लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಸುದ್ದಿಜಾಲ ✒️: ಚಿಕ್ಕಮಗಳೂರಿನಲ್ಲಿ ಶರಣ ಸಾಹಿತ್ಯ ಪರಿಷತ್ತಿನ 40 ರ ನೋಟ~ ~~

ವಚನ: ನಾನು ಹೀಗೆ ಕೇಳಿಸಿಕೊಂಡಿದ್ದು~ “ಪಾರಂಪರಿಕ ಓದುಗಳ ಪಲ್ಲಟ ಮತ್ತು ಹೊಸ ಸಾಧ್ಯತೆ ಕುರಿತು” ವಿಚಾರಗೋಷ್ಠಿಗೆ ಕೇಂದ್ರ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಪದಾಧಿಕಾರಿಗಳಿಗೆ ಅಹ್ವಾನ.:
••••••••••••••
ಸಮಕಾಲೀನ ಪ್ರಜ್ಞೆಯ ಸಂಕೇತ, ಪರಂಪರೆಯ ಪ್ರಜ್ಞೆಯ ಪ್ರತೀಕ,
ಜಾತ್ಯಾತೀತ ಪ್ರಜ್ಞೆಯೊಂದಿಗೆ ಸಮ ಸಮಾಜದ ಧೋರಣೆ ಹೊತ್ತು ಸಾಗುತ್ತಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ಈಗ 40 ರ ಸಂಭ್ರಮ,

ಈ ಮಾನವ ಸಂಕುಲ ಎಲ್ಲಾ ರೀತಿಯ ಮತ ಧರ್ಮ ಜಾತಿಯ ಮಿತಿಗಳಿಂದ ಹೊರಬಂದು, ಧರ್ಮವನ್ನು ಕೂಡ ದಾಟಿ ದಯೆಯ ಮೇಲೆ ನಿಂತು, ಒಂದು ಹಿಡಿ ಜೀವಕಾರುಣ್ಯದೊಂದಿಗೆ ಜಗತ್ತಿಗೆ ಆಭಾರಿಯಾಗಿ ಹೇಗೆ ಬದುಕಬೇಕು ಎಂಬ ಅನುಭವವನ್ನು ಧಕ್ಕಿಸಿಕೊಂಡು ನಿರೂಪಿಸಿದ ವಚನ ಚಳುವಳಿಯ ಸತ್ಕ್ಕ್ರಾಂತಿಯ ಆಶಯಗಳನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿಯ ಹೊಣೆ ಅರಿತು ಸಂಸ್ಥಾಪನೆಯಾಗಿದ್ದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು.

ಇಂತಹ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸುಮಾರು ನಾಲ್ಕು ದಶಕಗಳ ಕಾಲ 12ನೇ ಶತಮಾನದ ಕಲ್ಯಾಣದ ಸತ್ಕ್ರಾಂತಿಯ ಆಶಯಗಳನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡಿನ ತುಂಬೆಲ್ಲ ಬಿತ್ತಿ ಜಾಗೃತಿಗೊಳಿಸುತ್ತಾ ಬರುತ್ತಿದೆ.

ದಿಟ್ಟ ನಿಲುವಿನೊಂದಿಗೆ ಉದಾತ್ತ ನಿಲುವನ್ನು ಹೊಂದಿದ್ದ ವಚನ ಚಳುವಳಿಯ ಆಶಯಗಳು, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಡಂಬರಕ್ಕೆ, ಓಲೈಕೆಗೆ, ಹುಸಿ ವೈಭವೀಕರಣಕ್ಕೆ, ಮತ ಜಾತಿ ಧರ್ಮಗಳ ಹೆಸರಿನಲ್ಲಿ ಸೀಮಿತ ಭಾವಕ್ಕೆ ಸಿಲುಕಿ ನಲುಗದೆ, ಶ್ರೇಷ್ಠತೆಯ ವ್ಯಸನಕ್ಕೆ ಒಳಗಾಗದಂತೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ, ಜೊತೆಗೆ ಸಿದ್ದ ಮಾದರಿಯ ಚೌಕಟ್ಟುಗಳನ್ನು ಮುರಿದು ಹೊಸ ನೆಲೆಗಟ್ಟಿನೊಂದಿಗೆ ವಚನಗಳ ಓದುಗಳನ್ನು ಪ್ರವೇಶ ಮಾಡುವ ಮೂಲಕ ಚಾರಿತ್ರಿಕ ಚಲನಶೀಲತೆಯ ಜೀವಂತ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿದೆ. ಈ ಕಾರಣಕ್ಕಾಗಿ *ವಚನ: ನಾನು ಹೀಗೆ ಕೇಳಿಸಿಕೊಂಡದ್ದು ~ ಪಾರಂಪರಿಕ ಓದುಗಳ ಪಲ್ಲಟ ಮತ್ತು ಹೊಸ ಸಾಧ್ಯತೆ* ಕುರಿತು ಚಿಂತನ ಮಂಥನ ಮಾಡಬೇಕಾಗಿದೆ.

ಈ ಹಿನ್ನೆಲೆಯಲ್ಲಿ, ಮೊನ್ನೆ ಜನವರಿ 07ರಂದು ಬೆಂಗಳೂರಿನ ಜಯನಗರದಲ್ಲಿರುವ ಜೆ ಎಸ್ ಎಸ್ ಅಡಿಟೋರಿಯಂ ನಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಗೆ, ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಭಾಗವಹಿಸಿ, ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮ ಮತ್ತು ವಿಚಾರಗೋಷ್ಠಿಯ ಮಹತ್ವ ತಿಳಿಸಿ, ಚಿಕ್ಕಮಗಳೂರಿನಲ್ಲಿ 2026ರ ಫೆಬ್ರವರಿ 09ರಿಂದ 11ರ ವರಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ, ಗಡಿನಾಡು ಘಟಕಗಳು, ಕದಳಿ ಮಹಿಳಾ ವೇದಿಕೆಯು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಆಹ್ವಾನ ನೀಡಿ ಈ ಮಹತ್ವದ ಸಮಾರಂಭಕ್ಕೆ ಸಾಕ್ಷಿಯಾಗಿ, ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕೊಡ ಮಾಡುವ ಆಥಿತ್ಯವನ್ನು ಹಾಗೂ ನಮ್ಮ ಯಥೋಚಿತ ಸತ್ಕಾರವನ್ನು ಸ್ವೀಕರಿಸಿ 40ರ ಸಂಭ್ರಮದ ನಡಿಗೆಗೆ ಪುಷ್ಟಿ ಕೊಡಬೇಕೆಂದು ಅಧ್ಯಕ್ಷರು ಮತ್ತು ಎಲ್ಲ ಪದಾಧಿಕಾರಿಗಳ ಪರವಾಗಿ ಮನವಿ ಮಾಡಿತು.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed