ಹೊಸದನ್ನು ಕಲಿತು ಮಾನಸಿಕ ಒತ್ತಡದಿಂದ ಮುಕ್ತರಾಗಿ : ಸಹೋದರಿ ಭಾಗ್ಯಕ್ಕ….
1 min read
ಹೊಸದನ್ನು ಕಲಿತು ಮಾನಸಿಕ ಒತ್ತಡದಿಂದ ಮುಕ್ತರಾಗಿ : ಸಹೋದರಿ ಭಾಗ್ಯಕ್ಕ.
ಚಿಕ್ಕಮಗಳೂರು : ಕರಕುಶಲ ತರಬೇತಿ
ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಹೊಸದನ್ನು ಕಲಿಯುವುದರೊಂದಿಗೆ ಸಹವರ್ತಿಗಳಿಗೂ ಕಲಿಸುವುದರ ಮೂಲಕ ತಾವುಗಳು ಮಾನಸಿಕ ಒತ್ತಡಗಳಿಂದ ಮುಕ್ತರಾಗಬೇಕೆಂದು ಬ್ರಹ್ಮಾಕುಮಾರೀಸ್ ಸಂಸ್ಥೆಯ ನಿರ್ದೇಶಕರಾದ ರಾಜಯೋಗಿನಿ ಡಾ.ಬಿ.ಕೆ ಭಾಗ್ಯಕ್ಕ ಹೇಳಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನಗರದ ಕಾರಾಗ್ರಹದಲ್ಲಿ ಮಹಿಳೆಯರಿಗೆ ಒಂದು ತಿಂಗಳ ಕರಕುಶಲ ತರಬೇತಿ ಸಮಾರೋಪ ಸಮಾರಂಭದಲ್ಲಿಮಾತನಾಡಿದರು.
ಈ ಪರಿವರ್ತನಾ ಕೇಂದ್ರದಲ್ಲಿ ತನ್ನ ಮಾನಸಿಕ ಪರಿವರ್ತನೆ ಆಧ್ಯಾತ್ಮಿಕ ಚಿಂತನೆಗಳನ್ನು ರೂಢಿಸಿಕೊಳ್ಳುವ ಮೂಲಕ ಮನೋಬಲವನ್ನು ಹೆಚ್ಚಿಸಿಕೊಳ್ಳುವ ಕಾರ್ಯಗಳು ನಿತ್ಯ ನಿರಂತರವಾಗಿ ಇಲ್ಲಿ ನಡೆಯುತ್ತಿದೆ ಸಮಯವನ್ನು ವ್ಯರ್ಥವಾಗಿ ಕಳೆಯದೆ ತನ್ನನ್ನು ಇಂತಹ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಪುರುಷ ಬಂಧಿಗಳಿಗೂ ಉಪಯುಕ್ತವಾದ ತರಬೇತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಬ್ರಹ್ಮಾಕುಮಾರೀಸ್ ಸಂಸ್ಥೆಯ ಈಶ್ವರೀಯ ವಿದ್ಯಾರ್ಥಿ, ಉದ್ಯಮಿ ಎಂ.ಎಸ್. ಸಚಿನ್ ಮಾತನಾಡಿ ಇಲ್ಲಿ ಇರುವಷ್ಟು ಸಮಯ ನಿಮ್ಮ ಚಿಂತನೆಗಳನ್ನು ಸಕಾರಾತ್ಮಕವಾಗಿಕೊಳ್ಳಬೇಕು, ನಿಮ್ಮಲ್ಲಿ ಪರಸ್ಪರ ಮಾತನಾಡುವ ಮಾತುಗಳು ಸಕಾರಾತ್ಮಕ ಪರಿವರ್ತನೆಗಳೆಡೆಗೆ ಕರೆದೊಯ್ಯುವಂತಿರಲಿಎಂದರು.
ಇಲ್ಲಿ ಸಿಕ್ಕಿರುವ ಸಮಯವನ್ನು ಸದುಪಯೋಗ ಮಾಡಿಕೊಂಡು ಭವಿಷ್ಯದಲ್ಲಿ ಉತ್ತಮ ಗುರಿ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ತೆರಳಬೇಕು.
<span;>ನಿಮ್ಮ ವ್ಯಕ್ತಿಗತ ಸಮಾಲೋಚನೆಗೆ ನಾನು ಸದಾ ಸಹಕರಿಸುತ್ತೇನೆ ಎಂದು ತಿಳಿಸಿದರು.
ಮಹಿಳಾ ಬಂಧಿಯಾದ ಮಹಿಳೆ ಅಲ್ಲಿಯ ಮಹಿಳಾ ಬಂಧಿಗಳಿಗೆ ಒಂದು ತಿಂಗಳು ತರಬೇತಿಯನ್ನು ನೀಡಿ ಬುಟ್ಟಿ ನೇಯುವುದು, ಉಲ್ಲನ್ ಕಸೂತಿ, ತರಬೇತಿಯನ್ನು ನೀಡುವ ಮೂಲಕ ಮಹಿಳಾ ಬಂಧಿಗಳಿಗೆ ಹೊಸ ಚೈತನ್ಯವನ್ನು, ಉತ್ಸಾಹವನ್ನು ತುಂಬಿರುವ ಬ್ರಹ್ಮಾಕುಮಾರೀಸ್ ಸಂಸ್ಥೆಯ ಕಾರ್ಯವೈಖರಿಯನ್ನು ಅಧೀಕ್ಷಕರಾದ ಮಂಜುನಾಥ್ರವರು ಅಭಿನಂದಿಸಿದರು ಹಾಗೂ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ ಅಭಿನಂದನಾ ಪತ್ರ ಹಾಗೂ ಸಿಹಿಯನ್ನು ನೀಡಿ ಪ್ರಶಂಸಿಸಿದರು.
ಈ ಕಾರ್ಯಕ್ರಮದಲ್ಲಿ ಜೈಲರ್ ನೆಲಧರಿರವರು ಹಾಗೂ ಸಮಾಲೋಚಿಕಿ ಆಶಾ, ಸಿಬ್ಬಂದಿ ರಾಜ್ ಕುಮಾರ್ ಹಾಗೂ ಎಲ್ಲಾ ಸಿಬ್ಬಂದಿಗಳು, ಬಂಧಿಗಳು ಉಪಸ್ಥಿತರಿದರು.

