लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸ್ಪೀಕರ್ ಸ್ಥಾನಕ್ಕೆ ಖದರ್! 245ರಲ್ಲಿ ಕೇವಲ 95 ಕ್ಕೆ ಉತ್ತರ! ಸಭಾಧ್ಯಕ್ಷರ ‘ಸ್ವಾಭಿಮಾನ’ದ ನಡಿಗೆ!….

1 min read

ಸ್ಪೀಕರ್ ಸ್ಥಾನಕ್ಕೆ ಖದರ್! 245ರಲ್ಲಿ ಕೇವಲ 95 ಕ್ಕೆ ಉತ್ತರ!
ಸಭಾಧ್ಯಕ್ಷರ ‘ಸ್ವಾಭಿಮಾನ’ದ ನಡಿಗೆ!
ವಿಧಾನಸಭೆ ಎಂದರೆ ಅದು ಕೇವಲ ಗೋಡೆಗಳಲ್ಲ, ಜನರ ಧ್ವನಿ. ಆದರೆ, ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸರ್ಕಾರಿ ಯಂತ್ರವೇ ಮೌನಕ್ಕೆ ಶರಣಾದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವೆಲ್ಲಿ? ಶಾಸಕರು ಕೇಳಿದ 245 ಪ್ರಶ್ನೆಗಳ ಪೈಕಿ ಕೇವಲ 95ಕ್ಕಷ್ಟೇ ಉತ್ತರ ಸಿಗುತ್ತದೆ ಎಂದರೆ, ಉಳಿದ 150 ಪ್ರಶ್ನೆಗಳು ಕಸದ ಬುಟ್ಟಿಗೆ ಸೇರಿದಂತೆಯೇ ಸರಿ.
ಸರ್ಕಾರದ ಸಚಿವರು ಸದನಕ್ಕೆ ಗೈರು, ಉತ್ತರ ನೀಡಬೇಕಾದ ಅಧಿಕಾರಿಗಳು ನಾಪತ್ತೆ – ಈ ನಿರ್ಲಕ್ಷ್ಯ ಮತ್ತು ನಿರ್ಲಜ್ಜತನದ ವಿರುದ್ಧ ಸ್ಪೀಕರ್ ಯು.ಟಿ. ಖಾದರ್ ಅವರು ತೋರಿದ ಆಕ್ರೋಶ ಕೇವಲ ಸಿಟ್ಟಲ್ಲ, ಅದು ಸಾಂವಿಧಾನಿಕ ಸ್ಥಾನದ ಘನತೆ.

​ನಮ್ಮ ಕರ್ನಾಟಕದ ತುಳುನಾಡಿನ ಕರಾವಳಿಯ ಮಣ್ಣಿನ ಗುಣವೇ ಹೌದು; ಪಕ್ಷಭೇದ ಮರೆತು ‘ಕರ್ತವ್ಯ ಮೊದಲು’ ಎನ್ನುವ ಕಾರ್ಯತತ್ಪರತೆ ಅಲ್ಲಿನವರ ರಕ್ತದಲ್ಲೇ ಇದೆ. ಸಭಾಧ್ಯಕ್ಷರ ಪೀಠದಲ್ಲಿದ್ದರೂ ತನ್ನದೇ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಖಾದರ್ ಅವರು ಮಣಿಯಲಿಲ್ಲ.
ಸದನದಿಂದ ಹೊರನಡೆಯುವ ಮೂಲಕ ಅವರು ಸರ್ಕಾರಕ್ಕೆ ಕನ್ನಡಿ ಹಿಡಿದರು. ಸೌಜನ್ಯದ ಹೆಸರಲ್ಲಿ ಅಶಿಸ್ತನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಅತಿ ಸ್ಪಷ್ಟವಾಗಿ ರವಾನಿಸುವ ಮೂಲಕ, ಮಂಗಳೂರಿನ ಮಣ್ಣಿನ ಗತ್ತು ಮತ್ತು ನ್ಯಾಯಪರತೆಯನ್ನು ಅವರು ಎತ್ತಿ ಹಿಡಿದಿದ್ದಾರೆ.
​ಸಿಎಂ ಸಿದ್ದರಾಮಯ್ಯ ಅವರು ಮನವೊಲಿಕೆ ಮಾಡಿದ ಬಳಿಕ ಮೂವರು ಅಧಿಕಾರಿಗಳ ತಲೆದಂಡವಾಗುತ್ತಿರಬಹುದು. ಆದರೆ, ಇಲ್ಲಿ ಮುಖ್ಯವಾಗುವುದು ಕೇವಲ ಸಸ್ಪೆನ್ಷನ್ ಅಲ್ಲ, ಬದಲಾಗಿ ಉತ್ತರದಾಯಿತ್ವ.
ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು ಮತ್ತು ಜನರ ಪರವಾಗಿ ಧ್ವನಿ ಎತ್ತಬೇಕಾದ ಸಚಿವರು ಅಧಿವೇಶನವನ್ನೇ ಲಘುವಾಗಿ ಪರಿಗಣಿಸಿದರೆ, ಅದು ಮತದಾರರಿಗೆ ಮಾಡುವ ದ್ರೋಹ. ಸ್ಪೀಕರ್ ಅವರ ಧರಣಿ ಮತ್ತು ಮುಖ್ಯಮಂತ್ರಿಗಳ ಶಿಸ್ತು ಕ್ರಮ, ಇನ್ನು ಮುಂದೆಯಾದರೂ ವಿಧಾನಸಭೆಯನ್ನು ಗಂಭೀರವಾಗಿ ಪರಿಗಣಿಸಲು ಸರ್ಕಾರಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಲಿ.
​ಕೊನೆಗೂ ಸ್ಪೀಕರ್ ಖಾದರ್ ಅವರ ಸಿಟ್ಟಿನಿಂದಾಗಿ ಸದನಕ್ಕೆ ಮತ್ತೆ ಕಳೆ ಬಂದಿದೆ. ಜನಪರ ಕಾಳಜಿಗಿಂತ ಹಿರಿದಾದುದು ಯಾವುದೂ ಇಲ್ಲ ಎಂದು ಸಾರಿದ ಈ ಘಟನೆ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಒಂದು ಅಪರೂಪದ ಮತ್ತು ಶ್ಲಾಘನೀಯ ನಡೆ. ಸಭಾಧ್ಯಕ್ಷರ ಸ್ಥಾನವನ್ನು ಯಾವಾಗ ಮತ್ತು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಖಾದರ್ ಅವರು ಸರಿಯಾದ ಸಂದರ್ಭದಲ್ಲೇ ಸಾಬೀತುಪಡಿಸಿದ್ದಾರೆ. ಇದಕ್ಕೆ ಕರಾವಳಿಯ ಕರ್ತವ್ಯನಿಷ್ಠೆಯೇ ಸಾಕ್ಷಿ.

ಜಿತೇಂದ್ರ ಕುಂದೇಶ್ವರ

 

About Author

Leave a Reply

Your email address will not be published. Required fields are marked *

You may have missed