ನ್ಯಾಯಾಧೀಶರ ಹುದ್ದೆಗೆ ನೇಮಕವಾದ ಚಿಕ್ಕಮಗಳೂರು ಜಿಲ್ಲೆಯ ಮತ್ತೋರ್ವ ಪ್ರತಿಭೆ ಮೂಡಿಗೆರೆಯ ನಿತಿನ್ ಕುವೆಲ್ಲೋ…
1 min read
ಅವಿನ್ ಟಿವಿ ಸುದ್ದಿಜಾಲ ✒️: ಸಿವಿಲ್ ನ್ಯಾಯಾಧೀಶರ ನೇಮಕಕ್ಕಾಗಿ ರಾಜ್ಯ ಉಚ್ಚ ನ್ಯಾಯಾಲಯ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ನ್ಯಾಯಾಧೀಶರ ಹುದ್ದೆಗೆ ನೇಮಕವಾದ ಚಿಕ್ಕಮಗಳೂರು ಜಿಲ್ಲೆಯ ಮತ್ತೋರ್ವ ಪ್ರತಿಭೆ ಮೂಡಿಗೆರೆಯ ನಿತಿನ್ ಕುವೆಲ್ಲೋ.




ಚಿಕ್ಕಮಗಳೂರು ಫೆ ೧೮:
ರಾಜ್ಯ ಉಚ್ಚ ನ್ಯಾಯಾಲಯ ಒಟ್ಟು 83 ಮಂದಿ ಸಿವಿಲ್ ನ್ಯಾಯಾಧೀಶರನ್ನು ನೆನ್ನೆ ನೇಮಕ ಮಾಡಿದೆ.
ಮೂಡಿಗೆರೆ ಪಟ್ಟಣದ ಬಿಳಗುಳ ಗ್ರಾಮದ ಲಿಯೋ ಕುವೆಲ್ಲೋ ಮತ್ತು ಅನಿತ ಕುವೆಲ್ಲೋ ದಂಪತಿಗಳ ಪುತ್ರರಾದ ನಿತಿನ್ ಕುವೆಲ್ಲೋ,ಮೂಡಿಗೆರೆ ಸೈಂಟ್ ಮಾರ್ಥಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ, ನಂತರ ಮಂಗಳೂರಿನ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದವರಾಗಿದ್ದಾರೆ.
ನಿತಿನ್ ಅವರು 2021 ರಿಂದ ಮೂಡಿಗೆರೆ ನ್ಯಾಯಾಲಯದಲ್ಲಿ ಹಿರಿಯ ವಕೀಲ ಡಿ.ಎಸ್ ಸುದೀರ್ ಅವರೊಂದಿಗೆ ಸಹಾಯಕ ವಕೀಲರಾಗಿ ಕೆಲಸ ಮಾಡುತ್ತಿದ್ದರು.
ಸಿವಿಲ್ ನ್ಯಾಯಾಧೀಶರ ಆಯ್ಕೆ ಪರೀಕ್ಷೆಯನ್ನು ತೆಗೆದುಕೊಂಡು ಸತತ ಪರಿಶ್ರಮ ಮತ್ತು ಪ್ರಯತ್ನದಿಂದ ನ್ಯಾಯಾಧೀಶರಾಗಬೇಕೆಂಬ ಕನಸನ್ನು ತನ್ನ ಚಿಕ್ಕ ವಯಸ್ಸಿನಲ್ಲಿಯೇ ಈಡೇರಿಸಿಕೊಂಡಿದ್ದಾರೆ.
ನಿತಿನ್ ಅವರ ಸಾಧನೆಗೆ
ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕರಾದ
ಹರ್ಷ ಮೇಲ್ವಿನ್ ಲಸ್ರಾದೋ
ರವರು ನಿತಿನ್ ಅವರು ನ್ಯಾಯಾಧೀಶರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಮನೆಗೆ ಭೇಟಿ ನೀಡಿ ಅಭಿನಂದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪೆಡ್ಡಿ ಲೋಬೊ
ಉಪಾಧ್ಯಕ್ಷರಾದ ವಿಕ್ಟರ್ ಮಾರ್ಟಿಸ್ ಉಪಸ್ಥಿತರಿದ್ದರು.
••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✒️
ಚಿಕ್ಕಮಗಳೂರು

