लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಉದ್ಯಮಿ ದಿನೇಶ್ ಶೆಟ್ಟಿಯಿಂದ ಅಪಘಾತ ಪೀಡಿತ ವಿದ್ಯಾರ್ಥಿನಿ ಸಿರಿಗೆ.1.ಲಕ್ಷ ನೆರವು….

1 min read

ಉದ್ಯಮಿ ದಿನೇಶ್ ಶೆಟ್ಟಿಯಿಂದ ಅಪಘಾತ ಪೀಡಿತ ವಿದ್ಯಾರ್ಥಿನಿ ಸಿರಿಗೆ.1.ಲಕ್ಷ ನೆರವು.

‎

‎ಮೂಡಿಗೆರೆ ತಾಲೂಕ್ .ಕೊಟ್ಟಿಗೆಹಾರದ ವಿದ್ಯಾರ್ಥಿನಿ ಕುಮಾರಿ ಸಿರಿ ಕಳೆದ ವರ್ಷ ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದ ಆಟೋ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದರು. ಪ್ರಸ್ತುತ ಅವರು ಸ್ವಲ್ಪ ಚೇತರಿಸಿಕೊಂಡಿದ್ದರೂ ನಡೆಯಲಾಗದೆ ಹಾಸಿಗೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿರಿ ಸಂಪೂರ್ಣ ಗುಣಮುಖರಾಗಲು ಇನ್ನೂ ಸುಮಾರು ರೂ.15 ಲಕ್ಷ ವೆಚ್ಚ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

‎

ಬಣಕಲ್ ಯುವಕರ ತಂಡ ಆಯೋಜಿಸಿದ್ದ ಬಣಕಲ್ ಡ್ಯಾನ್ಸ್ ಧಮಾಕ ಕಾರ್ಯಕ್ರಮದಲ್ಲಿ ಟಿವಿ ಮುಖಾಂತರ ಸಿರಿಯ ಚಿಕಿತ್ಸಾ ಸ್ಥಿತಿಯ ದೃಶ್ಯಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಂದ ನೆರವು ಕೋರಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಬಣಕಲ್ ನಿವಾಸಿ, ಮೈಸೂರು ಉದ್ಯಮಿ ದಿನೇಶ್ ಶೆಟ್ಟಿ ಅವರು ಕೊಟ್ಟಿಗೆಹಾರಕ್ಕೆ ಭೇಟಿ ನೀಡಿ ಕುಮಾರಿ ಸಿರಿಗೆ ರೂ.1 ಲಕ್ಷ ಮೊತ್ತದ ಚೆಕ್ ನೀಡುವ ಮೂಲಕ ನೆರವು ನೀಡಿದರು.

‎

‎ಈ ಸಂದರ್ಭದಲ್ಲಿ ಅವಿನ್ ಟಿವಿಯೊಂದಿಗೆ ಮಾತನಾಡಿದ ದಿನೇಶ್ ಶೆಟ್ಟಿ, “ಸಿರಿ ಮೂಡಬಿದಿರೆಯ ಯೆನಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಬಡ ಕುಟುಂಬದ ಪ್ರತಿಭಾವಂತ ಮಗಳು. ಪೋಷಕರು ಅವಳ ಮೇಲೆ ಉತ್ತಮ ಭವಿಷ್ಯದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ದುರದೃಷ್ಟಕರ ಅಪಘಾತ ಆ ಕನಸುಗಳಿಗೆ ಅಡ್ಡಿಯಾಗಿದೆ. ಸಿರಿ ಶೀಘ್ರ ಗುಣಮುಖಳಾಗಿ ಮತ್ತೆ ತನ್ನ ವಿದ್ಯಾಭ್ಯಾಸ ಮುಂದುವರಿಸಲಿ” ಎಂದು ಹಾರೈಸಿದರು.

ಸಾರ್ವಜನಿಕರು   ಸಿರಿಯ ಚಿಕಿತ್ಸೆಗೆ  ಕೈಜೊಡಿಸಬೇಕೆಂದು ವಿನಂತಿಸಿಕೊಂಡರು

ಈ ಸಂದರ್ಭದಲ್ಲಿ ಕೊಟ್ಟಿಗೆಹಾರದ ಸಂಜಯ.ಅಭಿಲಾಷ್.ಚಂದ್ರೆಗೌಡ.ರಾಜೇಶ್.ಅರುಣ.ಸೂರಿ.ರಂಗನಾಥ..ಮುನಿರ್.ಸಂತೊಷ್.ಎ.ಕೆ.ಅನಿಲ್ ಮಂತೆರೊ.ಇದ್ದರು.

About Author

Leave a Reply

Your email address will not be published. Required fields are marked *

You may have missed