लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹುಯಿಗೆರೆ  ಚೌಡಿ ಮುದ್ರೆ ಇದು ನನ್ನ ಅಭಿಪ್ರಾಯ ಹಾಗೂ ಅನುಭವವಷ್ಟೇ.

1 min read

ಹುಯಿಗೆರೆ  ಚೌಡಿ ಮುದ್ರೆ ಇದು ನನ್ನ ಅಭಿಪ್ರಾಯ ಹಾಗೂ ಅನುಭವವಷ್ಟೇ 😌ಬಲ್ಲ ಮೂಲಗಳಿಂದ ಹುಯಿಗೆರೆ ಚೌಡಿ ಹರಕೆ  ಎಂದು ನನಗೆ ದೂರದಿಂದ ಸುದ್ದಿ ತಿಳಿಯಿತು ಆದರೆ ಗೊತ್ತಲ್ವಾ, ನಾವು ಸ್ವಾಭಿಮಾನಿಗಳು ಕರೆಯದೆ ಯಾವುದೇ ಕಾರ್ಯಕ್ರಮಕ್ಕೆ ಹೋಗುವುದೇ ಇಲ್ಲ😎! ಆದರೂ ರಾತ್ರಿ ಸಮಯವಲ್ಲ ಹಾಗಾಗಿ  ಸ್ನೇಹಿತರಿಗೆಲ್ಲ ಕರೆ ಮಾಡಿ ಫುಲ್ ಅಲರ್ಟ್ ಆದ್ವಿ ಎಲ್ಲಾ ಒಟ್ಟಿಗೆ ಸೇರಿ ಸರಿಯಾದ  ಸಮಯಕ್ಕೆ ಹರಕೆ ನಡೆಯುವ ಕಡೆಗೆ ನಡೆಯುತ್ತಾ🧑‍🦯 ಹೊರಟ್ವಿ ದಾರಿ ಮಧ್ಯದಲ್ಲಿ ಮಧ್ಯಪ್ರಿಯರು 🥃 ಹೆಚ್ಚಾಗಿ ಅಡ್ಡಡ್ಡ ಸಿಕ್ಕಿದರು ಅವರನ್ನು ಸಹ ಸ್ನೇಹಿತರನ್ನಾಗಿ ಮಾಡಿಕೊಂಡು ಮುಂದೆ ಸಾಗಿದೆವು , ಮುಂದೆ ಅಲ್ಲೇ ಎದುರಾದ ಆ ನಿಶಾನಿ 🥁ಸುಗ್ಗಿ ಕುಣಿತದವರೊಂದಿಗೆ ಸೇರಿ   ನನಗೆ ಗೊತ್ತಿದ್ದ ಆ ಎರೆಡು ಹಳೆಯ  ಸ್ಟೆಪ್ ಗಳನ್ನೇ ಹಾಕಿ ಅದೇ (ಜಡ್ ಮಣಕಟ್ಟು)  ಸ್ಟೆಪ್ ಹಾಕಿ ಹೇಗೋ ಮ್ಯಾನೇಜ್ ಮಾಡಿದೆ 🤸‍♂️🤾‍♂️🤼ಹಾಗೆ ಮುಂದೆ ಆ ಒನಲು ಬೆಳಕಿನ ದಾರಿಯಲ್ಲಿ ಮುಂದೆ ಸಾಗಿದೆ   ತಕ್ಷಣವೇ ದೇವಸ್ಥಾನದ ಬಳಿ ಇದ್ದ ಜನಸ್ತೋಮವನ್ನು ನೋಡಿ ನಿಬ್ಬೆರಾಗದೆ!! 😳 ಸರಿ ಎಂದು ನನ್ನ ಬೆಲೆ ಬಾಳುವ ಪಾದರಕ್ಷೆಯನ್ನು  ⛸️(ಪ್ಯಾರಗಾನ್100₹) ಅಲ್ಲೇ ತೋಟದೊಳಗೆ ಬಿಚ್ಚಿಟ್ಟು ದೇವರಿಗೆ ದೂರದಿಂದಲೇ ಕೈ ಮುಗಿದು 🙏ಪುರುಸೊತ್ತೇ ಕೊಡದೆ ಕಮಿಟಿಯವರು🎤ಮೈಕಿನಲ್ಲಿ ಹೇಳುತ್ತಿದ್ದ ಮಾಹಿತಿ ಮೇರೆಗೆ ಚಿಕನ್ ಊಟದ ಅಂಕಣವನ್ನು ವನ್ನು ಬಿಟ್ಟು ಫೋರ್ಕ್ ಊಟದ ಅಂಕಣವನ್ನು ಪ್ರವೇಶಿಸಿದೆ ತಡ ಮಾಡದೆ ಅಲ್ಲೇ ನೆಲದ ಮೇಲೆ ಚಕ್ಲುಭಕ್ಕಳು ಹಾಕಿಕೊಂಡು ಕುಳಿತೇ ಬಿಟ್ಟೆ  ನಾನು  ಊಟಕ್ಕೆ ಫಸ್ಟ್ ಪಾರ್ಟಿಯಾಗಿದೆ ನನ್ನ ಅಕ್ಕ ಪಕ್ಕ ಕೆಲವರು ಸೆಕೆಂಡ್ ಪಾರ್ಟಿ ಇದ್ದರು ಎಂದುಕೊಳ್ಳುತ್ತೇನೆ (2 ನೇ ಸಲ ಊಟ😅)k ನನ್ನ ಜೊತೆಗಿದ್ದ ಕೆಲ ಸ್ನೇಹಿತರಿಗೆ ಕುಳಿತುಕೊಳ್ಳಲು ನನ್ನ  ಜೊತೆಯಲ್ಲಿ ಜಾಗ  ಸಿಗಲಿಲ್ವಾ ಅಥವಾ ಅವರೊಂದಿಗೆ ಕುಳಿತುಕೊಳ್ಳಲು ನನಗೆಯೇ ಜಾಗ ಸಿಗಲಿಲ್ವಾ  ಗೊತ್ತಿಲ್ಲ 🤣ನಾವಂತೂ ಅಕ್ಕ ಪಕ್ಕದ ಸರ್ವೆ ನಂಬರ್ ನಲ್ಲಿ ಅದಲು ಬದಲಾಗಿ ಕುಳಿತುಕೊಂಡೆವು ,ಅಲ್ಲಿದ್ದ ಅಷ್ಟು ಭಕ್ತರಿಗೂ ಯಾವುದೇ ನಿರಾಶೆ ಮಾಡದೆ ಕುಳಿತಲ್ಲಿಗೆ ಅಡಿಕೆ ತಟ್ಟೆಯನ್ನು ನೀಡಿ ಊಟವನ್ನು ನೀಡಿದರು ಎಷ್ಟು ಶಿಸ್ತು ಇತ್ತು ಎಂದರೆ ಹುಯಿಗೆರೆ  ಗ್ರಾಮಸ್ಥರಾಗಲಿ ದೇವಸ್ಥಾನದ ಕಮಿಟಿಯವರಾಗಲಿ ಯಾವುದೇ ದರ್ಪದ ಮಾತುಗಳಾಗಲಿ ಒರಟುತನ ವಾಗಲಿ ನಾನು ನೋಡಲೇ ಇಲ್ಲ  ಹೊರಗಿನಿಂದ ಬಂದವರ ಶಿಸ್ತು ,ನೀವು ಸ್ಥಳೀಯರು ಇದ್ದ ಶಿಸ್ತಿನಿಂದಲೇ ಅಷ್ಟೊಂದು ಜನ ಆ ಶಿಸ್ತಿನಲ್ಲಿದ್ದರೆಂದು ಕೊಳ್ಳುತ್ತೇನೆ ,ಹೊಟ್ಟೆ ತುಂಬುವಷ್ಟು ಉಪ್ಪುತುಂಡು ಅನ್ನದ ಊಟ ಕೆಲವರು ಹೆಚ್ಚಾಗಿದನ್ನು ಮನೆಗೆ ತೆಗೆದುಕೊಂಡು ಹೋದವರು ಇದ್ದರು ಅದರಲ್ಲಿ ನಾನು ಒಬ್ಬನಾಗಿದ್ದೆ🙋 k  ಅದೇನೆ ಆಗಿರಲಿ 60ಕ್ಕೆ ಹೆಚ್ಚು ಹರಕೆ ಹಂದಿಗಳು ಕೋಳಿಯ ಲೆಕ್ಕವೇ ಇಲ್ಲವೇನು ಅಷ್ಟನ್ನು ಜವಾಬ್ದಾರಿಯುತವಾಗಿ ಮಾಡಿ ಯಾವುದೇ ಗೊಂದಲವಿಲ್ಲದೆ ಎರಡರಿಂದ ಮೂರು ಸಾವಿರಕ್ಕೂ ಹೆಚ್ಚು ಬಂದಿದ್ದ ಭಕ್ತಾದಿಗಳನ್ನು ಒಂದೇ ಮನಸ್ಥಿತಿಯಲ್ಲಿ ತೆಗೆದುಕೊಂಡು  ಆ ಭಕ್ತಿಯ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದೀರಿ ಮೊದಲನೆಯದಾಗಿ ಹುಯಿಗೆರಿ ಗ್ರಾಮಸ್ಥರಿಗೆ ಹಾಗೂ ಆ ದೇವಸ್ಥಾನದ ಕಮಿಟಿಯವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೆ ಕೊನೆಯದಾಗಿ ಊಟ ಮುಗಿಸಿ ಬಂದ ನಂತರ ನನ್ನ ಪಾದ ರಕ್ಷೆ ನನಗೆ ಸಿಕ್ಕಿತು ನನ್ನ ಭಾವ ಹಾಗೂ ನನ್ನ ಮಾವನ ಪಾದರಕ್ಷೆಯು ಕಳೆದಿತ್ತು  ತೊಂದ್ರೆ ಇಲ್ಲ ಬಿಡು ಮಾರಯ ಎಂದರು ಆ ಮಾತು ಕೇಳಿ ನನಗೆ ನೆಮ್ಮದಿ ಸಿಕ್ಕಿತು ಹಾಗೆಯೇ ಇನ್ನು ಕೆಲ ಮಧ್ಯಪ್ರಿಯರು  ಅವರವರ  ಪಾದ ರಕ್ಷೆ   ಹುಡುಕಿಕೊಳ್ಳುವ ಕಾರ್ಯದಲ್ಲಿ ಬ್ಯುಸಿ ಇದ್ದರು  ಅವರಿಗೆ ಅವರ ಪಾದರಕ್ಷೆ  ಸಿಕ್ಕಿರುವುದೇ ಅನುಮಾನ 😅ನನಗೆ ಅದೇನೇ ಇರಲಿ ಕಾರ್ಯಕ್ರಮಕ್ಕೆ ಹೋಗಿ ತುಂಬಾ ವಿಷಯಗಳನ್ನು ತಿಳಿದುಕೊಂಡೆನು ತಿಳಿದಿದ್ದನ್ನು ನಿಮ್ಮೊಂದಿಗೆ ಹಂಚಿಕೊಂಡಿರುವೆ ಇ೦ತಿ ನಿಮ್ಮ ಕರೆಯದೆ ಬಂದ ಭಕ್ತ.

ನವೀನ್ ಹಾವಳಿ ✍️

About Author

Leave a Reply

Your email address will not be published. Required fields are marked *

You may have missed