लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿದ್ಯಾರ್ಥಿಗಳಲ್ಲಿ ಕಲೆ ಪೋಷಿಸುವ ಕಾರ್ಯವಾಗಲಿ

ಚಿಕ್ಕಮಗಳೂರು: ಆಧುನಿಕ ಶಿಕ್ಷಣ ಪದ್ದತಿ ವಿದ್ಯಾರ್ಥಿಗಳನ್ನು ಯಂತ್ರಗಳಂತೆ ಸಿದ್ದ ಪಡಿಸುತ್ತಿದೆ. ವಿದ್ಯಾರ್ಥಿಗಳಲ್ಲಿರುವ ಕಲೆಯನ್ನು ಪೋಷಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಸಂಘಟನೆ ಕಾರ್ಯಪ್ರವೃತ್ತವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ಹೇಮಾಂಗಣ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು ಇವರ ನೂತನ ಚಿಕ್ಕಮಗಳೂರು ಘಟಕದ ಪದ ಪ್ರಧಾನ ಹಾಗೂ ಯುವ ಸಾಧಕ ರಿಗೆ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1999ರಲ್ಲಿ 70000 ಕ್ಕಿಂತ ಹೆಚ್ಚು ಯುವಕ ಸಂಘಗಳಿದ್ದವು, ಆದರಿಂದು 2-3 ಸಾವಿರ ಯುವಕ ಸಂಘಗಳಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೊಂದಣಿ ಕಾಯ್ದೆ ಕಡ್ಡಾಯ ಮಾಡಿದ ಪರಿಣಾಮ ಯುವ ಸಂಘಗಳು ಕ್ಷೀಣಿಸಿವೆ. ಸ್ಥಿರ ನಿಧಿಯನ್ನು ನೀಡದಿರುವ ಕಾರಣ ಸಂಘಗಳಿಗೆ ಯಾವ ಪ್ರಯೋಜನವಿಲ್ಲ, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುವೆ ಎಂದು ಭರವಸೆ ನೀಡಿದರು.

ಕಲೆಯನ್ನೇ ಆರಾಧಿಸಿ ಬದುಕಿದ ಹಲವಾರು ಕಲಾವಿದರಿಗೆ ಮಾಸಾಶನ ಸರಿಯಾಗಿ ಬರುತ್ತಿಲ್ಲ. ಕೂಡಲೇ ಇದರತ್ತ ಗಮನ ಹರಿಸಿ ಅವರ ವೃದ್ಧಾಪ್ಯಕಾಲದಲ್ಲಿ ಸರ್ಕಾರ ಮಾಶಾಸನ ನೀಡಿ ನೆರವಾಗಬೇಕು. ಕಲೆಯನ್ನು ನಂಬಿಕೊಂಡು ಬದುಕು ಸಾಗಿಸುವ ಕಲಾವಿದರಿಗೆ ಸ್ಪಂದಿಸುವ ಜೊತೆಗೆ ಆರ್ಥಿಕ ಶಕ್ತಿ ತುಂಬಲು ಮಾಶಾಸನದ ಅವಶ್ಯಕತೆಯಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿ ಇತ್ತೀಚಿನ ದಿನಗಳಲ್ಲಿ ರಾಜ್ಯದ ಯುವಜನ ಮೇಳಗಳು, ರಾಜ್ಯ ಜಿಲ್ಲಾ ಯುವ ಪ್ರಶಸ್ತಿಗಳು, ಯುವ ಸಂಪರ್ಕ ಸಭೆಗಳು, ಸಂಘಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸಾಮಗ್ರಿಗಳ ಯೋಜನೆ, ಗರುಡಿ ಮನೆ ಉಪಕರಣಗಳು ನೀಡು ವುದನ್ನು ಸರ್ಕಾರ ಪುನರಾರಂಭಿಸಬೇಕು ಎಂದರು.

ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಮಾತನಾಡಿ ಕನ್ನಡ ಮತ್ತು ಕರ್ನಾಟಕದ ಹಿರಿಮೆಯನ್ನು ಜಾಗೃತಿ ಮೂಡಿಸುವ ಕಾಲಘಟ್ಟಕ್ಕೆ ಬಂದಿದ್ದೇವೆ. ಕನ್ನಡ ಎಂದಿಗೂ ಜೀವಂತವಾಗಿರಲಿದೆ ಎಂದರು.

ತಾಲೂಕಿನ ಯುವ ಸಂಘಟಕ ಹೇಮಂತ್ ಕುಮಾರ್ ಹಾಗೂ ಮೂಡಿಗೆರೆ ಯುವ ಕಲಾವಿದೆ ಶುಭಾ ಹೊಸಕೆರೆ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯ್ (ಅಧ್ಯಕ್ಷ) ಪ್ರತಿಭಾ (ಉಪಾಧ್ಯಕ್ಷ), ರಂಜಿತ್ (ಪ್ರ.ಕಾರ್ಯ ದರ್ಶಿ), ಎಸ್.ಹರ್ಷಿತ್ ಕುಮಾರ್ (ಖಜಾಂಚಿ), ಎನ್.ಎಂ.ಮಹೇಶ್ (ಜಂಟಿ ಕಾರ್ಯದರ್ಶಿ), ಭರತ್ (ಸಂ. ಕಾರ್ಯದರ್ಶಿ), ವಿಜಯಲಕ್ಷ್ಮೀ (ಪತ್ರಿಕಾ ಕಾರ್ಯದರ್ಶಿ), ಎಂ.ಎಂ.ದಿವ್ಯಾ (ಕ್ರೀಡಾ ಕಾರ್ಯದರ್ಶಿ), ಗಿರೀಶ್ (ಸಂಚಾಲಕ) ತೇಜೇಸ್ (ಸಹ ಸಂಚಾಲಕ), ಜೋಯಲ್, ಕೀರ್ತಿ (ಸದಸ್ಯರು) ಈ ನೂತನ ಪದಾಧಿಕಾರಿಗಳನ್ನು ಸಿ ಟಿ ರವಿರವರು ಹಾಗೂ ಎಸ್.ಬಾಲಾಜಿ ರಾಜ್ಯಾಧ್ಯಕ್ಷರು ಇತರೆ ಗಣ್ಯರು ಪದ ಪತ್ರವನ್ನು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು, ಯುವಕರಲ್ಲಿ ಇನ್ನಷ್ಟು ಕಲೆಯ ಉತ್ಸಾಹಗಳು ಮೂಡಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಾಂತಮೂರ್ತಿ, ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ಗೌರವಾಧ್ಯಕ್ಷ ಎಸ್.ಎಸ್.ಶಿವಣ್ಣ, ಅಧ್ಯಕ್ಷ ಜಯಪ್ರಕಾಶ್, ತಾಲ್ಲೂಕು ಅಧ್ಯಕ್ಷ ಅಶೋಕ್ ರಾಜರತ್ನಂ, ಮೂಡಿಗೆರೆ ಅಧ್ಯಕ್ಷ ಹೆಚ್.ಎಸ್‌. ರವಿ, ಜನಪವ ಯುವ ಬ್ರಿಗೇಡ್ ಗ್ರಾಮೀಣ ಸಂಚಾಲಕ ದಿಲೀಪ್, ನಗರ ಸಂಚಾಲಕ ಅಮಿತ್, ಮುಖಂಡರುಗಳಾದ ಸುರೇಶ್, ಪವಿತ್ರಾ ವಿಜಯ್, ಶ್ರೀನಾಥ್, ಅಶ್ವಿನಿ,ಬಿ.ಜಿ.ಮಧು ಇದ್ದರು.
ಕಾರ್ಯಕ್ರಮದಲ್ಲಿ ಅಶ್ವಿನಿ ಹಾಗೂ ಪವಿತ್ರ ವಿಜಯ ರವರು ಕಾರ್ಯಕ್ರಮದ ನಿರೂಪಣೆಯನ್ನು ವಹಿಸಿದ್ದರು ಹಾಗೂ ವಿಜಯಲಕ್ಷ್ಮಿ ಅವರು ಸರ್ವರಿಗೂ ವಂದನಾರ್ಪಣೆ ಮಾಡಿದರು
ನಂತರ ಕಾರ್ಯಕ್ರಮದಲ್ಲಿ ಮಧು ವಿಜಯ್ ಹಾಗೂ ರವಿ ರವರು ಅದ್ಭುತವಾಗಿ ಗಾಯನವನ್ನು ಪ್ರಸ್ತುತಪಡಿಸಿದರು..

About Author

Leave a Reply

Your email address will not be published. Required fields are marked *

You may have missed