ಕಾಲ ದೇಶದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿಕೊಳ್ಳದೆ ಎಲ್ಲಾ ಹಾಲನ್ನು ಕುಡಿದು ಹೇಗೆ ಜೀರ್ಣಿಸಿಕೊಳ್ಳಬೇಕು ಎಂಬುದೇ ಇಂದಿನ ನವ ಮಾಧ್ಯಮಗಳಿಗೆ ಕೃತಕ ಬುದ್ಧಿಮತ್ತೆ ಮಾಡುತ್ತಿರುವ ಪಾಠವಾಗಿದೆ…
1 min read
ಅವಿನ್ ಟಿವಿ ಸುದ್ದಿಜಾಲ ✍️: ಕಾಲ ದೇಶದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿಕೊಳ್ಳದೆ ಎಲ್ಲಾ ಹಾಲನ್ನು ಕುಡಿದು ಹೇಗೆ ಜೀರ್ಣಿಸಿಕೊಳ್ಳಬೇಕು ಎಂಬುದೇ ಇಂದಿನ ನವ ಮಾಧ್ಯಮಗಳಿಗೆ ಕೃತಕ ಬುದ್ಧಿಮತ್ತೆ ಮಾಡುತ್ತಿರುವ ಪಾಠವಾಗಿದೆ.
ಚಿಕ್ಕಮಗಳೂರು ಮಾ ೧೧: ಒಂದರ್ಥದಲ್ಲಿ ವಿಜ್ಞಾನ ಮತ್ತು ಗಣಿತವನ್ನು ಭಾರತದ ಈ ನೆಲ ಜಗತ್ತಿಗೆ ಮನಗಾಣಿಸಿದ ಬಗೆಯನ್ನು ಮರೆಯಬಾರದು ಮತ್ತು ಪುನಃ ಅದನ್ನು ಭಾರತದ ನೆಲದಿಂದ ನಿಂತು ಜಗತ್ತಿಗೆ ಈಗ ಮತ್ತೊಮ್ಮೆ ಹೇಗೆ ಮನವರಿಕೆ ಮಾಡಿಕೊಡಬೇಕು ಎಂಬ ಈ ಪ್ರಶ್ನೆಯನ್ನು ನಾವು ಹೊಸತಂತ್ರಜ್ಞಾನವಾದ IA (ಕೃತಕ ಬುದ್ಧಿಮತ್ತೆ) ಮುಂದೇ ಕೇಳಿದರೆ ಅದು ಏನು ಉತ್ತರ ಕೊಡುತ್ತದೆ ಎಂಬ ಕುತೂಹಲ ನಮ್ಮೆಲ್ಲರದಾಗಿರಲಿ.
ಹೊಸ ಹೊಸ ತಂತ್ರಜ್ಞಾನಗಳು ,ಸಾಮಾಜಿಕ ಜಾಲತಾಣಗಳು, ನವ ಮಾಧ್ಯಮಗಳ ಬಳಕೆಯನ್ನು ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳಬೇಕು, ವಿನಾಕಾರಣ ಅದನ್ನು ಎದೆಗವಚಿಕೊಂಡು ಭವಿಷ್ಯದಲ್ಲಿ ಬಳಲುವಂತಾಗಬಾರದು ಎಂಬ ಒಂದು ಅವಲೋಕನದೊಂದಿಗೆ ನವಮಾಧ್ಯಮಗಳ ತರಬೇತಿ ಶಿಬಿರ ಇದೇ 2026 ಮಾರ್ಚ್ 14 ಮತ್ತು 15 ರಂದು ಚಿಕ್ಕಮಗಳೂರಿನಲ್ಲಿ ಆರಂಭವಾಗಲಿದೆ.
ಬರಹಗಾರರು, ರೈತಾಪಿ ವರ್ಗ, ವಿದ್ಯಾರ್ಥಿ ಯುವ ಜನರು, ಮಾಧ್ಯಮದ ಮಿತ್ರರು, ಸಾಹಿತ್ಯ ಸಂಸ್ಕೃತಿಯ ಒಡನಾಡಿಗಳು, ವಿವಿಧ ಕ್ಷೇತ್ರದ ಪರಿಣಿತರೊಡಗೂಡಿ ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳೊಂದಿಗೆ ನಡೆಯಲಿರುವ ಈ ಶಿಬಿರಲ್ಲಿ 70 ರಿಂದ 80 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
ಯಾವುದೇ ಪ್ರವೇಶ ಶುಲ್ಕವಿಲ್ಲದೆ ಉಚಿತ ಊಟ ಮತ್ತು ವಸತಿಗಳೊಂದಿಗೆ ನಡೆಯಲಿರುವ ಈ ನವ ಮಾಧ್ಯಮಗಳ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಆಸಕ್ತರು ಆದಷ್ಟು ಬೇಗ
7619521477
9980772410
8861518868
9019697655
ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಲು ಈ ಕಾರ್ಯಕ್ರಮದ ಆಯೋಜಕರಾದ ಹೊನ್ನ ಬಿತ್ತೇವು ಹೊಲಕೆಲ್ಲ ಬಳಗ ಮತ್ತು ನ್ಯೂಸ್ ಕಿಂಗ್ ಸುದ್ದಿ ವಾಹಿನಿಯು ವಿನಂತಿಸಿದೆ.
•••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …… ✍️
ಚಿಕ್ಕಮಗಳೂರು

