ಮಾರ್ಚ್ 30ರಂದು ತರೀಕೆರೆಯಲ್ಲಿ ನಡೆಯಲಿದೆ ನವಮಾಧ್ಯಮಗಳ ತರಬೇತಿ ಶಿಬಿರ…..
1 min read


ಅವಿನ್ ಟಿವಿ ಸುದ್ದಿಜಾಲ ✍️:
ಮಾರ್ಚ್ 30ರಂದು ತರೀಕೆರೆಯಲ್ಲಿ ನಡೆಯಲಿದೆ ನವಮಾಧ್ಯಮಗಳ ತರಬೇತಿ ಶಿಬಿರ.

ತರೀಕೆರೆ ಮಾ ೨೫: ಹೊನ್ನ ಬಿತ್ತೇವು ಹೊಲಕೆಲ್ಲ ಬಳಗ ಮತ್ತು ನ್ಯೂಸ್ ಕಿಂಗ್ ಸುದ್ದಿವಾಹಿನಿ ಹಾಗೂ ಗ್ಲಾಸಿ ಕಿಡ್ಸ್ ಸದ್ವಿಧ್ಯಾ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ *”ನವ ಮಾಧ್ಯಮಗಳ ತರಬೇತಿ ಶಿಬಿರವು”* ಇದೇ 30ನೇ ಮಾರ್ಚ್ 2026ರ ಸೋಮವಾರದಂದು ತರೀಕೆರೆಯಲ್ಲಿರುವ ಗ್ಲಾಸಿ ಕಿಡ್ಸ್ ಸದ್ವಿಧ್ಯಾ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ.
ಶಿಬಿರದಲ್ಲಿ ನವ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಮತ್ತು ಕೃತಕ ಬುದ್ಧಿಮತ್ತೆಯನ್ನು ಕುರಿತು ವಿಷಯ ತಜ್ಞರು ವಿಚಾರ ಮಂಡನೆ ಮತ್ತು ಪ್ರಾಯೋಗಿಕ ತರಬೇತಿಯನ್ನು ಶಿಬಿರದಲ್ಲಿ ನೀಡಲಿದ್ದಾರೆ.
ಕಳೆದು ಹೋದ ದಿನಮಾನಗಳು, ಬದುಕುತ್ತಿರುವ ವಾಸ್ತವದ ಕಾಲಘಟ್ಟ, ಭವಿಷ್ಯದ ದಿನಗಳಲ್ಲಿ ನಾವು ಇಡಬೇಕಾದ ಹೆಜ್ಜೆಗಳ ಲೆಕ್ಕಾಚಾರವನ್ನು ಒಂದು ಆಚಾರದೊಂದಿಗೆ ಸಂವಾದ ಮಾಡುವ ನಿಟ್ಟಿನಲ್ಲಿ ಈ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಕೇವಲ ಒಂದು ದಿನದ ತರಬೇತಿ ಶಿಬಿರ ಇದಾಗಿದ್ದು 30 ವಿದ್ಯಾರ್ಥಿಗಳು, 30 ಜನ ಪೋಷಕರು, ಇತರೆ ಕ್ಷೇತ್ರದ ಆಸಕ್ತ 30 ಜನರು ಸೇರಿದಂತೆ ಒಟ್ಟು 90 ಶಿಬಿರಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ.
ತರಬೇತಿ ಶಿಬಿರಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ತರೀಕೆರೆ ತಾಲೂಕಿನ ಆಸಕ್ತರು ಈ ಕೆಳಕಂಡ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಿ ನೊಂದಣಿ ಮಾಡಿಕೊಳ್ಳಲು ಶಿಬಿರದ ಆಯೋಜಕರು ತಿಳಿಸಿದ್ದಾರೆ.
*ಎನ್. ರಾಜು* 7619521477
*ಮನಸುಳಿ ಮೋಹನ್* 9980113639
*ಹರ್ಷಿತಾ* 9945101461
*ಡಿ ಎಂ ಮಂಜುನಾಥಸ್ವಾಮಿ*
9019697655
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

