ಮತದಾನವೇ ಸಂವಿಧಾನದ ಸೌಂದರ್ಯ ಎಂ.ಕೆ. ಪ್ರಾಣೇಶ್….
1 min read
ಮತದಾನವೇ ಸಂವಿಧಾನದ ಸೌಂದರ್ಯ ಎಂಕೆ ಪ್ರಾಣೇಶ್
ಮೂಡಿಗೆರೆ: ಸಂವಿಧಾನದಲ್ಲಿ ಮತ ದಾನವೇ ಶ್ರೇಷ್ಠವಾಗಿದ್ದು ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ನೈಜ ಮತದಾರರು ಮತದಾನದಿಂದ ಹೊರಗೂಳಿಯಬಾರದು ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ತಿಳಿಸಿದರು.
ಅವರು ಬಿಜೆಪಿ ಕಚೇರಿ ಪಂಚವಟಿಯಲ್ಲಿ ತೀವ್ರ ಮತ ಪರಿಷ್ಕರಣೆ ಬಗ್ಗೆ ಬಿಎಲ್ ಎ 2 ಕಾರ್ಯಕರ್ತರಿಗೆ ನಡೆದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿ. ಭಾರತದ ಪ್ರಜಾಪ್ರಭುತ್ವದ ಶಕ್ತಿ ಅಡಗಿರುವುದು ಮತದಾನದಿಂದ ದೇಶದ ಭವಿಷ್ಯವನ್ನು ರೂಪಿಸುವುದು ಚುನಾವಣೆಗಳು. ಇದರಲ್ಲಿ 18 ವರ್ಷ ಮೇಲ್ಪಟ್ಟವರ ಮತವನ್ನು ಸೇರ್ಪಡೆಗೊಳಿಸುವುದು ಹಾಗೂ ವಲಸೆ ಮತದಾರರನ್ನು ಹೊರಗಿಡುವುದು ಸೇರಿದಂತೆ ನ್ಯೆಜ ಮತದಾರರನ್ನು ಗುರುತಿಸಲು ಚುನಾವಣಾ ಆಯೋಗ ತೀವ್ರ ಮತ ಪರಿಕ್ಷರಣ ಪಟ್ಟಿ ತಯಾರಿಸಲು ಸಿದ್ಧತೆ ನಡೆಸುತ್ತಿದ್ದು. ಆಯೋಗದೊಂದಿಗೆ ಕೈಜೋಡಿಸಿ ನಮ್ಮ ಮತ ಬ್ಯಾಂಕನ್ನು ಭದ್ರಪಡಿಸಿಕೊಳ್ಳುವುದು ಕಾರ್ಯಕರ್ತರ ಪ್ರಮುಖ ಜವಾಬ್ದಾರಿಯಾಗಿದೆ. ಪ್ರತಿ ಭೂತ್ ಮಟ್ಟದಲ್ಲೂ ಬಿಜೆಪಿ ಕಾರ್ಯಕರ್ತರು ಮತ ಪರಿಷ್ಕರ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಸೇರ್ಪಡೆಗೊಳ್ಳುವವರನ್ನು ಖುದ್ದಾಗಿ ಪರಿಶೀಲಿಸಬೇಕು ಎರೆಡೆರಡು ಕಡೆ ಮತ ಇರುವ ಮತದಾರರನ್ನು ಗುರುತಿಸಿ ರದ್ದುಪಡಿಸಲು ಸಹಕರಿಸಬೇಕು. ಮತದಾನವೇ ಸಂವಿಧಾನದ ಸೌಂದರ್ಯವಾಗಿದ್ದು. ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಅತ್ಯಂತ ಜಾಗರೂಕತೆಯಿಂದ ಚುನಾವಣಾ ಆಯೋಗ ತಯಾರಿಸಿದ್ದಕ್ಕಾಗಿ ಕೊಟ್ಟೆ ಮತದಾರರು ಹೊರಗುಳಿದದ್ದು ಇದರಿಂದ ಮತದಾನ ಹೆಚ್ಚಾಗಿ ನಮ್ಮ ಅಭೂತಪೂರ್ವ ಗೆಲುವು ಸಾಧ್ಯವಾಯಿತು. ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ. ಆದಕ್ಷ ಆಡಳಿತ. ಸ್ವಜನ ಪಕ್ಷಪಾತ. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬುದ್ಧಿ ಕಲಿಸಲು ಮತದಾರರು ಸಿದ್ಧವಿದ್ದು. ಇದಕ್ಕೆ ನಾವುಗಳು ತಯಾರಿರಬೇಕು ಎಂದು ತಿಳಿಸಿದರು.
ಪ್ರಾಸ್ಥಾವಿಕ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಜೆ.ಎಸ್ ರಘು.2003ನೆ ಇಸವಿಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು. ಇದುವರೆಗೂ ಪರಿಷ್ಕರಣೆ ಮಾಡಿರುವುದಿಲ್ಲ. ಈ ಹಂತದಲ್ಲಿ ಅನೇಕರು ಮರಣ ಹೊಂದಿದ್ದು. ವಿಳಾಸ ಬದಲಾವಣೆ. ಹಾಗೂ ವಲಸೆ ಮತದಾರರು ಸೇರ್ಪಡೆಯಾಗಿರುವ ಸಾಧ್ಯತೆ ಇರುತ್ತದೆ. ಇವುಗಳನ್ನು ಸೂಕ್ಷ್ಮವಾಗಿ ಕಾರ್ಯಕರ್ತರು ಗಮನಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ನರೇಂದ್ರ ಕಾರ್ಯಗಾರವನ್ನು ನಡೆಸಿಕೊಟ್ಟರು. ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ. ದೀಪಕ್ ದೊಡ್ಡಯ್ಯ. ಪುಣ್ಯಪಾಲ್ ಪಂಚಾಕ್ಷರಿ ಎಂಎಲ್ ಕಲ್ಲೇಶ್. ಸುನಿಲ್ ಮಣ್ಣಿಕೆರೆ. ದನಿಕ್ ಮತ್ರಿತರರಿದ್ದರು.

