लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕಣಿವೆ ಬಸಪ್ಪ” ನಿಗೆ ವಾರ್ಷಿಕ ಆರಾಧನ ಮಹೋತ್ಸವ…

ಆಲ್ದೂರು: ಸಮೀಪದ
ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಭಾಗದ ಕುದುರೆ ಗುಂಡಿಯ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಮಳೆ ದೇವರಂತೆ ಪ್ರಸಿದ್ಧಿಯಾದ ಕಣಿವೆ ಬಸವೇಶ್ವರ ದೇವರಿಗೆ ವಾರ್ಷಿಕ ಆರಾಧನಾ ಮಹೋತ್ಸವ ಇತ್ತೀಚಿಗೆ ನಡೆಯಿತು.

ಪ್ರಾತಃಕಾಲದಲ್ಲಿ ಬ್ರಹ್ಮ ಶರ್ಮ ಇವರ ನೇತೃತ್ವದಲ್ಲಿ ಹೋಮ ಹವನಾದಿಗಳು, ನಂತರ ಬಸವೇಶ್ವರ, ಮಾತೆ ಚೌಡೇಶ್ವರಿ ಗೆ ತೈಲಾ ಮಜ್ಜನ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಶತನಾಮಾವಳಿ ಹಾಗೂ ಅಲಂಕಾರ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಿಸಲಾಯಿತು.
ಯಲಗುಡಿಗೆ, ಕೊಲ್ಲಿ ಬೈಲು, ಮಾಡ್ಕಲ್ಲು, ಮೂಡಿಗೆರೆ, ಬೆಳಗುಳ, ಕೊಲ್ಲಿ ಬೈಲು, ಸುತ್ತಮುತ್ತಲಿನ ಸದ್ಭಕ್ತರು ಆಗಮಿಸಿದ್ದರು.

ಹಿನ್ನೆಲೆ: ಯಲಗುಡಿಗೆ ಗ್ರಾಮದ ಬಸವ ಮೇವನ್ನು ಅರಸಿ ಈ ಬೆಟ್ಟದ ಕೆಳಗಿನ ಭತ್ತದ ಗದ್ದೆಯ ಪೈರನ್ನು ತಿಂದು ಕೃಷಿಕರಿಗೆ ಉಪಟಳ ನೀಡುತ್ತಿತ್ತು. ಹೀಗೆ ತೊಂದರೆ ನೀಡುತ್ತಿದ್ದ ಬಸವ ಬೆಟ್ಟದಲ್ಲಿ ವಿಶ್ರಾಂತಿಯಲ್ಲಿದ್ದ ಬಸವ ನಿಗೆ ದಂಡಿಸಲು ಕೆಲ ರೈತರು ಮುಂದಾದಗ ಬೆಟ್ಟದ ಕೆಳಗಿನ ಮನೆಗಳು ಬೆಂಕಿ ಗಾಹುತಿ ಆದಂತೆ ಕಂಡುಬಂದು, ದಂಡಿಸುವವರು ಮನೆ ಯತ್ತ ತೆರಳಿ, ಪುನಃ ಬಂದು ಬೆಟ್ಟದ ಬಸವ ನನ್ನು ನೋಡಿದಾಗ ಮಲ್ಲಿಗೆ ಹೂವಿನ ರಾಶಿಯಾಗಿ ಕಂಡು ಬಂದು, ತದನಂತರ ಶಿಲೆಯ ಆಕಾರವಾಗಿ ದೈವಿ ಸ್ವರೂಪಿಯಾಗಿ ಕಂಡುಬಂದಿದೆ. ಹೀಗೆ ನೂರಾರು ವರ್ಷಗಳಿಂದ ಸುತ್ತಮುತ್ತಲಿನ ಕಾಫಿ ಬೆಳೆಗಾರರಿಗೆ, ರೈತರಿಗೆ ವರುಣದೇವನನ್ನು ಕರುಣಿಸಿ, ಎಲ್ಲರನ್ನು ರಕ್ಷಿಸುತ್ತಾ ಬರುತ್ತಿದ್ದಾರೆ.

About Author

Leave a Reply

Your email address will not be published. Required fields are marked *

You may have missed