लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಬಿದಿರು ನಾ ನಾರಿಗಲ್ಲದವಳು….
‎  ಬಿದಿರು ಒಂದು ವಿಶೇಷವಾದ ಸಸ್ಯ ವರ್ಗಕ್ಕೆ ಸೇರಿದ್ದು.  ಹುಟ್ಟುತ್ತ  ಹುಲ್ಲು ಆಗಿ. ಬೆಳೆಯುತ್ತ ಮರವಾಗಿ ಬೆಳೆಯುತ್ತೆ. ಹುಟ್ಟುವ ಮಗುವಿಗೆ ತೊಟ್ಟಿಲು ಆಗಿ. ಕೊಳಲು ಆಗಿ. ತಾಯಂದಿರ ಕೈಯಲ್ಲಿ ಕೆರುವ ಮರವಾಗಿ. ಅಂಬಿಗರಿಗೆ ಹುಟ್ಟು ಆಗಿ. ಸಿದ್ದ ರಾಮೇಶ್ವರ ನಿಗೆ ನಂದಿಯ ಕೊಲು ಆಗಿ. ಕಟ್ಟಿಗೆ ಆಗಿ ವಯಸ್ಸಾದವರಿಗೆ ಊರು ಗೊಲು ಆಗಿ. ತಿಪ್ಪೆಯ ಕೆಳಗೆ ಮಾರುದ್ದ ಬೆಳೆದಿದ್ದೆ ನಾ ಯಾರಿಗೆ ಅಲ್ಲದವಳು ಅಂತ. ಒಂದು ತಾಯಿ ಹೆಣ್ಣು ಮಗಳಿಗೆ ಹೋಲಿಸಿ ಜಾನಪದರು ಹಾಡು ಕಟ್ಟಿದರೆ. ಶಿಶುನಾಳ ಶರೀಫ  ಅವರು ಬಿದಿರ ಬಗ್ಗೆ ಅಂದೇ ಜಾಗೃತಿ ಮೂಡಿಸಿದ್ದಾರೆ ಅದರೆ ಶತಮಾನಗಳ ಹಿಂದೆ  ಈ ಬಿದಿರು ಮನುಷ್ಯನ ಹೊಟ್ಟೆ ತುಂಬಿಸಿದ್ದು ಉಂಟು  ಇದು 40-50  ವರ್ಷಗಳಿಗೆ ಒಮ್ಮೆ ಮಾತ್ರ ಹೊ ಬಿಡುವ ಅಪರೂಪದ  ಸಸ್ಯ ಇದರ ಕೆಳಗೆ ಹಿಂದಿನ ಕಾಲದ ಪೂರ್ವಜರು ಬಿದಿರು ಮಣಿಕೆ ಕೆಳಗೆ ಸಗಣಿ ಇಂದ ಸಾರಿಸಿ ಬರುತ್ತಿದ್ದರು ಮರುದಿನ ಬಿದಿರು ಅಕ್ಕಿ  ಬಿದ್ದಿರೊದು.
ಅದನ್ನು  ಗಂಜಿ ಮಾಡಿ ಬದುಕಿದ ಕಾಲವದು  ಇವತ್ತಿನ ಪೀಳಿಗೆಗೆ ಇದರ ಪರಿಚಯವನ್ನು  ಪುಸ್ತಕದಲ್ಲಿ  ಮಾಡಿಸ ಬೇಕು ಅಷ್ಟೇ  ಹೀಗೊಂದು ಬಿದಿರು ಹೂ ಬಿಟ್ಟಿದ್ದು  ನನ್ನ ಕಣ್ಣಿಗೆ ಬಣಕಲ್  ಬಿ. ಸಿ. ಎಂ.  ಹಾಸ್ಟೆಲ್ ಪಕ್ಕದಲ್ಲಿ ಒಂದು ಮನೆಯ ಪಕ್ಕದಲ್ಲಿ  ಗೊಬ್ಬರ ತಿಪ್ಪೆ  ಹತ್ತಿರ  ದೊಡ್ಡ  ಮರವಾಗಿ  ಬೆಳೆದು ನಿಂತಿದೆ.
‎ ಇದು  ಸಾಮಾನ್ಯವಾಗಿ ಹೂ ಬಿಟ್ಟ ಮೇಲೆ ಅದು ಒಣಗಿ ಸಾಯುತ್ತದೆ  ಒಂದು ನೆನಪು ಇರಲಿ ಅಂತ ಅದನ್ನು ಪರಿಚಯಿಸುವ ಒಂದು ಪ್ರಯತ್ನ ಬಿದಿರು ನಾ ನಾರಿಗಲ್ಲದವಳು.

✍️………..
‎ ಲೋಕೇಶ್ ಬೆಟ್ಟಗೆರೆ
‎ ಅಧ್ಯಕ್ಷರು
‎ಕನ್ನಡ ಸಾಹಿತ್ಯ ಪರಿಷತ್ತು
‎ಬಣಕಲ್ ಹೋಬಳಿ

About Author

Leave a Reply

Your email address will not be published. Required fields are marked *

You may have missed