लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶರಣು ಎಂದರೆ ಶರಣು ಶರಣಾರ್ಥಿ ಎಂದು ತಲೆಬಾಗಿ ಕೈಮುಗಿದು ಹೇಳಿದ ಸಂಸ್ಕೃತಿ ಶರಣ ಸಂಸ್ಕೃತಿ,

1 min read

ಅವಿನ್ ಟಿವಿ ಸುದ್ದಿಜಾಲ ✒️: ಶರಣು ಎಂದರೆ ಶರಣು ಶರಣಾರ್ಥಿ ಎಂದು ತಲೆಬಾಗಿ ಕೈಮುಗಿದು ಹೇಳಿದ ಸಂಸ್ಕೃತಿ ಶರಣ ಸಂಸ್ಕೃತಿ, ಇಂತಹ ಶರಣ ಸಂಸ್ಕೃತಿಯ ಸಾರಸತ್ವವನ್ನು ಕಾಪಿಟ್ಟುಕೊಳ್ಳಬೇಕಾಗಿರುವುದು ವರ್ತಮಾನದ ತುರ್ತು.

ಚಿಕ್ಕಮಗಳೂರು ಜ 31: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಇದೇ ಫೆಬ್ರುವರಿ 09 ರಿಂದ 11ರ ವರೆಗೆ ಚಿಕ್ಕಮಗಳೂರು ನಗರದಲ್ಲಿ ನಡೆಯಲಿರುವ ವಿಚಾರಗೋಷ್ಠಿ ಮತ್ತು 40ರ ಶರಣ ಸಂಭ್ರಮದ ಸಿದ್ಧತೆಯ ಪ್ರಯುಕ್ತ ಚಿಕ್ಕಮಗಳೂರಿನ ಕಲ್ಯಾಣ ನಗರ ಸಾಹಿತ್ಯ ವೇದಿಕೆ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆಯು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಡೆಯಿತು. ಈ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಿ ತೀರ್ಮಾನಿಸಲಾಯಿತು.

ನಾವೆಲ್ಲ ಹಲವು ಮಗ್ಗಲುಗಳಿಂದ ಎದ್ದಿದ್ದೇವೆ, ಜಾತಿಯ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ಮತದ ಹೆಸರಿನಲ್ಲಿ ಬೇರೆ ಬೇರೆ ಕಾರಣಗಳಿಂದ ವಿಘಟನೆಯಾಗಿ ಕವಲು ದಾರಿಯಲ್ಲಿ ಹೋಗುತ್ತಿದ್ದೇವೆ, ಈ ಕಾರಣ ಎಲ್ಲರೂ ಎಲ್ಲರನ್ನೂ ಒಳಗೊಂಡು ಒಂದೇ ದಾರಿಯಲ್ಲಿ ಪಯಣಿಸುವ ಬಗೆಯನ್ನು ಕಂಡುಕೊಳ್ಳುವ ಹಸಿವನ್ನು ಈ ಸಭೆಯು ವ್ಯಕ್ತಪಡಿಸಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರವೀಶ್ ಕ್ಯಾತನಬೀಡು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಗೆ ಜಿಲ್ಲೆಯ ವಿವಿಧ ತಾಲೂಕುಗಳ ಶರಣ ಸಾಹಿತ್ಯ ಪರಿಷತ್ತು ಘಟಕಗಳ ಪದಾಧಿಕಾರಿಗಳು ಸೇರಿದಂತೆ ನಗರದ ಹಲವು ಸಂಘ ಸಂಸ್ಥೆಗಳ ಪ್ರಮುಖರು ಭಾಗಿಯಾಗಿ, ಅರ್ಥಪೂರ್ಣವಾದ ವಿಚಾರಗೋಷ್ಠಿಗೆ ತನು ಮನ ದನದ ಸಹಾಯವು ಸೇರಿದಂತೆ ಎಲ್ಲ ರೀತಿಯಿಂದಲೂ ವಿಚಾರಗೋಷ್ಠಿಯ ಜೊತೆ ಕೈಜೋಡಿಸಿ ಭಾಗವಹಿಸುತ್ತೇವೆ ಎಂದು ಭರವಸೆ ನೀಡಿದರು.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed