लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭೂಮಿಯ ಹಕ್ಕು ಕಸಿದುಕೊಳ್ಳಲು ಎಸ್‌ಐಟಿ ಮುಂದಾದರೆ ರೈತರು ಬೀದಿಗಿಳಿದು ಹೋರಾಟ….

1 min read

ಭೂಮಿಯ ಹಕ್ಕು ಕಸಿದುಕೊಳ್ಳಲು ಎಸ್‌ಐಟಿ ಮುಂದಾದರೆ ರೈತರು ಬೀದಿಗಿಳಿದು ಹೋರಾಟ
ಚಿಕ್ಕಮಗಳೂರು: ಈ ಹಿಂದೆ ಅಧಿಕಾರಿ, ಜನಪ್ರತಿನಿಧಿಗಳೇ ರೈತರಿಗೆ ಅಧಿಕೃತವಾಗಿ ನೀಡಿರುವ ಭೂಮಿಯ ಹಕ್ಕನ್ನು ಕಸಿದುಕೊಳ್ಳಲು ಎಸ್‌ಐಟಿ ಮುಂದಾದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಚ್. ಎಚ್.ದೇವರಾಜ್ ಎಚ್ಚರಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 1980 ರಿಂದೀಚೆಗೆ ಆಗಿರುವ ಭೂ ಮಂಜೂರಾತಿಯನ್ನು ರದ್ದು ಮಾಡಲು ಎಸ್‌ಐಟಿಗೆ ಸರ್ಕಾರ ಆದೇಶಿಸಿದೆ. ಭೂಮಿ ಮಂಜೂರಾತಿ ಮಾಡಬೇಕಾದರೆ ಶಾಸಕ, ಅಧಿಕಾರಿಗಳನ್ನೊಳಗೊಂಡ ಸಮಿತಿಯಿಂದ ಅನುಮೋದನೆಯಾಗಿ ರೈತ-ರಿಗೆ ಭೂಮಿಯ ಸಾಗುವಳಿ ಚೀಟಿ ನೀಡಲಾಗಿದೆ.
ಅಂದಿನ ಜಿಲ್ಲಾಧಿಕಾರಿ, ತಹಶೀಲ್ದಾರ್, ಶಾಸಕರಿಗೆ ಪ್ರಜ್ಞೆ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಅರಣ್ಯ ಪ್ರದೇಶದ ಭೂಮಿಗೆ ಅವರು ಸಾಗುವಳಿ ಚೀಟಿ ನೀಡಿರುವ ತಪ್ಪಿಗೆ ರೈತರು ಈಗ ಪರಿಣಾಮ ಎದುರಿಸಬೇಕಾಗಿದೆ. ಹೀಗಾಗಿ ಮಂಜೂರು ಮಾಡಿರುವ ಅಧಿಕಾರಿ ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲು ಮಾಡಬೇಕೆಂದು ಒತ್ತಾಯಿಸಿದರು.
ಮೀಸಲು ಅರಣ್ಯ ಪ್ರದೇಶ ಒತ್ತುವರಿಯಾಗಿದ್ದರೆ ಅಥವಾ ಸಾಗುವಳಿ ಚೀಟಿ ನೀಡಿದ್ದರೆ ಅಂತಹ ಭೂಮಿಯನ್ನು ಎಸ್‌ಐಟಿ ಗುರುತಿಸಿ ತೆರವುಗೊಳಿಸಲಿ. ದೊಡ್ಡ ದೊಡ್ಡ ಕಂಪನಿಗೆ ಮಂಜೂರು ಮಾಡಿರುವ ಭೂಮಿಯನ್ನು ಹಿಂಪಡೆಯಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಡೀಮ್ಸ್ ಅರಣ್ಯದಲ್ಲಿ ಸಾಗುವಳಿ ಚೀಟೆ ಪಡೆದಿರುವ ರೈತರನ್ನು ಯಾವುದೇ ಕಾರಣಕ್ಕೂ ತೆರವು ಮಾಡಬಾರದು. ಒಂದು ವೇಳೆ ಮಾಡಿದಲ್ಲಿ ರೈತರು ಬೀದಿಗೆ ಇಳಿಯಲಿದ್ದಾ ರೆಂದು ತಿಳಿಸಿ ಜಿಲ್ಲೆಯ 5 ಮಂದಿ ಶಾಸಕರು ಈ ಬಗ್ಗೆ ಚರ್ಚಿಸಿ ಸದನದಲ್ಲಿ ಧ್ವನಿ ಎತ್ತಬೇಕೆಂದು ಆಗ್ರಹಿಸಿದರು.
ಇತ್ತೀಚೆಗೆ ಶೃಂಗೇರಿ ತಾಲೂಕಿನಲ್ಲಿ ಆನೆ ದಾಳಿಯಿಂದ ಇಬ್ಬರು ಬಲಿಯಾಗಿ ರುವುದು ದುಖಃಕರ ಸಂಗತಿ. ಶಾಸಕ ಟಿ.ಡಿ.ರಾಜೇಗೌಡ, ಸಚಿವ ಕೆ.ಜೆ ಜಾರ್ಜ್ ಅವರು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ ಆರ್ಥಿಕ ಸಹಾಯ ನೀಡಿದ್ದಾರೆ. ಆದರೆ, ಬಿಜೆಪಿ ಮುಖಂಡರು ಸಾವಿನಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಸಚಿವ ಜೀವರಾಜ್ ಹಾಲಿ ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ಆನೆ ದಾಳಿ ತಡೆ ಕುರಿತಂತೆ ಆಡಳಿತ, ಪ್ರತಿಪಕ್ಷದ ಮುಖಂಡರು ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಅತೀಕ್ ಖೈಸರ್, ಡಿ.ಸಿ.ಪುಟ್ಟೇಗೌಡ, ಇಂದಾವರ ಲೋಕೇಶ್, ಸಂತೋಷ್, ಸಣ್ಣಪ್ಪ ಇದ್ದರು.

About Author

Leave a Reply

Your email address will not be published. Required fields are marked *

You may have missed