ಸಿಡಿಎ ಅಧ್ಯಕ್ಷ ಸ್ಥಾನ ದಲಿತರಿಗೆ ಕೊಡಿ: 200.ಕ್ಕೂ ಹೆಚ್ಚು ಜನ ಶಾಸಕರರಲ್ಲಿ ವಿನಂತಿ..
1 min read




ಸಿಡಿಎ ಅಧ್ಯಕ್ಷ ಸ್ಥಾನ ದಲಿತರಿಗೆ ಕೊಡಿ:
200.ಕ್ಕೂ ಹೆಚ್ಚು ಜನ ಶಾಸಕರರಲ್ಲಿ ವಿನಂತಿ..
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಸಿಡಿಎ) ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಪರಿಶಿಷ್ಟ ಜನಾಂಗದ ಮುಖಂಡ ಹಿರೇಮಗಳೂರು ರಾಮ ಚಂದ್ರಗೆ ನೀಡಬೇಕೆಂದು ಕ್ಷೇತ್ರದ ಕಾಂಗ್ರೆಸ್ನ ದಲಿತ ಮುಖಂಡರು ಭಾನುವಾರ ಶಾಸಕ ಎಚ್.ಡಿ. ತಮ್ಮಯ್ಯಗೆ ಮನವಿ ಸಲ್ಲಿಸಿದರು. ಒಪ್ಪಂದದಂತೆ ಕಳೆದ ಅಕ್ಟೋಬರ್ಗೆ ಸಿಡಿಎ ಅಧ್ಯಕ್ಷ ಅವಧಿ ಪೂರ್ಣ ಗೊಂಡಿದೆ.
ಹೀಗಾಗಿ, ಮುಂದಿನ ಸಿಡಿಎ ಅಧ್ಯಕ್ಷ ಅವಧಿಗೆ ಹಿರೇಮಗಳೂರು ರಾಮಚಂದ್ರ ಅವರಿಗೆ ಅವಕಾಶ ನೀಡಬೇಕು. ಈ ಮೂಲಕ ದಲಿತರ ಏಳಿಗೆಗೆ ಶ್ರಮಿಸಬೇಕು ಎಂದು ಮುಖಂಡರು ಒತ್ತಾಯಿಸಿದರು. ಕಳೆದ ಮೂರುವರೆ ದಶಕಗಳಿಂದ ರಾಮಚಂದ್ರ ಅವರು ಸಕ್ರಿಯ ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಯಲ್ಲಿ ದುಡಿದಿದ್ದಾರೆ. ಕಳೆದ ಭಾರಿ ಕಾರಣಾಂತರಗಳಿಂದ ಸಿಡಿಎ ಅಧ್ಯಕ್ಷ ಹುದ್ದೆ ದಲಿತರ ಕೈತಪ್ಪಿತ್ತು. ಈ ಬಾರಿಯಾದರೂ ದಲಿತ ಮುಖಂಡ ರನ್ನು ಪರಿಗಣಿಸಬೇಕು ಎಂದರು. ಇದರಿಂದ ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆ ಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಗದೀಶ್, ಶಿವಾಜಿ, ಪರಮೇಶ್, ವೆಂಕಟೇಶ್, ಸಂತೋಷ್, ಜಗದೀಶ್, ಶಾಂತ ಕುಮಾರ್, ಶಿವಕುಮಾರ್, ಚಂದ್ರ ಶೇಖರ್, ಶಿವಕುಮಾರ್, ಧರ್ಮ ರಾಜ್ ಮೊದಲಾದವರು ಇದ್ದರು.

