लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಡಾ. ಶ್ರೀನಾಥ್ ‎ಮನ್ಮಥನಾಗಿ ಬಂದು ಪ್ರಣಯರಾಜರಾದವರ ಜನುಮದಿನವಿಂದು….

1 min read

‎ಡಾ. ಶ್ರೀನಾಥ್
‎ಮನ್ಮಥನಾಗಿ ಬಂದು ಪ್ರಣಯರಾಜರಾದವರ ಜನುಮದಿನವಿಂದು

‎ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶುಭಮಂಗಳ, ಮಾನಸ ಸರೋವರ,ಧರಣಿ ಮಂಡಲ ಮಧ್ಯದೊಳಗೆ, ಮೊದಲಾದ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
‎ಮಾನಸ ಸರೋವರ ನಿರ್ಮಿಸಿದ ಮಿತ್ರವೃಂದ ಮೂವೀಸ್ ನಿರ್ಮಾಪಕರಲ್ಲಿ ಒಬ್ಬರು. ಕನ್ನಡದ ಕಿರುತೆರೆ ವಾಹಿನಿ ಉದಯ ಟಿವಿ ಯ ನಿರ್ವಾಹಕರಲ್ಲೊಬ್ಬರಾಗಿದ್ದರು,ಕೆ.ಎಸ್.ಎಲ್.ಸ್ವಾಮಿಯವರ ನಿರ್ದೇಶನದ ಡಾ.ರಾಜ್ ಕುಮಾರ್ ಅಭಿನಯದ “ಲಗ್ನಪತ್ರಿಕೆ ” ಚಿತ್ರದಲ್ಲಿ ಮನ್ಮಥನ ಸಣ್ಣದೊಂದು ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಡಾ. ಶ್ರೀನಾಥ್, ಚಿತ್ರರಂಗದಲ್ಲಿ 58 ವರ್ಷಗಳನ್ನು ಪೂರೈಸಿದ್ದಾರೆ , ಇವರು ಪ್ರಖ್ಯಾತ ನಟ ನಿರ್ದೇಶಕ ಸಿ.ಆರ್.ಸಿಂಹ ಅವರ ಸಹೋದರರು ಸಹ ಹೌದು ಕನ್ನಡ ಬಹುತೇಕ ಎಲ್ಲಾ ಕಲಾವಿದರ ಜೊತೆಗೆ ಉತ್ತಮ ಬಾಂಧವ್ಯದ ಜೊತೆಗೆ ಸದಭಿರುಚಿಯ ಚಲನಚಿತ್ರಗಳಲ್ಲಿ ನಟಿಸಿರುವ ಖ್ಯಾತಿವಂತರು ಡಾ. ಶ್ರೀನಾಥ್, ಇಂತಹ ಮಹಾನ್ ವ್ಯಕ್ತಿಗೆ ಜನುಮದಿನದ ಶುಭಾಶಯಗಳನ್ನು ಕೋರುವ ಮೂಲಕ ಗೌರವ ಅರ್ಪಿಸೋಣ.

‎ವರದಿ……
ರವಿಕುಮಾರ್. ಬೆಂಗಳೂರು.

About Author

Leave a Reply

Your email address will not be published. Required fields are marked *

You may have missed