लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಪತ್ರಕರ್ತನಿಂದಲೆ ಪಾದಯಾತ್ರೆ..ಆಸ್ಪತ್ರೆ ಉನ್ನತಿಕರಣಕ್ಕೆ..

1 min read

‎ಪತ್ರಕರ್ತನಿಂದಲೆ ಪಾದಯಾತ್ರೆ..ಆಸ್ಪತ್ರೆ ಉನ್ನತಿಕರಣಕ್ಕೆ..
‎
‎
ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ 1944 ನೇ ಇಸವಿಯಲ್ಲಿ ಕಟ್ಟಿಸಲಾಗಿದ್ದು 82 ವರ್ಷಗಳು ಪೂರ್ಣಗೊಂಡಿದೆ.
‎ಇದುವರೆಗೂ ಬರಿ ದುರಸ್ತಿ ದುರಸ್ತಿ ಮಾತ್ರ ನಡೆಯುತ್ತಿದೆ ಈ ಹಿಂದೆ ಎಂಪಿ ಕುಮಾರಸ್ವಾಮಿ ಶಾಸಕರಾಗಿದ್ದಾಗ ಆಸ್ಪತ್ರೆಯನ್ನು  ಮೇಲ್ದರ್ಜೆಗೆ ಉನ್ನತಿಕರಿಸಲು ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು ಬಳಿಕ ಆ ಯೋಜನೆ ಕೂಡಿ ಬರಲಿಲ್ಲ, ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ವರದಿಗಾರನಾಗಿ ನಾನು ಕೆಲಸ ಪ್ರಾರಂಭಿಸಿದ ಮೇಲೆ ಪತ್ರಿಕೆಯಲ್ಲಿ ವಿಶೇಷ ವರದಿಯನ್ನು ಪ್ರಕಟಿಸಿದೆ ಸುದ್ದಿಯನ್ನು ಮಾಡಿದೆ ಆಲ್ದೂರು ಭಾಗದ ಕಾಂಗ್ರೆಸ್ ಮುಖಂಡರ ಮನೆಗೆ ಮಾನ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದಾಗ ವಯಕ್ತಿಕವಾಗಿ ತೆರಳಿ, ಆಸ್ಪತ್ರೆಯನ್ನು ಉನ್ನತೀಕರಿಸಿ ಸಮುದಾಯ ಆರೋಗ್ಯ ಕೇಂದ್ರ ವನ್ನಾಗಿ ಪರಿವರ್ತಿಸುವಂತೆ ವಿಶೇಷ ಮನವಿ ಮಾಡಿದೆ.
‎ಸಂಬಂಧಪಟ್ಟ ದಾಖಲಾತಿಗಳನ್ನು ಒದಗಿಸುವಂತೆ ಅವರ ಆಪ್ತರು ತಿಳಿಸಿದ ಬಳಿಕ ನಾನು ಆಸ್ಪತ್ರೆಯಿಂದ ದಾಖಲಾತಿಗಳನ್ನು ಒಟ್ಟುಗೂಡಿಸಿ ಅವರ ಬಳಿ ಕಳುಹಿಸಿಕೊಟ್ಟೆ ಆಸ್ಪತ್ರೆಯಿಂದಲೂ ದಾಖಲಾತಿ ಸಿದ್ಧಪಡಿಸಿ ಇಲಾಖೆ ಮೂಲಕ ಕಳುಹಿಸಿಕೊಟ್ಟರು ಆರೋಗ್ಯ ಸಚಿವರ ಕಾರ್ಯಕ್ರಮದ ಸಮ್ಮುಖದಲ್ಲಿ ಶಾಸಕಿ ನಯನ ಮೊಟ್ಟಮ್ಮನವರು ಕೂಡ ಇದ್ದರು ಇಷ್ಟೆಲ್ಲಾ ಪ್ರಯತ್ನ ಆದರು ಯಾವುದೇ ಫಲ ಕೊಡಲಿಲ್ಲ, ಪತ್ರಿಕೆ ಜಾಹೀರಾತು ಸಂಬಂಧ ವಿದ್ಯಾ ಕಾಫಿ ಕ್ಯೂರಿಂಗ್ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಭಟ್ ರವರನ್ನು ಭೇಟಿ ಮಾಡುವ ಅವಕಾಶವನ್ನು ನಮ್ಮೂರಿನ ಮುಖಂಡರು ಕಾಫಿ ಕ್ಯೂರಿಂಗ್ ನ ನಿರ್ವಹಣ ಮುಖ್ಯಸ್ಥರಾದ
‎ಭಾನುಪ್ರಕಾಶ್ ಸಭೆ ಏರ್ಪಡಿಸಿಕೊಟ್ಟಿದ್ದರು ಆಗ ಶ್ಯಾಮ್ ಪ್ರಸಾದ್ ರವರು ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಒಂದು ಕೋಟಿ ವೆಚ್ಚದಲ್ಲಿ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ ಎಂಬಂತೆ ನಿರ್ಮಿಸಿ ಕೊಟ್ಟಿರುವ ಉದಾಹರಣೆಯನ್ನು ತಿಳಿಸಿ ಸಮಾಜಮುಖಿ ಕೆಲಸಗಳನ್ನು ಅವರ ಸಂಸ್ಥೆ ಕಡೆಯಿಂದ ಮಾಡುತ್ತಿರುವ ಮಾಹಿತಿಯನ್ನು ಹಂಚಿಕೊಂಡರು ಅದರಲ್ಲಿ ಗೋಶಾಲೆ ನಿರ್ಮಾಣವನ್ನು ಮಾಡಿರುವುದನ್ನು ಕೂಡ ಉಲ್ಲೇಖಿಸಿದರು ಆಗ ನಾನು ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ ಕುರಿತು ಚರ್ಚಿಸಿದೆ ಕೂಡಲೇ ಸಂಪೂರ್ಣವಾಗಿ ನಿರ್ಮಿಸಿ ಕೊಡುವ ಭರವಸೆಯ ಮಾತನ್ನು ಹೇಳಿದರು. ಆದ್ದರಿಂದಲೇ ನಾನು ಇಂದು ಮುಂಜಾನೆ ಆರು ಗಂಟೆಗೆ ಆಲ ದೂರು ಮುಖ್ಯ ವೃತ್ತಗಳಾದ

 

ಅಂಬೇಡ್ಕರ್ ವೃತ್ತ ಮತ್ತು ನಾಡಪ್ರಭು ಕೆಂಪೇಗೌಡ ವೃತ್ತಕ್ಕೆ ನಮಿಸಿ ಮುಂಜಾನೆ ಆರು ಗಂಟೆಗೆ ಆಸ್ಪತ್ರೆಯನ್ನು ಉನ್ನತೀಕರಿಸುವಂತೆ ಆಲ್ದೂರಿನಿಂದ ಮೂಡಿಗೆರೆ ವರೆಗೆ ಒಬ್ಬಂಟಿಯಾಗಿ ಪಾದಯಾತ್ರೆ ನಡೆಸಿ ಮಾನ್ಯ ಶಾಸಕರಾದ ನಯನ ಮೋಟಮ್ಮ ನವರಿಗೆ ಮನವಿ ಪತ್ರ ಸಲ್ಲಿಸಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲು ದಾನಿಗಳು ಸಿದ್ದರಿರುವ ಮಾಹಿತಿಯನ್ನು ಹಂಚಿಕೊಂಡಿದ್ದು ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸದನದಲ್ಲಿ ಕೂಡ ನಾನು ಆರೋಗ್ಯ ಕೇಂದ್ರದ ಉನ್ನತೀಕರಣ ಕುರಿತು ಚರ್ಚಿಸಿದ್ದೆ ಎನ್ನುವ ಮಾಹಿತಿಯನ್ನು ತಿಳಿಸಿ ಆಸ್ಪತ್ರೆ ನಿರ್ಮಾಣ ಮಾಡಲು ಸಿದ್ದರಿರುವ ಸಂಸ್ಥೆಯ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಕೋರಿದ್ದಾರೆ.

About Author

Leave a Reply

Your email address will not be published. Required fields are marked *

You may have missed