लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೂಫಿ ಪರಂಪರೆಯ ಧಾರ್ಮಿಕ ಆಚರಣೆ ರೊಟ್ಟಿ
‎ಚಿಕ್ಕಮಗಳೂರು, ನ.8: ಶ್ರೀಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ನ.೧೦ರಂದು ಸೋಮವಾರ ಬೆಳಗ್ಗೆ 11.ರಿಂದ ಮಧ್ಯಾಹ್ನ 3ರವರೆಗೆ ಶತಮಾನಗಳಿಂದ ನಡೆದು ಬರುತ್ತಿರುವ ಸೂಫಿ ಪರಂಪರೆಯ ಧಾರ್ಮಿಕ ಆಚರಣೆ ರೊಟ್ಟಿ ಭಾಜಿಸೂಫಿ ಪರಂಪರೆಯ ಧಾರ್ಮಿಕ ಆಚರಣೆ ರೊಟ್ಟಿ ಫಾತಿಹಾ(ಮಾಮಾ ಜಿಗ್ನಿ ಫಾತಿಹಾ)ಸಹಜ ನಡೆಯಲಿದೆ ಎಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ.
‎ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, ರೊಟ್ಟಿ ಭಾಜಿ ಧಾರ್ಮಿಕ ಆಚರಣೆ ಕಾರ್ಯಕ್ರಮ ಬಾಬಾ ಬುಡನ್‌ಗಿರಿ ದರ್ಗಾದಲ್ಲಿ ಶತಮಾನಗಳಿಂದ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಪರಂಪರೆಯಾಗಿದೆ. ಮುಹಮ್ಮದನ್ ರಾಜಕುಮಾರಿಯಾದ ಮಾಮಾ ಜಿಗ್ನಿ ಮಾಸಾಹಿಬ ಅವರ ಸ್ಮರಣಾರ್ಥವಾಗಿ ಈ ಧಾರ್ಮಿಕ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಅವರು ಆ ಕಾಲದಲ್ಲಿ ಫಕೀರ್‌ಗಳು ಮತ್ತು ಭಕ್ತರಿಗೆ ರೊಟ್ಟಿ ಹಾಗೂ ಭಾಜಿ ಹಂಚುವ ಶಾಂತಿಯುತ ಪರಂಪರೆ ಆರಂಭಿಸಿದ್ದು, ಅವರ ಶಾಂತಿ, ಐಕ್ಯತೆ ಮತ್ತು ಜ್ಞಾನದ ಸಂದೇಶ ಇಂದಿಗೂ ಎಲ್ಲ ಧರ್ಮಗಳ ಜನರಿಗೆ ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
‎ಈ ದರ್ಗಾ ಶತಮಾನಗಳಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಗೌರವಿಸುತ್ತಿರುವ ಶಾಂತಿಯ ತಾಣವಾಗಿದ್ದು, ಇತ್ತೀಚಿನ ಕೆಲವು ಚಟುವಟಿಕೆಗಳಿಂದಾಗಿ ದರ್ಗಾದ ಧಾರ್ಮಿಕ ಸ್ವರೂಪಕ್ಕೆ ಧಕ್ಕೆಯಾಗುತ್ತಿದೆ. ಇದು ದರ್ಗಾದ ಭಕ್ತರ ಧಾರ್ಮಿಕ ನಂಬಿಕೆಗೆ ಕುಂದುಂಟು ಮಾಡಿದೆ. ಆದ್ದರಿಂದ ಶಾಂತಿಪ್ರಿಯ ನಾಗರಿಕರು, ಭಕ್ತರು ಮತ್ತು ಅಧಿಕಾರಿಗಳು ಶತಮಾನಗಳಿಂದ ನಡೆಯುತ್ತಿರುವ ಈ ಶಾಂತಿಯುತ ಫಾತಿಹಾ ಪರಂಪರೆಯನ್ನು ಬೆಂಬಲಿಸಬೇಕು. ದರ್ಗಾದ ಪವಿತ್ರತೆ ಮತ್ತು ಇತಿಹಾಸದ ಸತ್ಯವನ್ನು ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
‎ಈ ದರ್ಗಾ ಅಧಿಕೃತವಾಗಿ ಮುಹಮ್ಮದನ್ ಇನ್‌ಸ್ಟಿಟ್ಯೂಟ್ ಎಂದು ಗುರುತಿಸಲ್ಪಟ್ಟಿದ್ದು, ಮುಜರಾಯಿ ಕೈಪಿಡಿಯ ಅಧ್ಯಾಯ ೧೧ ಪುಟ ೫೭೧ ಹಾಗೂ
ಸ್ಥಳಗಳ ಪೂಜಾ ವಿಧಾನ ಕಾಯ್ದೆ, ೧೯೯೧ (ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ೧೯೯೧) ಪ್ರಕಾರ ಇದರ ಧಾರ್ಮಿಕ ಸಂಪ್ರದಾಯ ಮತ್ತು ಸಂಸ್ಕತಿಯನ್ನು ಕಾಪಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿರುವ ಅವರು, ಫಾತಿಹಾ ಸಂಪೂರ್ಣ ಶಾಂತಿಯುತವಾಗಿ ನಡೆಯಲಿದ್ದು, ಇದರ ಅಂಗವಾಗಿ ಹಜ್ರತ್ ದಾದಾ ಹಯಾತ್ (ದಾದಾ ಪೀರ್) ಅವರ ಪಾದುಕೆ (ಖಡವೇ) ದರ್ಶನ, ಚಿಲ್ಲಾ ಮತ್ತು ಪೀಠದ ದರ್ಶನ, ಮಾಮಾ ಜಿಗ್ನಿ ಮಾಸಾಹಿಬ ಅವರ ಪವಿತ್ರ ಚಿಲ್ಲಾ ಮತ್ತು ಪೀಠದ ದರ್ಶನ, ಪವಿತ್ರ ಕಲಿಮಾ ತಯ್ಯಿಬ ಇರುವ ದ್ವಾರದ ದರ್ಶನ, ಗುಹೆಯ ಹೊರಗಿನ ಪವಿತ್ರ ಚೌಕಿ ಮತ್ತು ಅರೇಬಿಕ್ ಹಾಗೂ ಫರ್ಶಿಯನ್ ಭಾಷೆಯ ತಾವೀಜ್ ದರ್ಶನ ಮತ್ತು ಜಮಾಲುಲ್ಲಾ ಮಘ್ರಿಬಿ ಶಾ ಖಾದ್ರಿ (ಕಾಫಿ ಗೋರಿ) ಅವರ ದರ್ಶನ ನಡೆಯಲಿದೆ. ಫಾತಿಹಾ ನಂತರ ನಿಯಾಜ್ (ರೊಟ್ಟಿ-ಭಾಜಿ ಆಹಾರ ವಿತರಣೆ) ಮಾಡಲಾಗುತ್ತದೆ. ಭಕ್ತರು ಪ್ರೀತಿ ಮತ್ತು ಧಾರ್ಮಿಕ ಐಕ್ಯತೆಯೊಂದಿಗೆ ಈ ದರ್ಗಾದ ಸಂರಕ್ಷಣೆ ಹಾಗೂ ಪಾವಿತ್ರತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಬೇಕೆಂದು ಅವರು ವಿನಂತಿಸಿದ್ದಾರೆ.
‎ಸಯ್ಯದ್ ಫಕ್ರುದ್ದೀನ್ ಶಾ ಖಾದ್ರಿ,
‎ಪ್ರಧಾನ ಕಾರ್ಯದರ್ಶಿ,
ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು.
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed