ಅಮಿತ್ ಆದಮ್ ಪಿರೇರಾಗೆ ಯುವರತ್ನ ಪ್ರಶಸ್ತಿ….
1 min read
ಅಮಿತ್ ಆದಮ್ ಪಿರೇರಾಗೆ ಯುವರತ್ನ ಪ್ರಶಸ್ತಿ
ಯುವ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡು
ಸಕಾರಾತ್ಮಕ ಬದಲಾವಣೆಗೆ ಪ್ರೇರಣೆಯಾದ ಮೂಡಿಗೆರೆ ತಾಲ್ಲೂಕಿನ ಕೆಳಗೂರು ಗ್ರಾಮದ ಯುವಕ ಅಮಿತ್ ಆದಮ್ ಪಿರೇರಾ ಅವರಿಗೆ ಅಖಿಲ ಭಾರತ ಕಥೋಲಿಕ ವಿಶ್ವವಿದ್ಯಾಲಯ ಕರ್ನಾಟಕ ವತಿಯಿಂದ ನೀಡಲಾಗುವ ಪ್ರತಿಷ್ಠಿತ ?ಯುವರತ್ನ ಪ್ರಶಸ್ತಿ? ಲಭಿಸಿದೆ.
ಕಾರವಾರದಲ್ಲಿ ನಡೆದ ಭವ್ಯ ಯುವಜನೋತ್ಸವದ ವೇಳೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಯುವ ನೇತೃತ್ವ, ಸೇವಾ ಮನೋಭಾವ ಮತ್ತು ಸಾಮಾಜಿಕ ಜಾಗೃತಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅಮಿತ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರತಿವರ್ಷ AIUCF ಸಂಸ್ಥೆ ದೇಶದಾದ್ಯಂತದ ಕಥೋಲಿಕ ಧರ್ಮಕೇಂದ್ರಗಳಲ್ಲಿ ಸೇವೆ ನೀಡುತ್ತಿರುವ ಯುವಕ?ಯುವತಿಯರನ್ನು ಗುರುತಿಸಿ ಯುವರತ್ನ ಗೌರವವನ್ನು ಪ್ರದಾನ ಮಾಡುತ್ತದೆ. ಈ ಬಾರಿ ಚಿಕ್ಕಮಗಳೂರು ಕ್ರೈಸ್ತ ಧರ್ಮಕ್ಷೇತ್ರದ ಇಬ್ಬರು ಯುವಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಅವರಲ್ಲಿ ಮೂಡಿಗೆರೆ ತಾಲ್ಲೂಕಿನ ಕೆಳಗೂರು ಎಸ್ಟೇಟ್ನ ವಲೇರಿಯನ್ ಮತ್ತು ಸ್ಟೆಲ್ಲಾ ಪಿರೇರಾ ದಂಪತಿಗಳ ಪುತ್ರ ಅಮಿತ್ ಆದಮ್ ಪಿರೇರಾ, ಪ್ರಸ್ತುತ ಮಂಗಳೂರು ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅಮಿತ್ ಅವರ ಸಾಧನೆಗೆ ಗ್ರಾಮಸ್ಥರು, ಬಂಧುಮಿತ್ರರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

