लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*”ಭಾರತೀಯ ರೆಡ್ ಕ್ರಾಸ್ ಸಂಸ್ಥೆ” – ಮೂಡಿಗೆರೆ ತಾಲ್ಲೂಕು ಘಟಕ ಮತ್ತು ಜಿಲ್ಲಾ ಘಟಕ ಇವರ ವತಿಯಿಂದ ಶ್ರವಣದೋಷ ಹೊಂದಿದ್ದು, ಗುರುತಿಸಲಾದ 5 ಮಂದಿ ಫಲಾನುಭವಿಗಳಿಗೆ ‘ಶ್ರವಣ ಸಾಧನ’ಗಳನ್ನು ಮೂಡಿಗೆರೆ ತಾಲ್ಲೂಕು ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.*

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪರವಾಗಿ ಮಾನ್ಯ ತಹಸೀಲ್ದಾರರು ಮತ್ತು ಸಂಸ್ಥೆಯ ಪದನಿಮಿತ್ತ ಅಧ್ಯಕ್ಷರೂ ಆದಂತಹ ಶ್ರೀಮತಿ. ಅಶ್ವಿನಿ ಅವರು ಫಲಾನುಭವಿಗಳಿಗೆ ಶ್ರವಣ ಸಾಧನಗಳನ್ನು ವಿತರಿಸಿ ವಿಪತ್ತು ನಿರ್ವಹಣೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ‘ಭಾರತೀಯ ರೆಡ್ ಕ್ರಾಸ್ ಸಂಸ್ಥೆ’ಯ ಸೇವಾ ಕಾರ್ಯಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಈ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗುವ ಮೂಲಕ ಸಂಸ್ಥೆಯನ್ನು ಬಲಪಡಿಸುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚಿಕ್ಕಮಗಳೂರು ಜಿಲ್ಲಾ ಘಟಕದ ಸಭಾಪತಿಗಳಾದ ಶ್ರೀ. ಪ್ರದೀಪ್ ಗೌಡ ಅವರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಹಾಗೂ ವಿಪತ್ತು ನಿರ್ವಹಣಾ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮತ್ತು ಸ್ವಸ್ಥ – ಸುಸ್ಥಿರ ಸಮಾಜದ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯತ್ವವನ್ನು ಪಡೆಯುವುದರ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಂಸ್ಥೆಯ ಮಾನವೀಯ ಚಟುವಟಿಕೆಗಳಿಗೆ ಬೆಂಬಲಿಸುವಂತೆ ಕೋರಿದರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ – ಮೂಡಿಗೆರೆ ತಾಲ್ಲೂಕು ಘಟಕದ ಸಭಾಪತಿಗಳಾದ ಶ್ರೀ. ಪ್ರವೀಣ್ ಬಣಕಲ್, ಉಪ ಸಭಾಪತಿಗಳಾದ ಶ್ರೀ. ಪೂರ್ಣೇಶ್ ಮತ್ತಾವರ, ಕಾರ್ಯದರ್ಶಿ ಶ್ರೀ. ಹರ್ಷ ಹಳೇಕೋಟೆ, ನಿರ್ದೇಶಕರುಗಳಾದ ಶ್ರೀ. ಪ್ರಶಾಂತ್.ಎಂ.ಎ, ಶ್ರೀ. ಅಕ್ಷತ್ ಪಟ್ಟದೂರು ಹಾಗೂ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶ್ರೀ. ಜಯರಾಂ ಬಿದರಹಳ್ಳಿ, ಸೀನಿಯರ್ ಜೇಸಿಸ್ ಸಂಸ್ಥೆಯ ಶ್ರೀ. ಮನಮೋಹನ್, ರೋಟರಿ ಸಂಸ್ಥೆಯ ಶ್ರೀ. ವಿನೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed