लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಾಳೆ ತರೀಕೆರೆಯಲ್ಲಿ AI ತಂತ್ರಜ್ಞಾನವನ್ನು ಕುರಿತು ನವಮಾಧ್ಯಮಗಳ ತರಬೇತಿ ಶಿಬಿರ ಮತ್ತು ವಿಷಯ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ….

1 min read

ಅವಿನ್ ಟಿವಿ ಸುದ್ದಿಜಾಲ ✍️: ನಾಳೆ ತರೀಕೆರೆಯಲ್ಲಿ AI ತಂತ್ರಜ್ಞಾನವನ್ನು ಕುರಿತು ನವಮಾಧ್ಯಮಗಳ ತರಬೇತಿ ಶಿಬಿರ ಮತ್ತು ವಿಷಯ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ.

ಚಿಕ್ಕಮಗಳೂರು ಮಾ ೨೯: ವಿಜ್ಞಾನ ಮತ್ತು ನವ ತಾಂತ್ರಿಕತೆಯು ದಿನದಿಂದ ದಿನಕ್ಕೆ ಹೊಸತನದೊಂದಿಗೆ ಬದಲಾಗುತ್ತಾ ಹೋಗುತ್ತಿದೆ, ಹೀಗೆ ಬದಲಾಗುತ್ತಿರುವ ಕಾಲಘಟ್ಟದೊಳಗೆ ವಿಜ್ಞಾನದ ವೇಗಕ್ಕೆ ನಾವು ಜೊತೆಗೂಡಿ ಹೆಜ್ಜೆ ಹಾಕದಿದ್ದರೆ,ಸ್ಪರ್ಧೆಗೆ ಇಳಿಯದಿದ್ದರೆ ಅಥವಾ ನಮ್ಮನ್ನು ನಾವು ಹೊಸ ಹೊಸ ತಾಂತ್ರಿಕತೆಯೊಂದಿಗೆ ಮೇಲ್ದರ್ಜೆಗೆ ಏರಿಸಿಕೊಳ್ಳುದಿದ್ದರೆ ಇದರ ಲಾಭ ಮತ್ತು ನಷ್ಟಗಳೇನು ಎಂಬ ಪ್ರಶ್ನೆಯ ಅನಿವಾರ್ಯತೆ ಈಗ ಜಗತ್ತಿನ ಎದುರಿಗೆ ಬಂದು ನಿಂತಿದೆ.

ಇಂತಹ ಸಂದರ್ಭದಲ್ಲಿ ಜನಸಾಮಾನ್ಯರು ಮಾತ್ರವಲ್ಲ ಶಿಕ್ಷಣವಂತರು ಕೂಡ ದ್ವಂದ್ವದ ಸ್ಥಿತಿಯಲ್ಲಿ ಸಿಲುಕಿದ್ದಾರೆ, ಎ ಐ ಕುರಿತು ನಿರುದ್ಯೋಗದ ಭಯ ಭವಿಷ್ಯದಲ್ಲಿ ಎದುರಾಗುತ್ತದೆ ಎಂಬ ಚರ್ಚೆ ಆರಂಭವಾಗಿದೆ, ನಿರುದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಪೂರ್ಣ ಸತ್ಯವಲ್ಲ ಎಂಬ ವಾದ ಇನ್ನೊಂದು ಕಡೆ ಬೆಳೆಯುತ್ತಿದೆ.

ಈ ನಿಟ್ಟಿನಲ್ಲಿ ಕೃತಕ ಬುದ್ಧಿ ಮತ್ತೆ ಎಂಬ ಎ ಐ ತಂತ್ರಜ್ಞಾನವು ಉದ್ಯೋಗವನ್ನು ನಾಶ ಮಾಡುತ್ತದೆಯೋ ? ಅಥವಾ ಉದ್ಯೋಗದ ಸ್ವರೂಪವನ್ನು ಬದಲಾಯಿಸುತ್ತದಯೋ ?ಮನುಷ್ಯ ಮನುಷ್ಯನೊಂದಿಗೆ ಸಂವಾದ ಮಾಡುವುದಕ್ಕೂ, ಯಂತ್ರ ಮನುಷ್ಯನೊಡನೆ ಸಂವಾದ ಮಾಡುವುದಕ್ಕೂ ಇರುವ ವ್ಯತ್ಯಾಸ ಮತ್ತು ಪರಿಣಾಮಗಳು ಏನು ? ಹೇಗೆ? ಎತ್ತ? ಎಂಬುದನ್ನು ಕುರಿತು ವಿಷಯ ತಜ್ಞರು ನಾಳೆ ಶಿಬಿರದಲ್ಲಿ ತರಬೇತಿ ನೀಡಿ ಶಿಬಿರಾರ್ಥಿಗಳ ಜೊತೆ ಅವರ ಅನುಮಾನಗಳಿಗೆ ಪ್ರಶ್ನೆಗಳಿಗೆ ಉತ್ತರಿಸಿ ಸಂವಾದ ಮಾಡಲಿದ್ದಾರೆ.

ಚಿಕ್ಕಮಗಳೂರಿನ ಹೊನ್ನ ಬಿತ್ತೇವು ಹೊಲಕೆಲ್ಲ ಬಳಗ ಮತ್ತು ನ್ಯೂಸ್ ಕಿಂಗ್ ಸುದ್ದಿ ವಾಹಿನಿ ಹಾಗೂ ತರೀಕೆರೆಯ ಗ್ಲಾಸಿ ಕಿಡ್ಸ್ ಸದ್ವಿಧ್ಯಾ ಪಬ್ಲಿಕ್ ಸ್ಕೂಲ್ ಸಂಘಟನೆಗಳ ಆಶ್ರಯದಲ್ಲಿ *ನಾಳೆ ಅಂದರೆ 30 ಮಾರ್ಚ್ 2026ರ ಸೋಮವಾರ ಬೆಳಿಗ್ಗೆ ಘಂಟೆ 10:30ರಿಂದ ತರೀಕೆರೆಯ ಗಾಳಿಹಳ್ಳಿ ಕ್ರಾಸ್ ನಲ್ಲಿರುವ ಗ್ಲಾಸಿ ಕಿಡ್ಸ್ ಸದ್ವಿಧ್ಯಾ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ* ಆರಂಭವಾಗಲಿರುವ ಈ ಒಂದು ದಿನದ ತರಬೇತಿ ಶಿಬಿರಕ್ಕೆ ತರೀಕೆರೆ ತಾಲೂಕಿನ ಆಸಕ್ತರು ಭಾಗವಹಿಸಬಹುದಾಗಿದೆ.

ವಿದ್ಯಾರ್ಥಿಗಳು, ಪೋಷಕರು ಮತ್ತು ಇತರೆ ಸಮಾಜಮುಖಿ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಗಳು, ಮಾಧ್ಯಮದವರು ತರಬೇತಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ಆಯೋಜಕರು ಕೋರಿದ್ದಾರೆ.

ಯಾವುದೇ ನೋಂದಣಿ ಶುಲ್ಕವಿಲ್ಲದೆ ಉಚಿತವಾಗಿ ನಡೆಯಲಿರುವ ಈ ಶಿಬಿರದಲ್ಲಿ ಸುಮಾರು 90 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಈಗಾಗಲೇ ಹಲವರು ನೊಂದಣಿ ಮಾಡಿಕೊಂಡಿದ್ದಾರೆ, ಇನ್ನು ಕೆಲವೇ ಜನರಿಗೆ ಮಾತ್ರ ಅವಕಾಶವಿದೆ, ಆಸಕ್ತರು ಈ ಕೆಳಕಂಡ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಿ ನೊಂದಾವಣಿ ಮಾಡಿಕೊಂಡು ಭಾಗವಹಿಸಬಹುದಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಸಂಪರ್ಕಕ್ಕಾಗಿ….
*ಎನ್.ರಾಜು.*
7619521477

*ಮನಸುಳಿ ಮೋಹನ್*
9980113639

*ಡಿ.ಆರ್. ಹರ್ಷಿಣಿ*
9945101461

*ಡಿ.ಎಂ.ಮಂಜುನಾಥಸ್ವಾಮಿ* 9019697655
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed