लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

” ಗುಲಾಮರಂತೆ ಖರೀದಿಸಿ ಲಾಭ ಗಳಿಸುವ ಬಂಡವಾಳಿಗರ ಆಟವೇ IPL”
🏏🏏🏏🏏🏏🏏🏏

ಕ್ರಿಕೆಟ್ ಒಂದು ಆಟವಾಗಿ ಉಳಿದಿಲ್ಲ ಅದೊಂದು ದೊಡ್ಡ ಬಂಡವಾಳಿಗರ ಉದ್ಯಾಮವಾಗಿದೆ. ಹಿಂದೆ ಆಫ್ರಿಕ ದೇಶಗಳಲ್ಲಿ ಹಣಕ್ಕೆ ಗುಲಾಮರನ್ನು ಮಾರಾಟ ಮಾಡುತ್ತಿದ್ದರು. ತದನಂತರ ಅವರಿಂದ ದುಡಿಸಿಕೊಂಡು ಲಾಭವನ್ನು ಗಳಿಸುತ್ತಿದ್ದರು. ಅಂತಹ ನೀತಿ ಈಗ ಕ್ರಿಕೆಟ್ ಆಟಕ್ಕೆ ಬಂದೊದಗಿದೆ ಆಧುನಿಕ ಗುಲಾಮಗಿರಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದೆ. ಕೋಟಿ ಕೋಟಿ ಬಂಡವಾಳ ಹೂಡಿ ಆಟಗಾರರನ್ನು ಖರೀದಿಸುವುದು ಅವರಿಂದ ಒಪ್ಪಂದ ಮಾಡಿಕೊಂಡು ಆಡಿಸುವ ಆಟವೇ ಐಪಿಎಲ್..

ಇಂಗ್ಲೆಂಡ್ ದೇಶವು ಪ್ರಪಂಚದ ವಿವಿಧ ದೇಶಗಳಲ್ಲಿ ವಸಾಹತುಶಾಹಿ ಸ್ಥಾಪಿಸುವ ಜೊತೆಗೆ ಕ್ರಿಕೆಟ್ ಎಂಬ ಕ್ರೀಡೆಯನ್ನು ಜಗತ್ತಿಗೆ ಪರಿಚಯಿಸಿತು ಇಂಗ್ಲೆಂಡ್ ದೇಶದ ವಸಾಹತುಶಾಹಿ ಒಪ್ಪಿಕೊಂಡ ಹಾಗೂ ವಸಾಹತುಶಾಹಿ ನೀತಿಗೆ ಒಳಗಾಗಿದ್ದ ಅನೇಕ ದೇಶಗಳು ಕ್ರಿಕೆಟ್ ಎಂಬ ಮೂರ್ಖರ ಆಟವನ್ನು ಆಡಲು ಪ್ರಾರಂಭಿಸಿದವು ಅದು ಇಂದು ಜಾರಿಯಲ್ಲಿದೆ ಆದರೆ ಇಂಗ್ಲೆಂಡ್ ದೇಶದ ವಸಾಹತುಶಾಹಿ ಆಳ್ವಿಕೆಗೆ ಸಂಪೂರ್ಣವಾಗಿ ಒಳಗಾಗದ ಅನೇಕ ದೇಶಗಳು ಕ್ರಿಕೆಟ್ ಆಟವನ್ನು ಆಡುವುದಿಲ್ಲ ಆ ದೇಶಗಳು ಒಲಂಪಿಕ್ಸ್ ನಲ್ಲಿ ಬೇರೆ ಬೇರೆ ಆಟಗಳನ್ನು ಆಡಿ ಅನೇಕ ಚಿನ್ನದ ಪದಗಳನ್ನು ಗಳಿಸುತ್ತಿವೆ. ಆದರೆ ಭಾರತ ಕ್ರಿಕೆಟ್ ಎಂಬ ಮೂರ್ಖರ ಆಟವನ್ನು ಆಡುತ್ತಾ ಒಲಂಪಿಕ್ಸ್ ನಲ್ಲಿ ಪದಕಗಳಿಂದ ವಂಚಿತವಾಗುತ್ತಿದೆ ಭಾರತದಲ್ಲಿ ದಿನಬೆಳಗಾದರೆ ಸಾಕು ಕ್ರಿಕೆಟ್ ಕ್ರಿಕೆಟ್ ಕ್ರಿಕೆಟ್…

ಭಾರತ ದೇಶದ ನೆಲದಲ್ಲೇಕೆ? ಪ್ರತಿ ವರ್ಷ ಕ್ರಿಕೆಟ್ ಆಟದ ಮೇಲೆ ಬಾರಿ ಬಂಡವಾಳಿಗರು ಬಂಡವಾಳವನ್ನು ಹೂಡಿಕೆ ಮಾಡುತ್ತಾರೆ? ಅದರಿಂದ ಲಾಭ ಯಾರಿಗೆ ನಷ್ಟ? ಯಾರಿಗೆ ಲಾಭ ? ಕೋಟಿ ಕೋಟಿ, ಬೆಡ್ಡಿಂಗ್ ದಂಧೆಗೆ ಬಲಿಯಾಗುತ್ತಿರುವವರು ಯಾರು? ಇದರ ಒಳ ಮರ್ಮವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಜನ ಮರುಳೋ, ಜಾತ್ರೆ ಮರುಳೋ.. ಎಂಬಂತೆ ಯುವ ಸಮುದಾಯವನ್ನು ದೇಶದ ಆರ್ಥಿಕ,ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳದಂತೆ ವ್ಯವಸ್ಥಿತವಾಗಿ IPL ಆಟಗಳನ್ನು ಪ್ರತಿ ವರ್ಷ ಭಾರತದಲ್ಲಿ ನಡೆಸಿ ಯುವ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದೆ…

ಇತ್ತೀಚಿಗಂತೂ ಅಂಬೇಡ್ಕರ್ ಹೆಸರಿನಲ್ಲಿ ಅನೇಕ ಕಡೆ ಕ್ರಿಕೆಟ್ ಆಟಗಳು ನಡೆಯುತ್ತಿವೆ

“ಜೈ ಭೀಮ್ ಕಪ್” “ಅಂಬೇಡ್ಕರ್ ಕಪ್ ”
“ಮಹಾ ನಾಯಕ ಕಪ್”

ಇದಕ್ಕೆ ಬಲಿಯಾಗುತ್ತಿರುವವರು ಶೋಷಿತ ಸಮುದಾಯದ ಯುವಕರೇ ಇದಕ್ಕೆ ಹಣಕಾಸು ನೆರವು ಒದಗಿಸುವವರು. ಅಲ್ಲಿನ ಸ್ಥಳಿಯ ರಾಜಕಾರಣಿಗಳು.. ಅಂಬೇಡ್ಕರ್ ಹೆಸರಿನಲ್ಲಿ ಕ್ರಿಕೆಟ್ ಆಟಗಳು ನಡೆಯುತ್ತಿರುವುದು ಈ ದೇಶದ ದೊಡ್ಡ ದುರಂತ ಇದು ಸಂಪೂರ್ಣವಾಗಿ ನಿಷೇಧ ಆಗಬೇಕಾಗಿದೆ…
ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಭಾರಿ ಬಂಡವಾಳಿಗರ ಕ್ರಿಕೇಟ್ ಆಟವನ್ನು ಆಡಿಸುವುದು ಸರಿಯಾದ ಕ್ರಮವಲ್ಲ..
ಇದು ಆ ಮಹಾನ್ ವ್ಯಕ್ತಿಗೆ ಮಾಡುವ ದೊಡ್ಡ ಅಪಮಾನವಾಗಿದೆ…

ಹಿಂದೆ ತಾಯಿ ತನ್ನ ಮಗುವಿಗೆ ಹೇಳುತ್ತಿದ್ದಳು
ಆಡಿ ಬಾ ಎನ ಕಂದ, ಅಂಗಾಲು ತೊಳೆದೇನು ತೆಂಗಿನ ಕಾಯಿ ತಿಳಿನೀರ,
ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಬಂಗಾರ ಮೋರೆ ತೊಳೆದೇನು….

ಎಂದು ಮಕ್ಕಳನ್ನು ಆಟವಾಡಲು ಕಳಿಸುತ್ತಿದ್ದಳು ಇದರಿಂದ ಮಕ್ಕಳು ಹೊರಗಡೆ ಆಟವಾಡಿ ಸೂರ್ಯನ ಕಿರಣಗಳಿಂದ ವಿಟಮಿನ್ “ಡಿ” ಜೀವ ಸತ್ವವನ್ನು ಪಡೆಯುತ್ತಿದ್ದರು ಮಾತ್ರವಲ್ಲದೆ ಮಣ್ಣಿನಲ್ಲಿರುವ ಕಬ್ಬಿಣ ಅಂಶಗಳಿಂದ ಅನೇಕ ಜೀವ ಸತ್ವಗಳು ಮಕ್ಕಳ ಸದೃಢ ಬೆಳವಣಿಗೆಗೆ ಸಹಕಾರಿಯಾಗುತ್ತಿತ್ತು. ಆಡಿ ಕುಣಿದ ಮಕ್ಕಳು ಹಸಿವಿನಿಂದ ಹೊಟ್ಟೆ ತುಂಬಾ ಊಟ ಮಾಡಿ ಆರೋಗ್ಯವಾಗಿದ್ದರು .

ಆದರೆ

ಈ ಹೊತ್ತಿನ ಮಕ್ಕಳ ಆಟವನ್ನು ನಿಮ್ಮ ಜ್ಞಾನ ಶಾಖೆಗೆ ವಿಸ್ತರಿಸಿಕೊಳ್ಳಿ..,.

ಕಳೆದ ಬಾರಿ ಐಪಿಎಲ್ ಮುಗಿದ ನಂತರ 11 ಮಂದಿ ಬಲಿಯಾಗಿದ್ದರು ಇನ್ನೂ ಒಂದು ವರ್ಷವೇ ತುಂಬಿಲ್ಲ ಆಗಲೇ ಬೆಂಗಳೂರಿನಲ್ಲಿ ಮತ್ತೆ ಐಪಿಎಲ್ ಆಟ ಪ್ರಾರಂಭ ..

ಪ್ರಭುತ್ವದ ವಿರುದ್ಧ ಶೋಷಿತರ ವಿಮೋಚನೆಗಾಗಿ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ಒಬ್ಬನೇ ಒಬ್ಬ ಹೋರಾಟದಲ್ಲಿ ಬಲಿಯಾದ್ದರೆ ಆ ಜೀವಪರ, ಜನಪರ ಸಂಘಟನೆಯನ್ನೆ ಹೋರಾಟವನ್ನೆ ನಿಷೇಧಿಸುತ್ತಿತ್ತು ಪ್ರಭುತ್ವ…

ಆದರೆ ಕಾಲ್ತುಳಿತಕ್ಕೆ 11 ಜನ ಬಲಿಯಾಗಿ ಒಂದು ವರ್ಷವೇ ತುಂಬಿಲ್ಲ ಬೆಂಗಳೂರಿನಲ್ಲಿ ಮತ್ತೆ ನಡೆಯುತ್ತಿದೆ ಐಪಿಎಲ್ ಪಂದ್ಯ.

ಪ್ರಭುತ್ವ ಯಾಕೆ ನಿಷೇಧಿಸುತ್ತಿಲ್ಲ ಎಂದರೆ…

ಕ್ರಿಕೆಟ್ ಒಂದು ಆಟವಾಗಿ ಉಳಿದಿಲ್ಲ ಅದೊಂದು ಬಾರಿ ದೊಡ್ಡ ದೊಡ್ಡ ಶ್ರೀಮಂತರ ಉದ್ಯಾಮವಾಗಿದೆ…

ಮೂರ್ಖರ ಆಟಕ್ಕೆ ಬಲಿಯಾಗದಿರಿ ಯುವ ಮನಸ್ಸುಗಳೇ, ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ.

ಬರಹ:ಡಾ. ಹರೀಶ್ ನಲ್ಕೆ ಸಂಶೋಧನಾ ಬರಹಗಾರರು
೨೮.೦೩.೨೦೨೬.

About Author

Leave a Reply

Your email address will not be published. Required fields are marked *

You may have missed