लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹೊಣೆಗಾರಿಕೆ ನಮ್ಮದೆ ! ಕುದುರೆ ಕುಂಟುತ್ತಿದೆ ಎಂದರೆ ಕುದುರೆಯನ್ನು ಬದಲಾಯಿಸುವುದಲ್ಲ ~ ಸವಾರನನ್ನು ಬದಲಾಯಿಸಬೇಕು…

1 min read

ಅವಿನ್ ಟಿವಿ ಸುದ್ದಿಜಾಲ ✒️: ಹೊಣೆಗಾರಿಕೆ ನಮ್ಮದೆ ! ಕುದುರೆ ಕುಂಟುತ್ತಿದೆ ಎಂದರೆ ಕುದುರೆಯನ್ನು ಬದಲಾಯಿಸುವುದಲ್ಲ ~ ಸವಾರನನ್ನು ಬದಲಾಯಿಸಬೇಕು

: ಡಾ. ಹೆಚ್.ಎಸ್.ಅನುಪಮಾ ಅಭಿಮತ.

ಚಿಕ್ಕಮಗಳೂರು: ಭಾರತದ ಸಾಮಾಜಿಕ ಸುಧಾರಣಾ ಚಳುವಳಿಗಳ ಮೇಲೆ ವಚನಗಳ ಪ್ರಭಾವ ಅನನ್ಯವಾದದ್ದು, ವಚನಗಳು ಕೇವಲ ಸಾಹಿತ್ಯಿಕ ಪಠ್ಯಗಳಲ್ಲ ಅವು ಅನುಭವದಿಂದ ದಕ್ಕಿದ ಆಚರಣಾ ಪಠ್ಯಗಳು, ವಿಶ್ವ ಮಾನ್ಯತೆ ಪಡೆದಿರುವ ಇಂತಹ ವಚನಗಳ ಆಶಯಗಳನ್ನು ಕಾರ್ಯರೂಪಕ್ಕೆ ಇಳಿಸಲು ನಮ್ಮನ್ನು ನಾವು ಆತ್ಮಶೋಧಕ್ಕೆ ಒಳಪಡಿಸಿಕೊಳ್ಳಬೇಕಾಗಿದೆ ಎಂದು ಸಾಹಿತಿ ವಿಮರ್ಶಕಿ ಹಾಗೂ ನಾಡಿನ ಜನಪ್ರಿಯ ವೈದ್ಯೆ ಡಾ. ಹೆಚ್. ಎಸ್. ಅನುಪಮಾ ಅಭಿಪ್ರಾಯ ಪಟ್ಟರು.

ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇತ್ತೀಚೆಗೆ ನಗರದ ಒಕ್ಕಲಿಗರ ಭವನದಲ್ಲಿ ಹಮ್ಮಿಕೊಂಡಿದ್ದ ಶರಣ ಸಂಭ್ರಮ ೪೦ರ ವಿಚಾರಗೋಷ್ಠಿಯಲ್ಲಿ *ನಮ್ಮೊಳಗಿನ ಶೋಧನೆಗೆ ವಚನಗಳ ಓದು* ಕುರಿತು ವಿಚಾರ ಮಂಡನೆ ಮಾಡಿ ಸಂವಾದ ನಡೆಸಿದರು.

ರಾಜಸಿಂಹಾಸನಕ್ಕೂ ಶೂನ್ಯಸಿಂಹಾಸನಕ್ಕೂ ವ್ಯತ್ಯಾಸವಿದೆ, ಕಾಯಕಗಳು ನಮ್ಮ ನಮ್ಮ ಅಹಂಕಾರದಿಂದ ಬಳಲಬಾರದು, ಬಾಳೆಯ ದಿಂಡನ್ನು ಸುಲಿಯುತ್ತಾ ಸುಲಿಯುತ್ತಾ ಹೋದಂತೆ ಕೊನೆಗೆ ಅ ಬಾಳೆದಿಂಡಿನಲ್ಲಿ ಏನು ಉಳಿಯುವುದಿಲ್ಲ ಆದರೆ ಅದು ಒಂದು ವಿನೀತ ಭಾವದಿಂದ ಬಯಲಲ್ಲಿ ಬಯಲಾದಂತೆ ಎಲ್ಲವೂ ಆಗಿರುತ್ತದೆ, ಈ ರೀತಿ ಚಳುವಳಿಗಳು, ಸಂಘಟನೆಗಳು, ಆಂದೋಲನಗಳು , ಜನಪರ ಹೋರಾಟಗಳು ಅಹಂಕಾರವನ್ನು ಕಳೆದುಕೊಂಡು, ವ್ಯಕ್ತಿ ಪ್ರತಿಷ್ಠೆಯನ್ನು ಕಳಚಿಟ್ಟು ಆತ್ಮಶೋದದೊಂದಿಗೆ ನಮ್ಮನ್ನು ನಾವು ಅರಿಯಬೇಕಾಗಿದೆ , ಈ ನಿಟ್ಟಿನಲ್ಲಿ 40ರ ಸಂಭ್ರಮ ಹೊಸ ಭಾಷ್ಯ ಬರೆದು ಮುಂದಡಿ ಹೆಜ್ಜೆ ಇಡಲಿ ಎಂದು ಮೌಲಿಕವಾದ ಮಾತುಗಳನ್ನು ಗೋಷ್ಠಿಯಲ್ಲಿ ತೆರೆದಿಟ್ಟರು.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed