लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

2024ರ ಅತ್ಯುತ್ತಮ ಕೃತಿ* ಹಾಗೂ *ನವಕವಿಗಳ ಪ್ರಥಮ ಸಂಕಲನ* ಎಂದು ಪರಿಗಣಿಸಿ *ಪ್ಯೂಪಾ* ಕೃತಿ ಆಯ್ಕೆ….

1 min read

*ಶಶಿ ತರೀಕೆರೆ* ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡುವ ಹಾಗೂ ಸಾಹಿತ್ಯ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ *2024ರ ಅತ್ಯುತ್ತಮ ಕೃತಿ* ಹಾಗೂ *ನವಕವಿಗಳ ಪ್ರಥಮ ಸಂಕಲನ* ಎಂದು ಪರಿಗಣಿಸಿ *ಪ್ಯೂಪಾ* ಕೃತಿ ಆಯ್ಕೆ ಆಗಿರುವುದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಭರವಸೆಯ ಮೂಡಿಸಿರುವ ಲೇಖಕ ಹಾಗೂ ತರೀಕೆರೆ ಎಂಬ ಹೆಸರನ್ನು *ಶಶಿ* ಜೊತೆಯಲ್ಲಿ *ತರೀಕೆರೆ* ಸೇರಿಸಿಕೊಂಡು ಸಾಹಿತ್ಯ ರಚಿಸುತ್ತಿರುವುದು ಆ ಹೆಸರು ಅಜರಾಮರವಾಗಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ *ರಹಮತ್ ತರೀಕೆರೆ* ಅವರ ಹೆಸರಿನಾಗೆ *ಶಶಿ ತರೀಕೆರೆ* ಅವರು ಸಹ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಅತ್ಯುತ್ತಮ ಕೃತಿಗಳ ರಚಿಸುವ ಮೂಲಕ *ತರೀಕೆರೆಗೆ* ಹೆಸರು ತರಲಿ ಎಂದು ಹಾರೈಸುವೆ, ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಈ ಪರಂಪರೆಯಲ್ಲಿ ಇವರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಲಿ ಎಂದು ಮತ್ತೊಮ್ಮೆ ಹಾರೈಸುತ್ತಾ, ಇವರನ್ನು ಇದೇ ತಿಂಗಳು *17ನೇ ತಾರೀಖು ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ* ಇವರಿಗೆ *ಕನ್ನಡಶ್ರೀ ಪ್ರಶಸ್ತಿ* ನೀಡಿ ಗೌರವಿಸಲಾಗಿತ್ತು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತರೀಕೆರೆ ಘಟಕವು ಇಂತಹ ಉತ್ತಮ ಯುವ ಪ್ರತಿಭಾವಂತ ಲೇಖಕರಾದ *ಶಶಿ ತರೀಕೆರೆ* ಇವರನ್ನು ಗೌರವಿಸಿದ್ದು ಎಲ್ಲಾ ಕನ್ನಡ ಮನಸುಗಳಿಗೆ ಹಾಗೂ ಎಲ್ಲಾ ಪರಿಷತ್ತಿನ ಪದಾಧಿಕಾರಿಗಳಿಗೆ ಹೆಮ್ಮೆಯ ವಿಷಯವಾಗಿದೆ, ಆದ್ದರಿಂದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ತರುವಂತಹ ಬರವಣಿಗೆಯ ಮೂಲಕ ಭರವಸೆಯ ಮೂಡಿಸಿರುವ *ಶಶಿ ತರೀಕೆರೆ ಮನೆ ಮಗನಿಗೆ* ವಂದನೆ, ಅಭಿನಂದನೆಗಳು.

*ರವಿ ದಳವಾಯಿ*
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತರೀಕೆರೆ

About Author

Leave a Reply

Your email address will not be published. Required fields are marked *

You may have missed