लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಾಜ ದರ್ಬಾರಿನಂತೆ ಕಂಗೊಳಿಸುತ್ತಿದ್ದ ಮಂಟಪದಲ್ಲೊಂದು ಪ್ರೇಮ ವಿವಾಹ”….

1 min read

” ರಾಜ ದರ್ಬಾರಿನಂತೆ ಕಂಗೊಳಿಸುತ್ತಿದ್ದ ಮಂಟಪದಲ್ಲೊಂದು ಪ್ರೇಮ ವಿವಾಹ”
💞💞💞💞💞💞💞

ಬಹುಮುಖ ಪ್ರತಿಭಾವಂತರಾಗಿದ್ದ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ರಂತಹ ಮುಖ ಚಹರೆ ಹೊಂದಿರುವ ಬಹುಮುಖ ಪ್ರತಿಭೆ ಸಹೋದರ ಮಾಕೋನಹಳ್ಳಿ ಕೃಷ್ಣಕುಮಾರ್ ಏನ್.ಕೆ ಹಾಗೂ ಸಹೋದರಿ ಸುಮಲತಾ ಹೆಚ್.ಪಿ ಅವರ ಪ್ರೇಮ ವಿವಾಹವು ಮೂಡಿಗೆರೆ ಪಟ್ಟಣದ ಪ್ರೀತಮ್ ಕಲ್ಯಾಣ ಮಂಟಪದಲ್ಲಿ ಸಡಗರ ಸಂಭ್ರಮದಿಂದ ರಾಜ ದರ್ಬಾರಿನಂತೆ ಕಂಗೊಳಿಸುತ್ತಿದ್ದ ಮಂಟಪದಲ್ಲಿ ದಿನಾಂಕ.30.03.2026 ರ ಸೋಮವಾರ ನಡೆಯಿತು. ಶುಭ ಹಾರೈಸಲು ಬಂದವರೆಲ್ಲಾ ವೇದಿಕೆಯನ್ನು ಕಣ್ತುಂಬಿಕೊಂಡು ವಧು-ವರರನ್ನು ಹಾರೈಸಿದರು.

ತನ್ನ ಪ್ರೇಮ ವಿವಾಹದ ಬಗ್ಗೆ ಅನೇಕ ಕನಸುಗಳನ್ನು ಕಂಡಿದ್ದ ಸಹೋದರ ಕೃಷ್ಣಕುಮಾರ್ ಹಾಗೂ ಸಹೋದರಿ ಸುಮಲತಾ ಅವರ ಕನಸು ನನಸಾಗ ಸುದಿನ.
ಪ್ರತಿಯೊಬ್ಬ ಪ್ರೇಮಿಗೂ ತನ್ನ ಮದುವೆ ಆ ರೀತಿ ಇರಬೇಕು ಈ ರೀತಿ ಇರಬೇಕು ಎಂಬುವ ಹಲವಾರು ಬಯಕೆಗಳಿರುತ್ತಾವೆ. ಅದು ಅವರ ಸ್ವತಂತ್ರವೂ ಕೂಡ ಅದನ್ನು ಅಡ್ಡಿಪಡಿಸಲು ನಮಗಾರಿಗೂ ಸ್ವಾತಂತ್ರವಿಲ್ಲ. ಹದಿ ಹರೆಯದ ವಯಸ್ಕರಾಗಿದ್ದರೆ ತಿದ್ದಿ ಬುದ್ದಿ ಹೇಳಬಹುದಿತ್ತು ಆದರೆ ವಯಸ್ಕರಾಗಿರುವ ಪ್ರತಿಯೊಂದು ಹೆಣ್ಣು ಗಂಡು ಪ್ರೇಮ ವಿವಾಹವಾಗಲು ಸಂವಿಧಾನವೇ ಹಕ್ಕನ್ನು ಕೊಟ್ಟಿದೆ ಅದನ್ನು ಹರಣ ಮಾಡಲು ಯಾರಿಗೂ ಹಕ್ಕಿಲ್ಲ.

ಈ ಬಗ್ಗೆ ಚರ್ಚಿಸುವ ಮೊದಲು

ಬಹುಮುಖ ಪ್ರತಿಭಾವಂತರಾಗಿದ್ದ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ ಬಗ್ಗೆ ಒಂದೆರಡು ಸಾಲು 1971 ರಿಂದ 2015 ರವರೆಗೆ ಮೈಸೂರು ಅರಮನೆಯ ರಾಜರಾಗಿದ್ದ ಇವರು ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಹಿಂದಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಪಾಶ್ಚಿಮಾತ್ಯ ಸಂಗೀತದಲ್ಲಿಯೂ ಸ್ನಾತಕೋತ್ತರ ಪದವಿ ಗಳಿಸಿದ್ದರು ಮಾತ್ರವಲ್ಲದೆ ಕಾನೂನು ಪದವಿಯನ್ನು ಗಳಿಸಿದವರು ಇಷ್ಟು ಅಪಾರ ಜ್ಞಾನ ಸಂಪಾದನೆಯನ್ನು ಮಾಡಿಕೊಂಡಿದ್ದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿಯೂ ಕೆಳಕಾಲ ಕಾರ್ಯನಿರ್ವಹಿಸಿದವರು. ಇಂತಹ ಪ್ರತಿಭಾವಂತರು 1984,1989,1996, 1999, ರಲ್ಲಿ ಅಂದರೆ ಒಟ್ಟು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು ಅಷ್ಟು ಮಾತ್ರವಲ್ಲದೆ ಕ್ರಿಕೆಟ್ ಆಟದಲ್ಲಿ ಆಸಕ್ತಿ ಇದ್ದುದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪ್ರತಿನಿಧಿಸಿದ್ದರು. ಇಂತಹ ಪ್ರತಿಭಾವಂತ ಮಹಾರಾಜರ ಮುಖ ಚಹರೆಯನ್ನು ಹೊಂದಿರುವ ಕೃಷ್ಣಕುಮಾರ್ ಸಹ ಬಹುಮುಖ ಪ್ರತಿಭಾವಂತನೆ. ಮೂಡಿಗೆರೆಯ ಪಟ್ಟಣದಲ್ಲಿ ಎರಡನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿದ ಚೇತನ್ ಅಹಿಂಸಾ ರವರ ಛಾಯಾಚಿತ್ರವನ್ನು ಸ್ವತಹ ಕೃಷ್ಣಕುಮಾರ್ ಬರೆದು ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದ ನನ್ನ ಗಮನಕ್ಕೆ ತಂದ ತಕ್ಷಣ ನೆರೆದಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ವೇದಿಕೆಗೆ ಕಲಾವಿದ ಕೃಷ್ಣ ಕುಮಾರ್ ನನ್ನು ಆಹ್ವಾನಿಸಿ ಮುಖ್ಯ ಅತಿಥಿ ಚೇತನ್ ಅಹಿಂಸಾ ಅವರಿಗೆ ವೇದಿಕೆಯಲ್ಲಿ ನೀಡಿದ್ದು ಕೃಷ್ಣಕುಮಾರ್ ಅವರ ಪ್ರತಿಭೆಗೆ ಸಂದ ದೊಡ್ಡ ಗೌರವ. ಕಾರ್ಯಕ್ರಮಕ್ಕೆ ಆಗಮಿಸಿದ ಚೇತನ್ ಅಹಿಂಸಾ ಚಿಕ್ಕಮಗಳೂರಿನಲ್ಲಿ ತಂಗಿದ್ದು ಮರುದಿನ ನನ್ನ ಹಾಗೂ ಹಳೇ ಮೂಡಿಗೆರೆಯ ಬಿ.ರುದ್ರಯ್ಯ ಸಾರ್ ಅವರೊಂದಿಗೆ ಒಂದಿಷ್ಟು ಹೊತ್ತು ಚರ್ಚಿಸಲು ಆಹ್ವಾನಿಸಿದ ಸಂದರ್ಭದಲ್ಲಿ ಇಂದಿನ ದಿನ ಕಾರ್ಯಕ್ರಮದ ವೇದಿಕೆಯಲ್ಲಿ ಸಹೋದರ ಕೃಷ್ಣಕುಮಾರ್ ಕೈಚಳಕದಿಂದ ಮೂಡಿ ಬಂದ ತನ್ನ ಚಿತ್ರದ ಬಗ್ಗೆ ಸಂತಸದಿಂದ ಚೇತನ್ ಮಾತನಾಡುತ್ತಾ ಇಂತಹ ಅಪರೂಪದ ಚಿತ್ರವನ್ನು ಬರೆದ ಕಲಾವಿದನಿಗೆ ಅಲ್ಲಿಯೂ ಸಹ ಧನ್ಯವಾದಗಳು ತಿಳಿಸಿದ್ದು ಈ ತಾಲ್ಲೂಕಿಗೆ ತಂದ ಕೀರ್ತಿಯೇ ಸರಿ. ಇಂತಹ ಬಹುಮುಖ ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ..

ಮತ್ತೆ ವಿಷಯಕ್ಕೆ ಬರೋಣ ಯಾಕೆ? ಈ ಹೊತ್ತಿನಲ್ಲಿ ಪ್ರೇಮ ವಿವಾಹದ ಬಗ್ಗೆ ಬರೆಯಬೇಕಾಯಿತು ಎಂದರೆ ಮದುವೆ ಎಂಬುದು ಭಾವನೆಗಳಿಗೆ ಸಂಬಂಧಿಸಿದ ವಿಷಯ ಪ್ರತಿಯೊಂದು ಜೀವಿಗೂ ಬದುಕಲು ತನ್ನದೇ ಆದ ಸ್ವಾತಂತ್ರವಿದೆ ಆಹಾರ , ನಿದ್ರೆ, ವಿಸರ್ಜನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸಂಗಾತಿಯೊಂದಿಗಿನ ಸಹಬಾಳ್ವೆ ಎಂಬ ದೈಹಿಕ ಬಂಧನ. ಪ್ರತಿಯೊಂದು ಜೀವಿಯಲ್ಲಿಯೂ ನಡೆಯುವ ಸಹಜ ಪ್ರಕ್ರಿಯೆಯಂತೆ ಮನುಷ್ಯನಲ್ಲಿಯೂ ವಯಸ್ಸಿನಲ್ಲಿ ನಡೆಯುವ ಸಹಜ ಪ್ರಕ್ರಿಯೆ ಅಷ್ಟೇ. ಆದರೆ ಮನುಷ್ಯನಲ್ಲಿ ಹದಿಹರೆಯದ ವಯಸ್ಸಿನಲ್ಲಿ ಬಯಕೆಗಳು ಅಂಕುರಿಸುತ್ತಾವೆ. ಸಂಗತಿಯ ಹುಡುಕಾಟದಲ್ಲಿ ಮನಸ್ಸು ಹತೋರೆಯುತ್ತಿರುತ್ತದೆ, ಆ ವೇಳೆಯಲ್ಲಿ ಜಾತಿ ಮತ ಆಸ್ತಿ ಅಂತಸ್ತು ವಯಸ್ಸು ಯಾವುದು ಮುಖ್ಯವಾಗುವುದಿಲ್ಲ ಭಾವನೆಗಳ ಆಕರ್ಷಣೆಗಳು ಮುಖ್ಯವಾಗುತ್ತದೆ ಇದರ ಬಗ್ಗೆ ಅನೇಕ ಕಾದಂಬರಿಗಳು ಬಂದಿವೆ ಅನೇಕ ಸಿನಿಮಾಗಳು ಬಂದಿವೆ ಬರುತ್ತಿವೆ ಇದರ ಬಗ್ಗೆ ಚರ್ಚೆ ಸಾಕು ಎನಿಸುತ್ತಿದೆ.

ಪ್ರೀತಿ ಮಾಡುವ ಮನಸುಗಳಿಗೆ ಧರ್ಮದ ಹಂಗಿಲ್ಲ ಅದು ಮುಸ್ಲಿಮ್ ಆಗಿರಲಿ, ಹಿಂದೂ ಆಗಿರಲಿ, ಕ್ರಿಶ್ಚಿಯನ್, ಬೌದ್ಧ, ಪಾರಸಿ, ಯಹೂದಿ, ಜೈನ, ಸಿಖ್ ಯಾವುದೇ ಧರ್ಮ ಯಾವುದೇ ಸಿದ್ದ ಮಾದರಿಯ ಜಾತಿ ಆಗಿರಲಿ ಆ ವಯಸ್ಸಿನಲ್ಲಿ ಅದಾವುದು ಗಣನೆಗೆ ಬರುವುದೇ ಇಲ್ಲ ಅಲ್ಲಿ ಭಾವನೆಗಳೇ ಮುಖ್ಯ..

ಒಬ್ಬ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾದ ತಕ್ಷಣ “ಲವ್ ಜಿಹಾದ್” ಎಂದು ಬೊಬ್ಬೆ ಹಾಕುವ,

ಸಿದ್ಧ ಮಾದರಿಯ ಜಾತಿ ವ್ಯವಸ್ಥೆಗೆ ಬಲಿಯಾಗಿ ತಾನೇ ಹೆತ್ತು ಹೊತ್ತು ಸಾಕಿದ ಬಾಲ್ಯದಲ್ಲಿ ಎಂತದ್ದೇ ತಪ್ಪು ಮಾಡಿದಾಗಲೂ ಒಂದೇ ಒಂದು ಏಟನ್ನು ಹೊಡೆಯದೇ ಬೆಳೆಸಿದ ತಂದೆಯೇ ತನ್ನ ಮುದ್ದಿನ ಮಗಳು ಬೇರೆ ಜಾತಿಯವನನ್ನು ಮದುವೆಯಾದಳು ಎಂಬ ಒಂದೇ ಕಾರಣಕ್ಕಾಗಿ ಹೆತ್ತ ಮಗಳನ್ನೇ ಅಮಾನುಷವಾಗಿ ಕೊಲ್ಲುವ ಮರ್ಯಾದೆ ಹತ್ಯೆ ಎಂತಹ ಜೀವ ವಿರೋಧಿ.

ಪ್ರೇಮ ವಿವಾಹ ಎಂಬಾ ಪವಿತ್ರ ಬಂಧನಕ್ಕೆ ಜಾತಿ ಧರ್ಮವನ್ನೆಕೆ ಬೆರೆಸುತ್ತಿದ್ದೀರಿ?
ಅವರನ್ನು ಸ್ವತಂತ್ರವಾಗಿ ಬದುಕಲು ಬಿಡಿ. ಅಷ್ಟೇ……

ಕರಾವಳಿಯ ಭಾಗದಲ್ಲಿ ಕೋಮು ಗಲಭೆಯನ್ನು ಸೃಷ್ಟಿಸುತ್ತಿರುವ
“ಲವ್ ಜಿಹಾದ್ ” ಎಂಬ ರೋಗ ಮಲೆನಾಡಿನ ಮೂಡಿಗೆರೆಗೆ ಬಾರದಿರಲಿ.

ಉತ್ತರ ಕರ್ನಾಟಕದಲ್ಲಿ ಬಹುಪಾಲು ನಡೆಯುತ್ತಿರುವ “ಮರ್ಯಾದೆ ಹತ್ಯೆ” ಎಂಬಾ ಅಮಾನುಷ ಆಚರಣೆ ಮಲೆನಾಡಿನ ಮೂಡಿಗೆರೆಗೆ ಬಾರದಿರಲಿ,

ದಲಿತ ಜನಾಂಗದ ಮದುಮಗ ಕುದುರೆಯ ಮೇಲೆ ಸವಾರಿ ಮಾಡಿದ್ದಕ್ಕೆ ಥಳಿಸುವ ಹಾಗೂ ಮೀಸೆ ಬಿಟ್ಟಿದ್ದಕ್ಕೆ ಥಳಿಸುವ ಹಾಗೂ ಕೈಗೆ ವಾಚನ್ನು ಕಟ್ಟಿದ್ದಕ್ಕೆ ಅಮಾನುಷವಾಗಿ ಹಲ್ಲೆ ಮಾಡುವ ಜೀವ ವಿರೋಧಿ ಸಂಸ್ಕೃತಿ ಮಲೆನಾಡಿನ ಮೂಡಿಗೆರೆಗೆ ಬಾರದಿರಲಿ,

ಭಾರತದ ಸಂವಿಧಾನ ಮೂಲಭೂತ ಹಕ್ಕುಗಳಲ್ಲಿ ಧಾರ್ಮಿಕ ಸ್ವಾತಂತ್ರದ ಬಗ್ಗೆ ವಿವರವಾಗಿ ತಿಳಿಸಿದೆ ದಯವಿಟ್ಟು ಸಂವಿಧಾನವನ್ನು ಗೌರವಿಸಿ ಹಾಗೂ ಅನುಸರಿಸಿ.

ಕರಾವಳಿಯ ಭಾಗದಲ್ಲಿ ನಡೆಯುತ್ತಿರುವ ಕೋಮು ಗಲಭೆಯ ರೋಗ ಶಾಂತಿ ಸೌಹಾರ್ದತೆಯ ತಾಲ್ಲೂಕಾಗಿರುವ ಮೂಡಿಗೆರೆಗೆ ಬಾರದಿರಲಿ, ಈ ತಾಲ್ಲೂಕಿಗೆ ಚಾರಿತ್ರಿಕವಾಗಿ ದೊಡ್ಡ ಪರಂಪರೆ ಅನೇಕ ಜೀವನದಿಗಳು ಹುಟ್ಟುವ ಮಾತೃಭೂಮಿ. ಅಷ್ಟು ಮಾತ್ರವಲ್ಲ, ಅನೇಕ ಜೀವಸಂಕುಲಗಳಿಗೆ ಆಶ್ರಯ ನೀಡಿದೆ ಹಾಗೂ ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ರಾಜಕೀಯವಾಗಿ ಶಾಂತಿ ಸೌಹಾರ್ದತೆಯಿಂದ ಪರಸ್ಪರ ಸಹೋದರರಂತೆ ಬದುಕುತ್ತಿರುವ ಮೂಡಿಗೆರೆ ತಾಲ್ಲೂಕಿನ ಯುವಕರ ತಲೆಯಲ್ಲಿ “ಲವ್ ಜಿಹಾದ್” ಎಂಬಾ ವಿಷ ಬೀಜವನ್ನು ಬಿತ್ತಿ ಮತ್ತೊಂದು ಕರಾವಳಿ ಮಾಡದಿರಿ, ಅನೇಕ ಪ್ರವಾಸಿ ತಾಣಗಳಿಗೆ ಹೆಸರಾಗಿರುವ ಈ ತಾಲ್ಲೂಕು ನಾಡಿನ ಗಮನಸೆಳೆದ ಸೌಹಾರ್ದತೆಯ ತಾಣವಾಗಿದೆ… ಪೂರ್ಣಚಂದ್ರ ತೇಜಸ್ವಿ ಯಂತಹ ಚಿಂತಕರ ಸಾಹಿತ್ಯ ಪರಂಪರೆ ಇದೆ… ಸಾಕಷ್ಟು ಪ್ರಾಕೃತಿಕ ಸಂಪತ್ತಿರುವ ತಾಲ್ಲೂಕಿನಲ್ಲಿ ಕೋಮುಗಲಭೆ ಸೃಷ್ಟಿಸಿ ಯುವಕರ ಮನಸ್ಥಿತಿಯನ್ನು ಹಾಳು ಮಾಡದೆ ಯುವಕರಲ್ಲಿ ಶಾಂತಿ ಸೌಹಾರ್ದತೆಯನ್ನು ಮೂಡಿಸೋಣ ಮೂಡಿಗೆರೆ ತಾಲ್ಲೂಕನ್ನು ದೇಶಕ್ಕೆ ಮಾದರಿಯಾಗಿಸೋಣ ….. ಪ್ರೀತಿಯ ಗೆಳೆಯರೇ,
🌹🌹🌹🌹🌹🌹🌹
🤝🤝🤝🤝🤝🤝🤝
ಮನುಜ ಮತ, ವಿಶ್ವಪಥ,ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿಯಿಂದ ಸಾಗೋಣ..
ಇಂತಿ ನಿಮ್ಮ ಪ್ರೀತಿಯ ಗೆಳೆಯ
ಡಾ. ಹರೀಶ್ ನಲ್ಕೆ….
🌹🌹🌹🌹🌹🌹🌹

About Author

Leave a Reply

Your email address will not be published. Required fields are marked *

You may have missed