ವ್ಯಕ್ತಿ ಅಲ್ಲ ವ್ಯಕ್ತಿತ್ವಕ್ಕೆ ಸಂದ ಅವಕಾಶ..
1 min read
ವ್ಯಕ್ತಿ ಅಲ್ಲ ವ್ಯಕ್ತಿತ್ವಕ್ಕೆ ಸಂದ ಅವಕಾಶ..
……
ಸಂವಿಧಾನದ ಸಾಮಾಜಿಕ ನ್ಯಾಯ ಅದರ ನೈಜತೆ ಎಲ್ಲಿ ಆದ್ರೂ ಪ್ರದರ್ಶನ ಆಗಿದ್ರೆ ಅದು ದಾರದಹಳ್ಳಿ ಅನ್ನುವ ಮೂಡಿಗೆರೆ ತಾಲೂಕಿನ ಒಂದು ಗ್ರಾಮದಲ್ಲಿ ಎನ್ನಬಹುದು ಅದಕ್ಕೆ ಸಾಕ್ಷಿ ಈ ದಿನ ಕೆಸವಳಲು ಸಿದ್ದೇಶ್ ಅವರು ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಇದೊಂದು ಇತಿಹಾಸ ಅಷ್ಟೇ ಅಲ್ಲದೆ ಇಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಎಲ್ಲರಿಗು ಒಂದು ಅವಕಾಶ ಕೊಡಬೇಕು ಎನ್ನುವ ಎಲ್ಲ ನಿರ್ದೇಶಕರ ಚಿಂತನೆಯಲ್ಲಿ ಅವರೆಲ್ಲರಿಗೂ ಸಿದ್ದೇಶ ಅನ್ನುವ ಒಬ್ಬ ವ್ಯಕ್ತಿಯ ಬದಲಾಗಿ ವ್ಯಕ್ತಿತ್ವವೆ ಎದ್ದು ಕಂಡಿರುವುದು ಸಹಜವಾಗಿ ಎಲ್ಲರಿಗೂ ಮೂಡುವ ಮಾತಾಗಿದೆ ಹಾಗಾಗಿ ಇಂತಹ ಅವಕಾಶ ಮಾಡಿಕೊಟ್ಟ ಎಲ್ಲ ನಿರ್ದೇಶಕರಿಗೂ ನಾವೆಲ್ಲರೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳುತ್ತಾ ಸಿದ್ದೇಶ ಅವರ ಸಾಧನೆ ಮತ್ತು ಸೇವೆ ಈ ಸಮಾಜಕ್ಕೆ ಮತ್ತಷ್ಟು ಬೇಕಾಗಿದೆ ಎಂದು ಈ ದಿನ ಅವರ ಮನೆಯಲ್ಲಿ ಅವರನ್ನು ಅಂಬೇಡ್ಕರ್ ಯುವಕ ಸಂಘ ಬಕ್ಕಿ ಇವರ ಪರವಾಗಿ ಸನ್ಮಾನಿಸಿ ಬಕ್ಕಿ ಮಂಜುನಾಥ್ ಮಾತನಾಡಿದರು.
<span;>ಈ ಸಂದರ್ಭದಲ್ಲಿ ಮುಖಂಡರಾದ ಸುಮಿತ್ರಾ ಕುಮಾರ್, ನಾಗೇಶ್ ಬಿ ಆರ್, ರಮೇಶ್ ಬಿ ಜಿ, ರವೀಂದ್ರ, ರುದ್ರೇಶ್ ಮುಂತಾದವರು ಇದ್ದರು.

