ಪ್ರಾಚಾರ್ಯರ ವಿರುದ್ದ ಅಟ್ರಾಸಿಟಿ ಪ್ರಕರಣ….
1 min read
ಪ್ರಾಚಾರ್ಯರ ವಿರುದ್ದ ಅಟ್ರಾಸಿಟಿ ಪ್ರಕರಣ
ಮೂಡಿಗೆರೆ: ಕೊಟ್ಟಿಗೆಹಾರದ ಏಕಲವ್ಯ ವಸತಿಶಾಲೆಯ 7 ವಿದ್ಯಾರ್ಥಿಗಳಿಗೆ ಥಳಿಸಿ,
* ವಸತಿಶಾಲೆಯ 7 ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಕಡೂರಿನ 9ನೇ ವಿದ್ಯಾರ್ಥಿಗಳಿಗೆ ಥಳಿತ ಪ್ರಕರಣ
ಜಾತಿ ನಿಂದನೆ ಮಾಡಿರುವ ಪ್ರಾಚಾರ್ಯ ಸತೀಶ್ ಪ್ರಸಾದ್ ಜಸ್ವಂತ್ ಮತ್ತು ಲ್ಯಾಬ್ ಅಟೆಂಡರ್ ಶುಭಮ್ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಭಾನುವಾರ ತರಗತಿ ವಿದ್ಯಾರ್ಥಿ ಪ್ರೀತಮ್ ಅವರ ಪಾಲಕ ರಮೇಶ್ ನಾಯ್ಕ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಓದಿಕೊಳ್ಳುತ್ತಿದ್ದಾಗ ವಿದ್ಯುತ್ ಆಫ್ ಮಾಡಿದ್ದ ವಿಚಾರವಾಗಿ ವಿದ್ಯಾರ್ಥಿಗಳ ಮಧ್ಯೆ ಸಣ್ಣಮಟ್ಟದ ಜಗಳವಾಗಿತ್ತು. ಶನಿವಾರ ಬೆಳಗ್ಗೆ ಪ್ರಾಚಾರ್ಯ ಮತ್ತು ಶುಭಮ್ 9ನೇ ತರಗತಿಯ 7 ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಪೈಪ್ ಮತ್ತು ಬೆಲ್ನಿಂದ ಥಳಿಸಿ ಹಾಸ್ಟೆಲ್ ಕೊಠಡಿಯಲ್ಲಿ ಕೂಡಿಹಾಕಿದ್ದರು, ಈ ಪ್ರಕರಣ ಬೆಳಕಿಗೆ ಬಂದು ಶನಿವಾರ ರಾತ್ರಿ ವಿದ್ಯಾರ್ಥಿಗಳ ಪಾಲಕರು ಮತ್ತು ಸಾರ್ವಜನಿಕರು ಬಣಕಲ್ ಠಾಣೆಗೆ ತೆರಳಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಪಿಎಸ್ಐ ರೇಣುಕಾ ಅವರಿಗೆ ಮನವಿ ಸಲ್ಲಿಸಿದ್ದರು. ಭಾನುವಾರ ಕಡೂರಿನ ರಮೇಶ್ ನಾಯ್ಕ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

