು ಅಂದೇ ದ್ವನಿ ಎತ್ತಿದ್ದರು. ಸಮಾಜ ದಲ್ಲಿ ಮಹಿಳೆಯರನ್ನು ಸಮಾನವಾಗಿ ಗೌರವಸುವುದು ಮತ್ತು ಅವರಿಗೆ ಸಮಾನ ಅವಕಾಶ ಗಳನ್ನು ನೀಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದರು..
ಕಾರ್ಯಕ್ರಮ ದಲ್ಲಿ ಗೌರವ ಟ್ರಸ್ತಿ ಸಿ ಸಿ ರಾಜಣ್ಣ. ಡಿಂಪಲ್. ಬಾಂಧವ್ಯ. ಅಶ್ವರ್ಯ. ಗಂಗಾಧರ್. ಬಾಂಧವ್ಯ.
ಪ್ರಸನ್ನ ಕುಮಾರ್. ಅಶ್ವಿನಿ. ಮಾನ್ಯ. ಮಿತುನ್ ಹಾಗೂ ಇತರರು ಭಾಗವಹಿಸಿ ದ್ದರು..

