ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಶಾಮನೂರು ಶಿವಶಂಕರಪ್ಪ ರವರ ಪುಣ್ಯ ಸ್ಮರಣೆ ಹಾಗೂ ನುಡಿ ನಮನ…..
1 min read
ಮೂಡಿಗೆರೆ :ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಶಾಮನೂರು ಶಿವಶಂಕರಪ್ಪ ರವರ ಪುಣ್ಯ ಸ್ಮರಣೆ ಹಾಗೂ ನುಡಿ ನಮನ.
ಮೂಡಿಗೆರೆ :ಶಾಮನೂರು ಶಿವಶಂಕರಪ್ಪ ಸಮಾಜದ ಮೇರು ಪರ್ವತ. ಅಜಾತಶತ್ರು. ಸಾರ್ವಜನಿಕ ಬದುಕಿನಲ್ಲಿ ಅವರು ಮಾಡಿದ ಕೆಲಸ ಗಳನ್ನು ಊಹಿಸಲು ಸಾಧ್ಯ ವಿಲ್ಲಎಂದು ಚಿಕ್ಕಮಗಳೂರು ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮೋಹನ್ ರಾಜಣ್ಣ ಹೇಳಿದರು.
ಅವರು ಇತ್ತೀಚಿಗೆ ಪುಷ್ಪ ಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಗೋಣಿಬೀಡು ಗ್ರಾಮದ ಶ್ರೀ ಪುಷ್ಪಗಿರಿ ಸದನ ದಲ್ಲಿ ಪುಣ್ಯಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಬಾವಚತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದರು.
ನಿಷ್ಟುರ ವಾದಿ ನೇರ ನುಡಿ ಕೊಡುಗೈ ದಾನಿ ಅವರ ಆದರ್ಶ ಗಳು ಮತ್ತು ಅವರ ಕೆಲಸ ಗಳನ್ನು ನಾವೆಲ್ಲರೂ ಮುಂದುವರಿಸಿ ಕೊಂಡು ಹೋಗಬೇಕಾಗಿದೆ. ಸಮಾಜದ ವಿಚಾರ ದಲ್ಲಿ ಹೇಳುವುದಾದರೆ ಪಕ್ಷಾತೀತ ವಾಗಿ. ಜಾತ್ಯ ತೀತ ವಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ. ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿಗಾಗಿ ಶ್ರಮಿಸಿದವರು .
ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ತಿ ಉಮಾ ಮೋಹನ್ ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾ ಸಂಸ್ಥೆ ಯ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದರು. ಹಾಗೂ ವೀರಶೈವ ಲಿಂಗಾಯತ ಸಮಾಜವನ್ನು ಬಲಿಷ್ಠ ವಾಗಿ ಕಟ್ಟಿದ್ದರು. ಎಂದರು.
ಗೌರವ ಟ್ರಸ್ತಿ ಸಿ.ಸಿ.ರಾಜಣ್ಣ. ಪ್ರಸನ್ನ. ಬಾಂಧವ್ಯ. ಗಂಗಾಧರ್. ಮಿಥುನ್ ಕುಮಾರ್. ಡಿಂಪಲ್. ಹಾಗೂ ಮುಂತಾದವರು ಇದ್ದರು.

