लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಿದ್ಧ ಮಾದರಿಯನ್ನು ಮೀರಿ ಅಧ್ಯಕ್ಷರಾದ ಕೆಸವಳಲು ಸಿದ್ದೇಶ್ ಕೆ.ಎಂ “…

1 min read

” ಸಿದ್ಧ ಮಾದರಿಯನ್ನು ಮೀರಿ ಅಧ್ಯಕ್ಷರಾದ ಕೆಸವಳಲು ಸಿದ್ದೇಶ್ ಕೆ.ಎಂ ”

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ ಪ್ರಾಮುಖ್ಯತೆ ಕೊಡಲಾಗಿತ್ತು. ಇದೇ ತಿಂಗಳು ನವೆಂಬರ್ ತಿಂಗಳ 14 ಪಂಡಿತ್ ನೆಹರು ರವರ ಜನ್ಮ ದಿನ ಆಚರಣೆಯನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಿದೆವು. ನೆಹರೂ ರವರ ಕೃಷಿಗೆ ಪ್ರಾಮುಖ್ಯತೆ ಕೊಟ್ಟಿದ್ದರು. ಭಾರತದಲ್ಲಿ ನಿರ್ಮಾಣವಾಗಿರುವ ಅಣೆಕಟ್ಟಿಗೆ ಭಾರತದ ದೇವಾಲಯ ಎಂದು ಬಣ್ಣಿಸಿದರು. ಅಂದರೆ ನೀರಾವರಿ ಯೋಜನೆ ಸಮೃದ್ಧವಾಗಿದ್ದರೆ ಕೃಷಿಗೆ ಅನುಕೂಲವಾಗುತ್ತದೆ ಇದರಿಂದಾಗಿ ಭಾರತದಲ್ಲಿ ಬಡತನವನ್ನು ನಿರ್ಮೂಲನೆ ಆಗಿ ಹಸಿವು ಮುಕ್ತ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಬಹುದು ಎಂಬುದು ನೆಹರೂರವರ ಕನಸಾಗಿತ್ತು.

ಚರಿತ್ರೆ ಪುಟಗಳನ್ನು ತಿರುವಿ ಹಾಕಿದಾಗ ಬ್ರಿಟಿಷರಿಗೆ ಸಿಂಹ ಸ್ವಪ್ನ ವಾಗಿದ್ದ ಹಜಾರತ್ ಟಿಪ್ಪು ಸುಲ್ತಾನ್ ರವರ ಜನ್ಮ ದಿನಾಚರಣೆ ಈ ದಿನ. ಬ್ರಿಟಿಷರನ್ನು ಭಾರತದಿಂದಲೇ ಓಡಿಸಬೇಕೆಂಬ ಪಣತೊಟ್ಟಿದ್ದ ಟಿಪ್ಪುವನ್ನು ನೆನೆಯುತ್ತಾ, ಅವರ ಜನಪರ ಅಭಿವೃದ್ಧಿ ಕಾರ್ಯಗಳಲ್ಲಿ ಕನ್ನಾಂಬಾಡಿ ಕಟ್ಟೆ ಕಟ್ಟಲು ಅಡಿಪಾಯವನ್ನು ಹಾಕಿದ್ದು. ನೀರಾವರಿ ವ್ಯವಸ್ಥೆ ಪ್ರಧಾನವಾಗಿದ್ದರೆ ಕೃಷಿ ಸಮೃದ್ಧವಾಗುತ್ತದೆ ಎಂಬುದು ಅವರ ದೂರ ದೃಷ್ಟಿಯ ಆಲೋಚನೆಯಾಗಿತ್ತು. ಹಸಿವು ಮುಕ್ತ ರಾಜ್ಯವಾಗಬೇಕಾದರೆ ಕೃಷಿ ಅಭಿವೃದ್ಧಿಯಾಗಲೇ ಬೇಕು. ಎಂದು ಕೃಷಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದರು. ಅಂದರೆ ಕೃಷಿ ಅಭಿವೃದ್ಧಿಯಾದರೆ ರಾಷ್ಟ್ರ ಅಭಿವೃದ್ಧಿಯಾಗುತ್ತದೆ.

ಕೃಷಿ ಇಲ್ಲದ ದೇಶ ಹಸಿವಿನಿಂದ ನರಳಬೇಕಾಗುತ್ತದೆ ಅದಕ್ಕೆ ಉದಾಹರಣೆ ಎಂದರೆ ಸೋಮಾಲಿಯದಂತಹ ದೇಶಗಳು.

ಅಂದರೆ ಕೃಷಿ ಇಲ್ಲದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ ಅಮೆರಿಕದಂತಹ ಬೃಹತ್ ದೊಡ್ಡಣ್ಣದೇಶಕ್ಕೆ ಸವಾಲಾಗಿ ನಿಂತಿರುವ ದೇಶವೆಂದರೆ ಚೀನಾ ದೇಶ. ಚೀನಾದಲ್ಲಿ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬುದೇ ಕೃಷಿ.

ಭಾರತದ ಸ್ವಾತಂತ್ರ್ಯ ನಂತರ ಕೃಷಿಯನ್ನು ಅಭಿವೃದ್ಧಿಪಡಿಸಲು ಅನೇಕ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು.
ಬಿ . ಕಣಾಗಿನಾಳದಲ್ಲಿ ಪ್ರಪ್ರಥಮ ಕೃಷಿ ಸಹಕಾರಿ ಸಂಘವನ್ನು ಪ್ರಾರಂಭಿಸಲಾಯಿತು ಅಂದಿನಿಂದ ಇಂದಿನವರೆಗೂ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದವರೆಲ್ಲ ದೊಡ್ಡ ದೊಡ್ಡ ಭೂ ಮಾಲಿಕರೇ ಹೊರತು, ಯಾರೂ ಸಹ ಭೂಹೀನಾ ಬಡವ ಅಧ್ಯಕ್ಷರಾಗಿ ಆಯ್ಕೆಯಾಗಿರಲಿಲ್ಲ ಆದರೆ ಇಂದು ಪ್ರಾಥಮಿಕ ಕೃಷಿ ಸಹಕಾರಿ ಸಂಘ ನಿಯಮಿತ ದಾರದಹಳ್ಳಿಯಲ್ಲಿ ಯಾರಿಗೂ ಕೇಡನ್ನು ಬಯಸದೆ, ಯಾರಿಗೂ ತೊಂದರೆ ಮಾಡದ ಸೌಮ್ಯ ಸ್ವಭಾವದ ಜನಪರ ಸಮಾಜ ಸೇವೆಯಲ್ಲಿ ಸದಾ ಸಕ್ರಿಯವಾಗಿರುವ ಹಾಗೂ ಕಡಿಮೆ ಮಾತನಾಡುತ್ತಾ, ಹೆಚ್ಚು ಕೆಲಸ ಮಾಡುವ ಸರಳ ಜೀವಿ ಸಂಬಂಧದಲ್ಲಿ ನನ್ನ ಅಳಿಯರಾದಂತಹ ಕೆಸವಳಲು ಸಿದ್ದೇಶ್ ಕೆ.ಎಂ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳಿಗೆ ಮೊದಲಿಗೆ ಅಭಿನಂದನೆಗಳು..

ಅಧ್ಯಕ್ಷರಾಗಿ ಆಯ್ಕೆಯಾದ ಮರುಕ್ಷಣವೇ ಅವಿನ್ ಟಿ.ವಿ ಯಲ್ಲಿ ಪ್ರಸಾರ ಮಾಡಿದಂತಹ ಸ್ಥಾನಿಕ ಸಂಪಾದಕರಾದಂತಹ ಪ್ರಗತಿಪರ ಚಿಂತಕರು, ಸದಾ ಬಡವರ ಧ್ವನಿಯಾಗಿರುವ, ಬಡವರ ಸಾಧಾನೆಗಳನ್ನು ಹಾಗೂ ಅವರ ಪ್ರತಿಭೆಗಳನ್ನು ಸದಾ ಸಮಾಜಕ್ಕೆ ತನ್ನ ಅವಿನ್ ಟಿವಿ ಯ ಮೂಲಕ ಸಮಾಜದ ಪರಿಚಯಿಸುತ್ತಿರುವ ಶ್ರೀಯುತ ಮಗ್ಗಲಮಕ್ಕಿ ಗಣೇಶ್ ಸಾರ್ ರವರಿಗೆ ಕೃತಜ್ಞತೆಗಳು.

ಭವಿಷ್ಯ ನಾಳೆ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಲಿದೆ ಏಕೆಂದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರು ಎಕರೆ ಅಗರ್ಭ ಶ್ರೀಮಂತರಿರುವ ಪ್ರದೇಶದಲ್ಲಿ ಭೂ ಹೀನಾ ಕೆಸವಳಲು ಗ್ರಾಮದ ಶ್ರೀಯುತ ಮೋಟಯ್ಯ ನವರ ಮಗನಾಗಿ ಜನಿಸಿ, ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷರಾಗಿ, ಹಾಲಿ ಸದಸ್ಯರಾಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಕಳೆದ ಬಾರಿ ತಾಲ್ಲೂಕು ಮಟ್ಟದ ಭೀಮಾ ಕೋರೆಂಗಾವ್ ವಿಜಯೋತ್ಸವದಲ್ಲಿ ಯಾರ ವಿರೋಧವು ಇಲ್ಲದೆ ಅಧ್ಯಕ್ಷರಾಗಿ ಆಯ್ಕೆಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದಂತಹ ಸರಳ ಜೀವಿ. ಅಂತಹ ಧೀಮಂತ ವ್ಯಕ್ತಿತ್ವ ಹೊಂದಿರುವ ನಾಯಕ
ನಾಳೆ ಅಂದರೆ ದಿನಾಂಕ.21.11.2025ರ ಶುಕ್ರವಾರ ಚರಿತ್ರೆಯ ಪುಟಗಳಲ್ಲಿ ಸೇರುವ ಸುದಿನ. ಏಕೆಂದರೆ ಕರ್ನಾಟಕ ರಾಜ್ಯದಲ್ಲಿದೆ ಪ್ರಪ್ರಥಮವಾಗಿ ಸಾಮಾನ್ಯ ವ್ಯಕ್ತಿ ಸಿದ್ದ ಮಾದರಿಯನ್ನು ಮೀರಿ ಯಾರ ವಿರೋಧವು ಇಲ್ಲದೇ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ನಾಳೆ ಚರಿತ್ರೆ.

“ಸಾಧಾನೆಗೆ ಅಸಾಧ್ಯವಾದುದ್ದು ಯಾವುದು ಇಲ್ಲ ಸಾಧಿಸಲು ಬೇಕು ಛಲ”

ಪರಿಶ್ರಮದ ಛಲಗಾರ ಕೆಸವಳಲು ಸಿದ್ದೇಶ್ ಕೆ.ಎಂ ರವರಿಗೆ, ನೊಂದವರ ಧ್ವನಿ ಅವಿನ್ ಟಿ.ವಿ ವತಿಯಿಂದ ಹಾಗೂ ವೈಯುಕ್ತಿಕವಾಗಿಯು ಅಭಿನಂದನೆಗಳು. 💐💐💐💐💐💐💐💐

ನಾಳೆ ನಡೆಯಲಿರುವ ಪದಗ್ರಹಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೂತನ ಅಧ್ಯಕ್ಷರನ್ನು ಅಭಿನಂದಿಸೋಣ……

ಬರಹ: ಡಾ. ಹರೀಶ್ ನಲ್ಕೆ….
🌹🌹🌹🌹🌹🌹🌹🌹

About Author

Leave a Reply

Your email address will not be published. Required fields are marked *

You may have missed