*ಕೊಟ್ಟಿಗೆಹಾರ,ಜಾವಳಿ,ಬಾಳೂರು ಚರ್ಚ್ ವತಿಯಿಂದ ಸಿರಿಗೆ ರೂ16ಸಾವಿರ ಸಹಾಯಧನ…..
1 min read
*ಕೊಟ್ಟಿಗೆಹಾರ,ಜಾವಳಿ,ಬಾಳೂರು ಚರ್ಚ್ ವತಿಯಿಂದ ಸಿರಿಗೆ ರೂ16ಸಾವಿರ ಸಹಾಯಧನ* ಪ್ರಜಾವಾಣಿ ವಾರ್ತೆ. ಮೂಡಿಗೆರೆ: ಕೊಟ್ಟಿಗೆಹಾರ,ಬಾಳೂರು ಹಾಗೂ ಜಾವಳಿ ಚರ್ಚ್ ವತಿಯಿಂದ ಭಾನುವಾರದ ಪೂಜೆಯಲ್ಲಿ ಸಂಗ್ರಹವಾದ ಹಣವನ್ನು ಆಟೋ ಅಪಘಾತದಲ್ಲಿ ಹಾಸಿಗೆ ಹಿಡಿದಿರುವ ಕುಮಾರಿ ಸಿರಿಗೆ ಚಿಕಿತ್ಸೆ ವೆಚ್ಚವಾಗಿ ಸಹಾಯ ಧನ ನೀಡಲಾಗಿದೆ ಎಂದು ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರು ರೆ.ಫಾ.ವಿಲಿಯಂ ಬರ್ನಾರ್ಡ್ ತಿಳಿಸಿದ್ದಾರೆ. ಕೊಟ್ಟಿಗೆಹಾರದ ಮಹೇಂದ್ರ ಹಾಗೂ ಶಿಲ್ಪ ದಂಪತಿಯ ಪುತ್ರಿ ಸಿರಿ ಚಾರ್ಮಾಡಿ ಘಾಟಿಯಲ್ಲಿ ಆಟೋ ಅಪಘಾತವಾಗಿ ಮೆದುಳಿಗೆ ಹಾನಿಯಾಗಿ ದೇಹದ ಒಂದು ಬದಿ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ.ಅವರ ಚಿಕಿತ್ಸೆಗೆ 15 ಲಕ್ಷದ ಹಣ ಬೇಕಾಗಿದೆ. ಕಾರುಣ್ಯ ನಿಧಿ ಸಂಘಟನೆಯ ಸದಸ್ಯರು ರೂ3.42 ಲಕ್ಷ ಹಾಗೂ ಇತರೆ ದಾನಿಗಳು ರೂ3 ಲಕ್ಷ ಒಟ್ಟು ರೂ 6.42 ಲಕ್ಷ ಸಂಗ್ರಹವಾಗಿದೆ.ಇದೇ 18ರಂದು ಬೆಂಗಳೂರಿನ ಆಸ್ಪತ್ರೆಗೆ ಮಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗುತ್ತದೆ’ಎಂದು ಸಿರಿಯ ತಂದೆ ಆಟೋ ಮಹೇಂದ್ರ ತಿಳಸಿದ್ದಾರೆ.ನಮ್ಮ ಕ್ರೈಸ್ತ ಭಕ್ತಾಧಿಗಳು ಕೂಡ ಭಾನುವಾರ ಪೂಜೆಯಲ್ಲಿ ಸಿರಿಗಾಗಿ ವಿಶೇಷವಾಗಿ ಪ್ರಾರ್ಥಿಸಿ ರೂ16 ಸಾವಿರ ಹಣ ಸಂಗ್ರಹಿಸಿ ಅವರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ವಾಳೆಯ ಅಧ್ಯಕ್ಷೆ ತೆರೇಸಿಯಾ ಬೇಬಿ,ವಿನ್ಸೆಂಟ್ ಲೋಬೊ,ಐರಿನ್ ಲೋಬೊ,ಜೆಸಿಂತಾ,ಪ್ರೆಡ್ರಿಕ್ ಡಿಸೋಜ,ಅನಿಶಾ ಮೊಂತೆರೊ ಮತ್ತಿತರರು ಇದ್ದರು

