लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಡಿಸಿಸಿ ಬ್ಯಾಂಕಿಗೆ ಸಿ.ಟಿ ರವಿಯದ್ದೇ ಗೌಡಸ್ತಿಕೆಯಂತೆ?….

1 min read

ಚಿಕ್ಕಮಗಳೂರು ಡಿಸಿಸಿ ಬ್ಯಾಂಕಿಗೆ ಸಿ.ಟಿ ರವಿಯದ್ದೇ ಗೌಡಸ್ತಿಕೆಯಂತೆ?

ಬಿಜೆಪಿಯ ಇವತ್ತಿನ ಗೆಲುವೇನು ಸಾಧನೆಯಲ್ಲ. ಆ ಗೆಲುವಿನ ಮೂಲ ಅರ್ಥಾತ್ ತಾಯಿ ಬೇರು one and only ಸಿ.ಟಿ.ರವಿಯೇ ಮತ್ತು ಇವರ ಹಿಂದಿನ ರಿಸ್ಕೇ ಇವತ್ತಿನ ಗೆಲುವು.

ಸಹಕಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಜನರಿಂದ ‘ಅಸಹಕಾರ’ ಪಡೆಯುವಲ್ಲಿ ಮುನ್ನಡೆ.

ಕಡೂರು ಕಾಂಗ್ರೆಸ್ ಕೂಡ ಸಹಕಾರ ಕ್ಷೇತ್ರದಲ್ಲಿ ಬೆಳ್ಳಿ ಗದೆಯ ಗೆಲ್ಲಲಿಲ್ಲವೇಕೆ? ಇಲ್ಲಿ ಆನಂದವಾಗಿದ್ದು ಯಾರಿಗೆ?

ಮೂಡಿಗೆರೆಯಲ್ಲೂ ಬಿಜೆಪಿಗೆ ‘ನಯ’ವಾದ ಗೆಲುವಾಯ್ತು ಶಿವನೇ?

ಶೃಂಗೇರಿ ಕ್ಷೇತ್ರದ‌ ಬಿಜೆಪಿಯ ‘ಜೀವ’ದಲ್ಲಿ ಕಾಂಗ್ರೆಸ್ ‘ರಾಜ’ನ ಗೌಡಸ್ತಿಕೆ ಗೌಣವಾಗಿದ್ದೇಕೆ?

ಜೆಡಿಎಸ್ಸಿಗೆ ಡಿಸಿಸಿ ಬ್ಯಾಂಕಲ್ಲಿ ‘ಭೋಜ’ನವೇನೂ ಪುಲ್ ಮೀಲ್ಸ್ ಆಗಿ ಸಿಗಲಾರದು!!!

ತರೀಕೆರೆ ಕ್ಷೇತ್ರದಲ್ಲಿ ಸುರೇಶರನ್ನು ಸೋಲಿಸಿ ‘ಆನಂದ’ವನ್ನು ಪಡೆಯಲಿಲ್ಲವೇಕೆ ಕಾಂಗ್ರೆಸ್ಸಿನ ‘ಶ್ರೀ’ಯುತರು?

ಬಿಡಿ ಕ್ಷೇತ್ರದಲ್ಲಿ ‘ರಾಮ್ ರಾಮ್ ಹ್ಯಾಟ್ರಿಕ್’

ಧರ್ಮೇಗೌಡ್ರು ಭೋಜೇಗೌಡರ ಎರಡು ಸುತ್ತಿನ ಕೋಟೆಯಲ್ಲಿ ಅಡಗಿದ್ದ ಡಿಸಿಸಿ ಬ್ಯಾಂಕಿನ ಅಧಿಕಾರವನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಉದ್ವಿಗ್ನ ಸ್ಥಿತಿಯಲ್ಲಿ ಈ ಹಿಂದೆ ಕಾಂಗ್ರೆಸ್ ಬಿಜೆಪಿಯ ಮುಖಂಡರು ಶರಣಾಗತಿಯ ಶೌರ್ಯವನ್ನು ಧರ್ಮೇಗೌಡರ ಪಾದಕ್ಕೆ ಅರ್ಪಿಸಿದ್ದು ಹತ್ತು ವರ್ಷದ ಹಿಂದಿನ ಇತಿಹಾಸ.

ಅದರಲ್ಲೂ ಬಿಜೆಪಿ ಆಗ ಡಿಸಿಸಿ ಬ್ಯಾಂಕಿನ ಆಡಳಿತ ಹಿಡಿಯಲು ಇನ್ನೂ ಎಳಸಾಗಿತ್ತು. ಸಾಲದೆಂಬಂತೆ ಜಿಲ್ಲಾದ್ಯಂತ ಬಿಜೆಪಿಯ ಬಹುತೇಕ ಸಹಕಾರ ಮುಖಂಡರು ಧರ್ಮೇಗೌಡನೆಂಬ ಅನಭಿಶಕ್ತ ಧ್ವನಿಯ ಶಬ್ದದೊಟ್ಟಿಗೆ ಗುಪ್ತವಾಗಿ ನಿಶಕ್ತವಾದ ಮೈತ್ರಿ ಮಾಡಿಕೊಂಡಿದ್ದರು.

ಇದರ ಮುಂದಿನ ಆಟವೇ ಸಿ.ಟಿ.ರವಿ ವರ್ಸಸ್ SLD+B ಬ್ರದರ್ಸಗಳ ನಡುವೆ ಭೀಕರ ಅಸಹಕಾರ ಚಳುವಳಿ (non co-operation war) _ 2012ರ ನಂತರ ಶುರುವಾಗುತ್ತದೆ. ಡಿಸಿಸಿ ಬ್ಯಾಂಕಿನ ಮೂಲಕ ಸಂಘಟನೆಯ ಶಕ್ತಿಯನ್ನು ಎತ್ತರಿಸಿಕೊಂಡಿದ್ದ ಬೋಜೇಗೌಡ ಬ್ರದರ್ಸಗಳ ದೈತ್ಯ ಶಕ್ತಿಯ ಮೂಲವೇ ಡಿಸಿಸಿ‌ ಬ್ಯಾಂಕು ಎಂಬುದೇ ಈ ಹೋರಟದ ಬೇರು. ಹೀಗೆ ಡಿಸಿಸಿ ಬ್ಯಾಂಕಿನ ಅಧಿಕಾರ ಹಿಡಿಯುವ ಹೋರಾಟದ ಆರಂಭದಲ್ಲಿಯೇ ಸಿ.ಟಿ.ರವಿ ಮತ್ತು SLD+B ನಡುವೆ ಹುಟ್ಟಿದ ದ್ವೇಷದ ಬೆಂಕಿಗೆ ಬಿಜೆಪಿಯಿಂದ ಸಿ.ಟಿ.ರವಿಯೇ ನಾಯಕ.
ಆಗ ಹೈಕೋರ್ಟಿನಲ್ಲಿ ಇಡೀ ರಾಜ್ಯವೇ ತಿರುಗಿ ನೋಡುವಂತಹ ಸಹಕಾರ ಸಂಘಗಳ ಮತದಾನದ ಹಕ್ಕಿನ ವಿಚಾರದಲ್ಲಿ ಸ್ಟೇ and ಸ್ಟೇ ವೆಕೇಶನಗಳ ನಡುವೆ ವಿಪರೀತ ಎನ್ನುವಷ್ಟು ದ್ವೇಷದಾಟಗಳು ನಡೆದಿದ್ದು ಈಗ ಡಿಸಿಸಿ ಬ್ಯಾಂಕಿನ ಚುನಾವಣೆಯ ಇತಿಹಾಸ. SLD+B ಪರವಾಗಿ ದೆಹಲಿಯಿಂದ ಖ್ಯಾತ ವಕೀಲೆ ನಳಿನ ಚಿದಂಬರಂ ಬಂದು ಗಮನ ಸೆಳೆದಿದ್ದು ಹುಡುಗಾಟವೇನಲ್ಲ. ಕೋರ್ಟಲ್ಲಿ ಕೇಸ್ ನಡೆಸುವಲ್ಲಿ ಬಿಜೆಪಿಯಿಂದ ಸಿ.ಟಿ.ರವಿ ಒಬ್ಬರೇ ಹೈರಾಣಾಗಿ ಹೋಗಿದ್ದರು ಮತ್ತು ಈ ಸುಸ್ತಿನಾಟದ ನಡುವೆ ಸೋಲೊಪ್ಪದೇ ಇದೇ ಸಿ.ಟಿ.ರವಿ ಕೋರ್ಟಲ್ಲಿ ಸೋತು, ನಂತರದಲ್ಲಿ ಗೆದ್ದು ಬಂದದ್ದು ಇತಿಹಾಸವೇ..

ಕೆಲ ದಿನಗಳ ನಂತರ ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಯುತ್ತದೆ. ಆಗ ಸಿ.ಟಿ.ರವಿ ನಾಯಕತ್ವದಲ್ಲಿ ಬಿಜೆಪಿ ಹೆಚ್ವು ಸ್ಥಾನ ಗೆದ್ದು ತರೀಕೆರೆ AR ರಾಜಶೇಖರ್ ಬಿಜೆಪಿಯಿಂದ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗುತ್ತಾರೆ. ಆಗ ಶುರುವಾದ ಬಿಜೆಪಿಯ ಇದೇ ಶಕ್ತಿ ಈಗಲೂ ಮುಂದುವೆರೆದ ಕಾರಣಕ್ಕೆ ಈಗ ಬಿಜೆಪಿಯಿಂದ ಡಿಸಿಸಿ ಬ್ಯಾಂಕಿನ ಅಧಿಕಾರವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲದ ಸ್ಥಿತಿಗೆ ಕಾಂಗ್ರೆಸ್ ಜೆಡಿಎಸ್ ತಲುಪಿವೆ. ಬಿಜೆಪಿಯ ಈ ಶಕ್ತಿಗೆ ಸಿ.ಟಿ.ರವಿಯವರ ರಾಜೀ ರಹಿತ ಹಳೆಯ ಹೋರಾಟವೇ ಮೂಲ ಕಾರಣ.

ಮನಸಲ್ಲಿ ವೈರತ್ವ; ಮಾತಲ್ಲಿ ಸ್ನೇಹವಿದ್ದರೆ ಅದು ರಾಜಕೀಯದಲ್ಲಿ ಮಾತ್ರ. ಇದಕ್ಕೆ ಸಾಕ್ಷಿ ಎಂಬಂತೆ ಈ ಹಿಂದೆ ರಾಜಕೀಯದ ವೈರಿಗಳ ಪಾತ್ರದಲ್ಲಿ ವಿಜೃಂಬಿಸಿದ್ದ ಜೆಡಿಎಸ್ಸಿನ ಭೋಜೇಗೌಡರು ಮತ್ತು ಬಿಜೆಪಿಯ ಸಿ.ಟಿ.ರವಿ NDA ಮಂತ್ರದಡಿಯಲ್ಲಿ ಈಗ ‘ವಿಶ್ವಾಸಮಿತ್ರ’ರ ಆಟ ಶುರುವಿಟ್ಟಿದ್ದಾರೆ. ಈ ಸ್ನೇಹದ ವ್ಯಾಲಿಡಿಟಿ ದಿನಗಳಿಗೆ ಸಂಬಂಧಿಸಿದ್ದಲ್ಲ. ಅವರವರ ಅಂತರಂಗದ ಪ್ರಾಮಾಣಿಕತೆಯೇ ಇವರಿಬ್ಬರು ರಾಮ ಲಕ್ಷ್ಮಣರೋ ಅಥವಾ ರಾಮ ರಾವಣರೋ ಎಂಬುದು ನಿರ್ಣಯಿಸಲಿದೆ. ಬೋಜೇಗೌಡರ ವಿಧಾನ ಪರಿಷತ್ ಚುನಾವಣೆಯಲ್ಲಿ ಸಿ.ಟಿ.ರವಿಯ ಟೀಮು ಪ್ರಾಮಾಣಿಕವಾಗಿ ಬೋಜೇಗೌಡರನ್ನು ಬೆಂಬಲಿಸಿತ್ತು. ಇದಕ್ಕೆ ಕೂಲಿ ಬಯಸುತ್ತಿರುವ ಬಿಜೆಪಿ ಮುಂದೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿ.ಟಿ.ರವಿಯವರನ್ನು ಪಾರದರ್ಶಕವಾಗಿ ಬೆಂಬಲಿಸುವ ಬಾಕಿ ಬೋಜೇಗೌಡರಿಂದ ಯಾವ ರೀತಿ ಇರಬಹುದೆಂಬುದೇ ಇಂಟರೆಸ್ಟಿಂಗ್ ನಿರೀಕ್ಷೆಗಳು.

2028ಕ್ಕೆ ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್ ಶಾಸಕ ತಮ್ಮಯ್ಯನ ‘ಕೈ’ ನಿಂದ ಕಿತ್ತುಕೊಂಡು ತಾನು ಅಣ್ಣಯ್ಯನಾಗಲು ಸಿ.ಟಿ.ರವಿ ಮೌನವಾಗಿಯೇ ಕೆರಳಿದ್ದಾರೆ. ಈ ಕಾರಣಕ್ಕಾಗಿಯೇ ಸಿ.ಟಿ.ರವಿ ಜೆಡಿಎಸ್ಸಿನ SLBಯೊಂದಿಗೆ ಶಾರ್ಟ್ ಟರ್ಮ್ ಲವನ್ನು ಶುರು ಇಟ್ಟುಕೊಂಡಿರುವುದು. ಎಸ್.ಆರ್. ಲಕ್ಷ್ಮಯ್ಯ ಅವರ ಕಾಲದಿಂದ ಬಂದತಂಹ ಜೆಡಿಎಸ್ಸಿನ ಪಿತ್ರಾರ್ಜಿತ ಮತಗಳು, ಧರ್ಮೇಗೌಡರ ರಾಜಕೀಯದ ಪಹಣಿಯಲ್ಲಿರುವ ಅನುಕಂಪ ಆಧರಿತ ಮತಗಳು (Compassionate votes), ಭೋಜೇಗೌಡರ ವ್ಯಾಪ್ತಿಯಲ್ಲಿರುವ influenced ವೋಟುಗಳು ಕಾಂಗ್ರೆಸ್ ಕೊಟ್ಟಿದ್ದ ಹಾಲಿನ ಅಭಿಷೇಕವನ್ನು ಮೀರಿ ಮತ್ತು ಮರೆತು ಸಿ.ಟಿ.ರವಿಯವರನ್ನು ಮುಟ್ಟಬೇಕಿದೆ‌. ಬೋಜೇಗೌಡ್ರು ಒಬ್ಬರೇ ಸಿ.ಟಿ.ರವಿಯವರ ಪರ ನಿಂತರೆ ರವಿಯವರ ಹಸಿವು ಹಿಂಗಲಾರದು. ಕಾಂಗ್ರೆಸ್ಸಿನ H.D ತ-ಮಂದಿರದ ಒಳಗಡೆ ಸೇರಿಕೊಂಡಿರುವ ಜೆಡಿಎಸ್ ಮತಗಳು ರವಿಯಂಗಳಕ್ಕೆ ಅರಳಿ ಬಂದರಷ್ಟೇ ಸ್ಥಳೀಯವಾದ NDA ಮೈತ್ರಿಗೆ ಮುತ್ತೈದೆಯ ಕಳೆ ಬರುವುದು. ಇಷ್ಟರ ನಡುವೆ ತಮ್ಮಯ್ಯ ಯಾವ ಕಾರಣಕ್ಕೂ ಹಗುರವಲ್ಲ. ಕಾರಣ ಅದು ಅವರು ನಂಬಿರುವ ಸಮಾಜಕ್ಕಿರುವ ಶಕ್ತಿ ಯುಕ್ತಿಯದು.

ಅಷ್ಟಕ್ಕೂ ಜಿಲ್ಲೆಯಾದ್ಯಂತ ಐದು ಕಾಂಗ್ರೆಸ್ ಶಾಸಕರು ಸಹಕಾರ ಕ್ಷೇತ್ರವನ್ನು ಗೆಲ್ಲಲು ಅಧಿಕಾರ ಇದ್ದಾಗಲೂ ಆಗಿಲ್ಲವೆಂದರೆ ಭವಿಷ್ಯದಲ್ಲಿ ಕಾಂಗ್ರೆಸ್ ಶಾಸಕರು ಸೇಪ್ಟಿ ಜೋನಿನಿಂದ ಒಂದೆಜ್ಜೆ ಹೊರ ಇದ್ದಾರೆಂದೇ ಚರ್ಚೆಗಳು‌ ಚಿಗುರಿವೆ. ಜಿಲ್ಲೆಯ ಕಾಂಗ್ರೆಸ್ಸಿನ ಶಾಸಕರೇನು ವೀಕಿಲ್ಲ ಎಂಬುದನ್ನು ಸಾಬೀತು ಪಡಿಸಲು ಜಿಲ್ಲಾ, ತಾಲೋಕ್, ಗ್ರಾಮ ಪಂಚಾಯಿತಿ ಪೈಟುಗಳಲ್ಲಾದರು ಕಾಂಗ್ರೆಸ್ ಗೆದ್ದು ತೋರಿಸಿದರಷ್ಟೇ ಪೊಲಟಿಕಲಿ 2028ಕ್ಕೂ ನಾವೇ ಪೈಲ್ವಾನರೆಂಬ ಮಾತು ಉಳಿಯಲು ಸಾಧ್ಯ.

ಹಾರ, ತುರಾಯಿ, ಸನ್ಮಾನ, ಜೈಕಾರ, ನಮಸ್ಕಾರ, ಬ್ಯಾನರ್ರು, ಪ್ಲಕ್ಸು, ಹಾಡಿನ ಮೂಲಕ ಸೋಷಿಯಲ್ ಮಿಡಿಯಾದ ಜಲಕ್ಕುಗಳು‌ ಮತ್ತು ನಿರಾಯಾಸವಾಗಿ ಬರುತ್ತಿರುವ ವಿಟಮಿನ್ ‘M’ ಕೆಲವು ಕಾಂಗ್ರೆಸ್ಸಿನ ಶಾಸಕರನ್ನು ಸುಖದಲ್ಲಿ ಮುಳುಗಿಸಿವೆ. ಇಂತಹ ಸುಖದಲ್ಲಿ ಮುಳುಗಿಯೇ ಬಿಜೆಪಿ ಈ ಹಿಂದೆ ಜಿಲ್ಲೆಯ ಐದು ಕ್ಷೇತ್ರದಲ್ಲೂ ಮುಳುಗಿದ್ದು. ಸದ್ಯಕ್ಕೆ ಹಾರ ತುರಾಯಿಯ ಸುಖವೇ ಸಾಕು ಎಂದರೆ ‘ಮಾಜಿ’ ಎಂಬ ಟೈಟಲ್ ಕಾಂಗ್ರೆಸ್ಸಿಗರಿಗೂ ಸಿಗುವಲ್ಲಿ ಅನುಮಾನವೇ ಇಲ್ಲ. ಆದರೆ‌ ಕಾಂಗ್ರೆಸ್ ಶಾಸಕರಿಗೆ ಇನ್ನೂ ಕಾಲ ಮಿಂಚಿಲ್ಲ. But ಮಿಂಚುವ ಕಾಲವು ದೂರವಿಲ್ಲ.

ಹಾಗಂತ ಬಿಜೆಪಿಯವರೇನೂ ಸುಲಭವಾಗಿ ಗೆಲ್ಲುತ್ತೇವೆಂದು ಬೀಗಬೇಡಿ. ಬಿಜೆಪಿಯವರಿಗೂ ಗೆಲುವಿನ ಹಾದಿ ಬಣ್ಣಬಣ್ಣದ ಮುಳ್ಳುಗಳಿಂದಲೇ ತುಂಬಿದೆ. ಹೊಗಳಿಕೆಗಳಿಗೆ ಮೈಮರೆಯದಿದ್ದರೆ ಯಾರಾದರು ಗೆಲ್ಲಬಹುದು…

2028ಕ್ಕೆ ಗೆದ್ದೇ ಬಿಟ್ವಿ ಎಂಬುದು ಎರಡು ಪಕ್ಷಕ್ಕೂ ಬಿಸಿ ತುಪ್ಪವೇ. ಇನ್ನೂ ಟಿಕೆಟಿನ ರಗಳೆಗಳು, ಸಿದ್ದರಾಮಯ್ಯ ಯಡಿಯೂರಪ್ಪನವರು ಆಯಾ ಪಕ್ಷಗಳಿಗೆ ಯಾರ ರೀತಿ ಪುಡ್ ನೀಡುತ್ತಾರೆ ಎಂಬುದು, NDA ಮೈತ್ರಿಯಲ್ಲಿ‌ ನಡೆಯುವ ಮಿಸ್ಟೇಕುಗಳು ಇವೆಲ್ಲವನ್ನು ದಾಟಿ ಗೆದ್ದು ಬರುವ ಶಾಸಕರು ಯಾವ ಪಕ್ಷದವರೆಂಬುದಕ್ಕೆ ಇನ್ನೆರಡೇ ವರ್ಷ ಬಾಕಿ‌ ಉಳಿದದ್ದು..

ಮನಸುಳಿ ಮೋಹನ್

About Author

Leave a Reply

Your email address will not be published. Required fields are marked *

You may have missed