लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಏಳು ಲಕ್ಷ ಟನ್ ಗಳ ಅದ್ಭುತ ಭವಿಷ್ಯಕ್ಕೆ ಏಳು ಚಿನ್ನದ ಕಾಫಿ ಬೀಜಗಳು”

1 min read

ಅವಿನ್ ಟಿವಿ ಸುದ್ದಿಜಾಲ ✒️: *”ಏಳು ಲಕ್ಷ ಟನ್ ಗಳ ಅದ್ಭುತ ಭವಿಷ್ಯಕ್ಕೆ ಏಳು ಚಿನ್ನದ ಕಾಫಿ ಬೀಜಗಳು” ಎಂಬ ಘೋಷ ವಾಕ್ಯದೊಂದಿಗೆ ಶತಮಾನೋತ್ಸವದ ಸಂಭ್ರಮವನ್ನು ಆಚರಿಸಿದ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರ.*

ಬಾಳೆಹೊನ್ನೂರು ಡಿ. 22: ನೆಲದಾಳದಲ್ಲಿ ಹುದುಗಿರುವ ಬೇರಿನ ಸಮಸ್ಯೆ ಅರಿಯದೆ ಕೊಂಬೆ ರಂಬೆಗಳನ್ನು ಕುರಿತು ಮೇಲ್ಪದರದ ಮಾತುಗಳನ್ನಾಡಿದ ವಿಚಾರಗೋಷ್ಠಿಗಳು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ನಿಖರವಾದ ಧ್ವನಿ ಮಾಡಿ ಸಮಸ್ಯೆಗಳಿಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತಿಸದ ಶತಮಾನೋತ್ಸವದ ಸಂಭ್ರಮ.

ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರಕ್ಕೆ ಒಂದು ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ 20 ರಿಂದ 23ರ ವರೆಗೆ ಮೂರು ದಿನಗಳ ಕಾಲ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರ ತನ್ನ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಶತಮಾನೋತ್ಸವ ಸಂಭ್ರಮಕ್ಕೆ ತೆರೆ ಬಿದ್ದಿದೆ.

ಕಾಫಿ ಸಂಶೋಧನಾ ಕೇಂದ್ರದ ನೂರರ ಸಂಭ್ರಮ ದಲ್ಲೂ ಬೆಳಗಾರರ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿ ಬೆಳಕನ್ನು ಚೆಲ್ಲಲಿಲ್ಲ.

17ನೇ ಶತಮಾನದಲ್ಲಿ ಮಕ್ಕಾದಿಂದ ಮರಳುವಾಗ ಬಾಬ ಬುಡನ್ ಎಂಬ ಸಂತರು ಅಡಗಿಸಿಕೊಂಡು ತಂದ ಏಳು ಕಾಫಿ ಬೀಜಗಳನ್ನು ಚಿಕ್ಕಮಗಳೂರಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಚಂದ್ರದ್ರೋಣ ಪರ್ವತದ ಬೆಟ್ಟಗಳಲ್ಲಿ ನೆಟ್ಟು ಕಾಫಿಯನ್ನು ಭಾರತಕ್ಕೆ ಪರಿಚಯಿಸಿದರು.

ಅ ನಂತರ ಭಾರತಕ್ಕೆ ಬಂದ ಬ್ರಿಟಿಷರು 19ನೇ ಶತಮಾನದಲ್ಲಿ ಕಾಫಿಯನ್ನು ಒಂದು ಉದ್ಯಮವಾಗಿ ಬೆಳೆಸಿದರು.

100 ವರ್ಷಗಳ ಹಿಂದೆ ಮೈಸೂರು ಮಹಾರಾಜರ ಕಾಲದಲ್ಲಿ ಅ ಸಂಸ್ಥಾನದ ಕೃಷಿ ನಿರ್ದೇಶಕರಾದ ಡಾ.ಲೆಸ್ಲಿ ಕೋಲ್ಮನ್ ಅವರು ಮೈಸೂರು ಕಾಫಿ ಎಕ್ಸ್ ಪರಿಮೆಂಟ್ ಸ್ಟೇಷನ್ ಆರಂಭಿಸಿ ಕಾಫಿಯನ್ನು ಬಾಧಿಸುತ್ತಿದ್ದ ರೋಗಗಳನ್ನು ಎದುರಿಸಲು ಮತ್ತು ಕಾಫಿ ಕೃಷಿಯನ್ನು ವಿಸ್ತರಿಸಲು ಬುನಾದಿ ಹಾಕಿದರು.

ಲಕ್ಷಾಂತರ ರೂ ವಿದೇಶಿ ವಿನಿಮಯಕ್ಕೆ ಕಾರಣವಾಗಿರುವ, ಆರೋಗ್ಯ ಪೂರ್ಣ ಪೇಯವಾಗಿರುವ ಇಂತಹ ಉತ್ಕೃಷ್ಟ ಕಾಫಿಯ ಬಗ್ಗೆ ಬೆಳಗಾರರು ಅನೇಕ ಸಮಸ್ಯೆಗಳನ್ನು ನಿತ್ಯ ಎದುರಿಸುತ್ತಿದ್ದಾರೆ, ಅನಧಿಕೃತವಾಗಿ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಫಿ ಬೆಳೆಯುತ್ತಿರುವ ಭೂಮಿ ಉಳಿಸಿಕೊಳ್ಳುವ ಬಗ್ಗೆಯಾಗಲಿ, ಕೇಂದ್ರ ಸರಕಾರದ ಅರಣ್ಯ ಕಾಯ್ದೆಯಿಂದ ಬಾಧಿತರಾಗಿರುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಬೆಳೆಗಾರರ ಒತ್ತುವರಿ ಸಮಸ್ಯೆ, ಡೀಮ್ಡ್ ಫಾರೆಸ್ಟ್, ಸೆಕ್ಷನ್ -4, ಡಿ.ಸಿ.ಫಾರೆಸ್ಟ್, ಅಭಯಾರಣ್ಯದ ಬಫರ್ ಝೋನ್, ಪಾರಂಪಾರಿಕ ಅರಣ್ಯ ಮಂಜೂರು ಕಾನೂನು ಸಮಸ್ಯೆ ಬಗೆಹರಿಸುವ ಬಗ್ಗೆ ಒಂದೇ ಒಂದು ವಿಚಾರ ಗೋಷ್ಠಿ ಇಲ್ಲ. ಕಾಫಿ ಬೆಳೆ ಒಂದು ಉದ್ದಿಮೆ ಎಂದು ಗುರುತಿಸಿರುವುದರಿಂದ ಕಾಫಿ ಬೆಳೆಗಾರರ ಸಾಲ ಸರ್ಫೆಸಿ ಕಾಯ್ದೆಯಡಿಯಲ್ಲಿದೆ. ಇದರಿಂದ ಸಾಲ ಮಾಡಿಕೊಂಡು ಕಷ್ಟಕ್ಕೆ ಸಿಲುಕಿದ ಅನೇಕ ಕಾಫಿ ಬೆಳೆಗಾರರು ತಮ್ಮ ತೋಟಗಳನ್ನು ಮೂರು ಕಾಸಿಗೆ ಮಾರಾಟ ಮಾಡಿದರು. ದೇಶದ ಬೆರಳಣಿಕೆಯ ಲಕ್ಷಾಂತರ ಕೋಟಿ ರೂ. ಸಾಲ ಮರು ಪಾವತಿ ಹೊಂದಾಣಿಕೆ, ಬಡ್ಡಿ ಮನ್ನಾ, ಸಾಲದ ಅವಧಿಯ ವಿಸ್ತರಣೆಯ ಅವಕಾಶ ನಮ್ಮ ಕಾಫಿ ಬೆಳೆಗಾರರಿಗೆ ಲಭ್ಯವಾಗಲಿಲ್ಲ.

ನೂರರ ಸಂಭ್ರಮಕ್ಕೆ ಬಂದ ಕೇಂದ್ರ ಸರಕಾರದ ಸಚಿವರನ್ನು ಬಳಸಿಕೊಂಡು ಸುಮಾರು 13 ಸಾವಿರ ಕೋಟಿ ರೂ. ವಿದೇಶಿ ವಿನಿಮಯ, ಲಕ್ಷಾಂತರ ಕೋಟಿ ರೂ. ಜಿಎಸ್ಟ್ ಟಿ, ಎಕ್ಸ್ಪ್ರೆಸ್ ಸುಂಕ, ಸೆಸ್ ಮುಖಾಂತರ ಆದಾಯ ತರುತ್ತಿರುವ ಮತ್ತು ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿರುವ ಕಾಫಿ ಉದ್ದಿಮೆಯ ಮೂಲಭೂತ ಸಮಸ್ಯೆ ಬಗೆಹರಿಸಲು ನೂರರ ಸಂಭ್ರಮ ಭರವಸೆ ನೀಡದಿರುವುದು ಕಾಫಿ ಬೆಳೆಗಾರರಿಗೆ ಸಂಭ್ರಮ ತರುವ ವಿಚಾರವಲ್ಲ.

ಸುಪ್ರೀಂಕೋರ್ಟ್, ಹಸಿರು ಪೀಠ, ಅರಣ್ಯ ಇಲಾಖೆಯ ಕಪಿಮುಷ್ಟಿಯಲ್ಲಿ ಸಿಲುಕಿರುವ ಕಾಫಿ ಬೆಳೆಗಾರರ ಈ ಜ್ವಲಂತ ಸಮಸ್ಯೆಯನ್ನು ಆಡಳಿತ ನಡೆಸುವವರ ಗಮನಕ್ಕೆ ತರಲು ಕಾಫಿ ಬೆಳೆಗಾರರ ಸಂಘಟನೆಗಳು ವಿಫಲವಾಗಿವೆ. ಉಳ್ಳವರ ಹಬ್ಬದಲ್ಲಿ ಮಧ್ಯಮ ಮತ್ತು ಬಡ ಕಾಫಿ ಬೆಳೆಗಾರರ ಸಮಸ್ಯೆ ಅರಣ್ಯ ರೋದನವಾಗಿಯೇ ಉಳಿದಿದೆ ಎಂದು ಹಲವು ಬೆಳಗಾರರು ನೂರರ ಸಂಭ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಫಿ ಕುಡಿಯುವುದರಿಂದ ಅದರಲ್ಲೂ ಬ್ಲಾಕ್ ಕಾಫಿ ಸೇವಿಸುವುದರಿಂದ ಎನರ್ಜಿ ಮತ್ತು ಫೋಕಸ್ ಹೆಚ್ಚುತ್ತದೆ ಜೊತೆಗೆ ದೇಹಕ್ಕೆ ಚುರುಕು ಮೆದುಳಿಗೆ ಚೈತನ್ಯ ನೀಡಿ, ದೇಹದ ತೂಕ ಇಳಿಸಿ ಕೊಬ್ಬು ಕರಗಿಸಿ, ಹೃದಯದ ಆರೋಗ್ಯ ವೃದ್ಧಿಸಿ ಜೀರ್ಣಕ್ರಿಯೆಯಲ್ಲಿ ಹೊಟ್ಟೆಯನ್ನು ಹಗರು ಮಾಡುವ ಔಷದಿಯ ಗುಣ ಈ ವಿಶ್ವ ಪ್ರಸಿದ್ಧ ಕಾಫಿ ಬೀಜಕ್ಕೆ ಇದೆ ಎಂದು ಅನೇಕ ಅಧ್ಯಯನಗಳು ಮತ್ತು ವರದಿಗಳು ಸಾಬೀತು ಮಾಡಿವೆ.

ಲಕ್ಷಾಂತರ ಜನರ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಿರುವ, ಪ್ರಕೃತಿ ಸಮತೋಲನಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಟ್ಟಿರುವ ಈ ಕಾಫಿ ಕೃಷಿಯು ಆರ್ಥಿಕತೆ ಮತ್ತೆ ಆರೋಗ್ಯವನ್ನು ಸಹ ಕಟ್ಟಿಕೊಡುವಲ್ಲಿ ಹಿರಿದಾದ ಪಾತ್ರವನ್ನು ವಹಿಸಿದೆ.
•••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed