लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಸುದ್ದಿಜಾಲ ✒️: *ಒಂದು ಸಂವೇದನೆಯ ಸೂರಿನಡಿ ಪ್ರಬುದ್ಧ ಮನಸ್ಸು ~ ಸಮೃದ್ಧ ಸಮಾಜಕ್ಕಾಗಿ ನಾವು ~ನೀವು ಕುರಿತು ಚಿಂತನ ಮಂಥನ:*

ಚಿಕ್ಕಮಗಳೂರು ಅ 09: ಭಾರತ ಎಂದರೆ ಅದು ಏಕವಚನವಲ್ಲ ಬಹುವಚನ, ಬಹುವಚನವೆಂದರೆ ಅದು
ಎಲ್ಲರನ್ನೊಳಗೊಳ್ಳವಂತಿರಬೇಕು, ಕೇಳುವುದು ಎಂದರೆ ಕೇವಲ ಕಿವಿಯಿಂದ ಮಾತ್ರ ಕೇಳುವುದಲ್ಲ,ಅದು ಮನಸ್ಸಿನಿಂದಲೂ ಆಲಿಸುವಂತಿರಬೇಕು, ಈ ನೆಲದ ಕಟ್ಟಕಡೆಯ ಮನುಷ್ಯನು ಆಡುವ ಮಾತೊಂದನ್ನು ಅ ದೇಶದ ಪ್ರಥಮ ಪ್ರಜೆಯೂ ಆಲಿಸುವ ಗುಣವನ್ನು ಹೊಂದಿರಬೇಕು, ಆಗ ಮಾತ್ರ ನಾವಾಡುವ ಮಾತು ಕೇಳುವ ನುಡಿಯು ಒಂದು ಬೌದ್ಧಿಕತೆಯೊಂದಿಗೆ ಆಪ್ತವಾಗುತ್ತವೆ, ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಂಡು, ಪರಸ್ಪರರ ನಿತ್ಯ ಬದುಕು ಸಹನೀಯವಾಗಿ ಹತ್ತಿರವಾಗಲು ಸಹಾಯವಾಗುತ್ತದೆ.

ಆದರೆ,
ವರ್ತಮಾನದ ಭಾರತೀಯ ಸಮಾಜ ಅಥವಾ ಈ ಜಗತ್ತು ಇಂದು ಅಕ್ರೋಶಭರಿತವಾದ ಕೂಗಾಟ ಮತ್ತು ಅರಚಾಟಗಳ ಚಟಕ್ಕೆ ಬಿದ್ದು, ಒಬ್ಬರ ಮಾತನ್ನು ಇನ್ನೊಬ್ಬರು ಕೇಳಿಸಿಕೊಳ್ಳಲಾಗದ ಸ್ಥಿತಿಗೆ ಬಂದು ನಿಂತಿದೆ.

ಇನ್ನೂ,
ಸಾಹಿತಿಗಳು, ಚಳುವಳಿಗಾರರು, ರಾಜಕಾರಣಿಗಳು ಹಾಗೂ ಸಾಧು ಸಂತರಾದಿಯಾಗಿ, ಈ ಎಲ್ಲಾ ಭಾಷಣಕಾರರಿಗೆ “ಬಾಯುಂಟು ಕಿವಿ ಇಲ್ಲ” ಎನ್ನುವ ಪರಿಸ್ಥಿತಿಗೆ ಈ ಸಮಾಜ ಬಂದು ನಿಂತಿದೆ.
ಕೇಳಿಸಿಕೊಳ್ಳುವುದು ಎಂದರೆ ಈ ಎಲ್ಲರಿಗೂ ಒಂದು ರೀತಿ ಅಲರ್ಜಿ ಎನ್ನುವಂತಾಗಿದೆ.

ವಸ್ತು ಸ್ಥಿತಿ ಹೀಗಿರುವಾಗ, ಮಾನವೀಯ ಸಂಬಂಧಗಳು ದಿನದ ದಿನಕ್ಕೆ ಧರ್ಮದ, ಮತದ,ಜಾತಿಯ ಶ್ರೇಷ್ಠತೆಯ ವ್ಯಸನದ ಹೆಸರಿನಲ್ಲಿ ಆದೋಗತಿಗಿಳಿಯುತ್ತಿರುವಾಗ ಕೇಳಿಸಿಕೊಳ್ಳುವದನ್ನೇ ಮನುಷ್ಯ ಜನಾಂಗ ಮರೆತುಬಿಟ್ಟರೆ ಈ ಸಮಾಜದ ಮುಂದಿನ ಭವಿಷ್ಯವೇನು ?
ದೇಶದ ವಾರಸುದಾರಿಕೆಯನ್ನು ವಹಿಸಿಕೊಳ್ಳಬೇಕಾದ ಯುವಜನರ ಪಾಡೇನು ? ಎಂಬುದು ನಮ್ಮ ಮುಂದಿರುವ ಒಂದು ಯಕ್ಷ ಪ್ರಶ್ನೆಯಾಗಿದೆ.

ಬದುಕು ಈಗ ನಾವು ಇರುವುದಕ್ಕಿಂತ ಇನ್ನೂ ಸುಂದರವಾಗಿದೆ, ಅದನ್ನು ರುಜುವಾತು ಮಾಡಲು ಅನೇಕ ಅವಕಾಶಗಳಿವೆ. ಈ ತರದ ಹತ್ತಾರು ಅವಕಾಶಗಳು ನಮ್ಮೆದುರಿಗಿದ್ದರೂ ಸಹ, ಯಾಕೋ ಏನೋ ಈ ಸಮಾಜ ಅನೇಕ ಮನೋವಿಕಾರಗಳಿಂದ ಬಳಲುತ್ತಿದೆ, ಈ ಎಲ್ಲ ಮನೋವಿಕಾರಗಳನ್ನು ಸುಲಭವಾಗಿ ನಿವಾರಿಸಲು ಅಸಾಧ್ಯ ಎನ್ನುವಂತಾಗಿದೆ.

ಒಂದು ಸಮಾಜ ಶ್ರೇಷ್ಠ ಸಮಾಜ ವಾಗಿ ದೀರ್ಘವಾಗಿ ಬಾಳಿಕೆ ಬರುವ ನಿಟ್ಟಿನಲ್ಲಿ, ಪ್ರಬುದ್ಧ ಮನಸ್ಸು ಸಮೃದ್ಧ ಸಮಾಜಕ್ಕಾಗಿ ನಾವು ನೀವು ಅಗತ್ಯವಾಗಿ ನಿರ್ವಹಿಸಬೇಕಾದ ಕರ್ತವ್ಯಗಳೇನು? ಎಂಬ ವಿಷಯ ಕುರಿತು, ಚಿಕ್ಕಮಗಳೂರಿನ ರೋಟರಿ ಕ್ಲಬ್, ನಗರದ ರೋಟರಿ ಸಭಾಂಗಣದಲ್ಲಿ ಚಿಂತನ ಮಂಥನವನ್ನು ಏರ್ಪಡಿಸಿತ್ತು.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed