*”ನಮ್ಮ ಊರು ನಮ್ಮ ಕೆರೆ”*
1 min read
“*ನಮ್ಮ ಊರು ನಮ್ಮ ಕೆರೆ”*




ದಿನಾಂಕ 22/12/2025 ಸೋಮವಾರದಂದು ಕಳೆದ ವರ್ಷ 2024ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯ ಕಾರ್ಯಕ್ರಮವಾದ “”ನಮ್ಮ ಊರು ನಮ್ಮ ಕೆರೆ”” ಯೋಜನೆಯ ಅಡಿಯಲ್ಲಿ ಗೋಣಿಬೀಡು ಹೋಬಳಿಯ ಜಿ.ಹೊಸಹಳ್ಳಿಯ, ದಿಣ್ಣೆಕೆರೆಯ ಹೂಳು ಎತ್ತುವ ಕಾರ್ಯಕ್ರಮವನ್ನು ಗ್ರಾಮಸ್ಥರ ಸಹಕಾರದಿಂದ ಸುಮಾರು 4 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಹೂಳು ತೆಗೆಸಲಾಗಿತ್ತು.
ಒಂದು ವರ್ಷದ ನಂತರ ಕೆರೆಯ ಸುತ್ತಮುತ್ತಲು ಕಾಡು ಬೆಳೆದು ಕೆರೆಯೇ ಕಾಣದಂತಾಗಿತ್ತು. ಇಂದು ಸೋಮವಾರ ಶೌರ್ಯ ವಿಪತ್ತು ನಿರ್ವಾಣ ಘಟಕ ಗೋಣಿಬೀಡಿನ ಸ್ವಯಂ ಸೇವಕರು ಕೆರೆಯ ಸುತ್ತಮುತ್ತಲಿನ ಕಾಡು, ಕಸ ಎಲ್ಲವನ್ನು ಸ್ವಚ್ಛಗೊಳಿಸಿದರು.
ಇದೆ ಸಂದರ್ಭದಲ್ಲಿ ಶೌರ್ಯ ಘಟಕದ ಸಯೋಜಕರು ಉದಯ ಕಸ್ಕೆಬೈಲ್, ಜಿ ಹೊಸಹಳ್ಳಿ ಒಕ್ಕೂಟದ ಅಧ್ಯಕ್ಷರು ಅದ ರಂಜಿತ್, ವಲಯ ಮೇಲ್ವಿಚಾರಕರು ಅದ ದೀಪಕ್, ಸೇವಾಪ್ರತಿನಿಧಿಗಳಾದ ಕುಸುಮ, ಹೇಮಾ, ದರ್ಶನ್, ನಿತಿನ್, ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಅಧ್ಯಕ್ಷರು ಅದ ಜಗತ್, ರವಿ, ರವೀಂದ್ರ, ಸತೀಶ್, ಸುನಿಲ್ ಹೊಸಪುರ, ಪೂರ್ಣೇಶ್, ಇಂದಿರಾ, ಪ್ರವೀಣ್,ಸುಮನ್ ಮತ್ತಿತರರು ಇದ್ದರು.

