लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಕಾಲಿಕವಾಗಿ ಅಗಲಿದ ಗೆಳೆಯನ ಸ್ಮರಣೆ ‎ವಕೀಲರಾದ ಊರುಬಗೆ ಅಶೋಕ್

1 min read

ಅಕಾಲಿಕವಾಗಿ ಅಗಲಿದ ಗೆಳೆಯನ ಸ್ಮರಣೆ

‎ವಕೀಲರಾದ ಊರುಬಗೆ ಅಶೋಕ್

ಅಕಾಲಿಕವಾಗಿ ನಿಧನ ಹೊಂದಿದ್ದು, ನಮ್ಮೆಲ್ಲ ಸ್ನೇಹಿತರಿಗೆ ತುಂಬಾ ನೋವನ್ನುಂಟುಮಾಡುವ ಸಂಗತಿಯಾಗಿದೆ.

‎ಯು.ಎಂ. ಅಶೋಕ್‌ರವರು ಮೂಡಿಗೆರೆ ತಾಲ್ಲೂಕಿನ ಊರುಬಗೆ ಯು.ಬಿ. ಮರೀಗೌಡ ಮತ್ತು ಯಶೋಧಮ್ಮ ದಂಪತಿಯ ಪುತ್ರರಾಗಿದ್ದರು. ಸತ್ತಿಗನಹಳ್ಳಿ ಶಾಲೆಯಲ್ಲಿ 7ನೇ ತರಗತಿವರೆಗೆ ಓದಿ, ದಾರದಹಳ್ಳಿಯಲ್ಲಿ ಹೈಸ್ಕೂಲ್ ವ್ಯಾಸಂಗ ಮಾಡಿ, ಪಿಯುಸಿ ಮತ್ತು ಬಿ.ಕಾಂ ಪದವಿ ಶಿಕ್ಷಣವನ್ನು ಮೂಡಿಗೆರೆಯಲ್ಲಿ ಪೂರೈಸಿ ನಂತರ ಹಾಸನದ ಕೃಷ್ಣಾ ಲಾ ಕಾಲೇಜಿನಲ್ಲಿ ಎಲ್.ಎಲ್.ಬಿ. ವಿದ್ಯಾಭ್ಯಾಸವನ್ನು ಮಾಡಿದ್ದರು.

‎ವಿದ್ಯಾಭ್ಯಾಸದ ಸಮಯದಲ್ಲಿ ಅಧಿಕವಾಗಿ ತೊಂದರೆ ಇದ್ದರೂ ಸಹ ಕಷ್ಟಪಟ್ಟು ಹಣ ಹೊಂದಿಸಿಕೊಂಡು ಓದಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಚಿಕ್ಕಮಗಳೂರು ಮತ್ತು ಮೂಡಿಗೆರೆ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಅಶೋಕನ ಅಕಾಲಿಕ ಸಾವು ಅತೀವ ದುಃಖದ ವಿಷಯ.

‎ಕಾಲೇಜಿನ ವ್ಯಾಸಂಗದ ಅವಧಿಯಲ್ಲಿ ಎ.ಐ.ಎಸ್.ಎಫ್ ವಿದ್ಯಾರ್ಥಿ ಸಂಘಟನೆಯಲ್ಲಿ ವಿದ್ಯಾರ್ಥಿ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ನಂತರ ಬಿ.ಕೆ. ಸುಂದರೇಶ್ ಹಾಗೂ ಎಸ್.ಎ. ವಿಜಯೇಂದ್ರ ನೇತೃತ್ವದ ಸಿಪಿಐ ಪಕ್ಷದ ಚಳುವಳಿಯಲ್ಲಿ ರೈತರು, ಕಾಮಿಕರ ಪರ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು ಹಾಗೆ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯರಾಗಿ, ಸಮಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಪವಾಡ ರಹಸ್ಯ ಬಯಲು ಕಾರ್ಯಕ್ರಮ ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸಿ ಮೂಡನಂಬಿಕೆಯ ವಿರುದ್ಧ ಉಪನ್ಯಾಸಗಳನ್ನು ನೀಡುತ್ತಿದ್ದರು.

‎ಈ ಮೇಲ್ಕಂಡ ಎಲ್ಲಾ ಚಟುವಟಿಕೆಗಳಲ್ಲಿ ನಾನು ಅಶೋಕನ ಜೊತೆಯಾಗಿ ಪಾಲ್ಗೊಳ್ಳುತ್ತಿದ್ದು ಈಗ ನೆನಪು ಮಾತ್ರ.

‎ಬಿ.ಕೆ. ಲಕ್ಷ್ಮಣಕುಮಾರ್ ಅವರ ಭೂಪೇಶ್ ಮೆಮೋರಿಯಲ್ ಸ್ಕೂಲಿನ ನಿರ್ದೇಶಕರಾಗಿ ಹಾಗೂ ಎಂಇಎಸ್ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

‎ಊರುಬಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿದ್ದು, ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು. ಹಾಗೆ ಮೂಡಿಗೆರೆ ವಕೀಲರ ಸಂಘದ ಅಧ್ಯಕ್ಷರಾಗಿ ನ್ಯಾಯಾಲಯದಲ್ಲಿ ನಡೆಯುವ ಸಂಘದ ಕಾರ್ಯಚಟುವಟಿಕೆಗಳನ್ನು ಕೈಗೊಂಡು ವಕೀಲರ ಬಳಗದಲ್ಲಿ ಉತ್ತಮ ಬಾಂದವ್ಯ ಮತ್ತು ಸ್ನೇಹವನ್ನು ಸಂಪಾದಿಸಿದ್ದರು. ವಕೀಲಿ ವೃತ್ತಿ ಮಾಡುವಾಗ ಅನೇಕ ಬಡ ರೈತರಿಗೆ, ಕಾರ್ಮಿಕರಿಗೆ ಶುಲ್ಕವಿಲ್ಲದೆ ಕೆಲವು ಸಂದರ್ಭಗಳಲ್ಲಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ.

‎ಊರುಬಗೆ ಗ್ರಾಮದಲ್ಲಿ ಉತ್ತಮ ಕೃಷಿಕರಾಗಿ ಹಾಗೆ ಸಿರಿಮನೆ ಹೋಂ ಸ್ಟೇ ಎಂಬ ಹೆಸರಿನಲ್ಲಿ ಹೋಂ ಸ್ಟೇ ಮಾಡಿ ಅನೇಕರಿಗೆ ಉದ್ಯೋಗವನ್ನು ನೀಡಿ ಉತ್ತಮವಾಗಿ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದರು.

ಚಿಂದಿನಿಂದಲೂ ಕಷ್ಟಪಟ್ಟು ಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ವಕೀಲರಾಗಿ, ಉತ್ತಮ ಕೃಷಿಕರಾಗಿ, ಉದ್ಯಮಿಯಾಗಿ ಆರ್ಥಿಕವಾಗಿ ಸಬಲರಾಗಿದ್ದ ಸಂದರ್ಭದಲ್ಲಿ ಇತ್ತೀಚೆಗೆ ಅನಾರೋಗ್ಯದಿಂದ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಅವರ ಸಾವು ಸಮಾಜಕ್ಕೆ, ಕುಟುಂಬದವರಿಗೆ, ಬಂಧುಗಳಿಗೆ, ಸ್ನೇಹಿತರಿಗೆ ತುಂಬಲಾರದ ನಷ್ಟವುಂಟಾಗಿದೆ. ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಬೇಡಿಕೊಳ್ಳುತ್ತಾ, ಅಗಲಿದ ಗೆಳೆಯನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.

ಕೃಪೆ : ಚಿಕ್ಕಮಗಳೂರು ದರ್ಪಣ

ಎಸ್.ಎ. ವಾಸುದೇವ್, ಸತ್ತಿಗನಹಳ್ಳಿ.

About Author

Leave a Reply

Your email address will not be published. Required fields are marked *

You may have missed