ಧಾರ್ಮಿಕ ಆಚರಣೆಯಲ್ಲಾಗುವಂತಹ* *ಯಡವಟ್ಟು ⁉️*…..
1 min read
*ಮೂಡಿಗೆರೆ 📍*
*ಧಾರ್ಮಿಕ ಆಚರಣೆಯಲ್ಲಾಗುವಂತಹ*
*ಯಡವಟ್ಟು ⁉️*

*|| ಆತ್ಮೀಯರೇ ||*
*ಶ್ರೀ ವಿಘ್ನೇಶ್ವರನ ಕೃಪೆ, ವಿಘ್ನನಿವಾರಕ* ಎಂದು ಧರ್ಮದ ಮೊದಲ ಪೂಜೆ *ಶ್ರೀ ವಿಘ್ನೇಶ್ವರನಿಗೆ* ಎಂಬ ವಾಡಿಕೆ ನಮ್ಮ ಹಿಂದೂ ಧರ್ಮದ ಶ್ರೇಷ್ಠ ಧಾರ್ಮಿಕ ಪದ್ಧತಿ.
*ಗೌರಿ-ಗಣೇಶ ಚತುರ್ಥಿ* ಬಂತೆಂದರೆ *ಇಡೀ ದೇಶಕ್ಕೆ ಸಂಭ್ರಮ,ಸಡಗರ* ಸಣ್ಣ ಮಕ್ಕಳಿಂದ ಹಿಡಿದು *ವೃದ್ಧಾಪ್ಯ ವ್ಯವಸ್ಥೆಯಲ್ಲಿ* ಬದುಕನ್ನು ಸಾಗಿಸುತ್ತಿರುವ ಮನಸ್ಸುಗಳಿಗೂ ಕೂಡ ಈ ಆಚರಣೆ ಧರ್ಮದ ಹೆಗ್ಗುರುತಿಗೆ ಪ್ರತೀಕ ಎಂಬಂತಾಗಿದೆ.
ಹೀಗಿರುವಾಗ *ಗಣೇಶ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ* ಇಂತಿಷ್ಟು ದಿನಗಳು ತಮ್ಮ *ಗಲ್ಲಿ , ಊರು, ಕೇರಿ ರಂಗಮಂದಿರಗಳಲ್ಲಿ* ಪ್ರತಿಷ್ಠಾಪಿಸಿ ಶ್ರದ್ಧೆ ಭಕ್ತಿಯಿಂದ ಪೂಜೆ *ದಿನ-ನಿತ್ಯ ಮಹಾಮಂಗಳಾರತಿಗಳು* ಸಡಗರದ ಕಾರ್ಯಕ್ರಮಗಳು ನಂತರ ಬರುವ ದಿನಗಳಲ್ಲಿ ವಿಸರ್ಜನಾ ಮಹೋತ್ಸವ *ಜೈಕಾರ ಪಠಾಕಿ ಸಿಡಿ ಮದ್ದಿನೊಂದಿಗೆ ಕುಣಿತ* ಸಂಭ್ರಮ ಮನೆಮಾಡಿರುತ್ತದೆ.
*ಈ ರೀತಿ ವಿಜೃಂಭಣೆಯಿಂದ* ನಡೆಯುವ ಕಾರ್ಯಕ್ರಮದ ಅಂತಿಮ ಘಟ್ಟ *ವಿಗ್ರಹವನ್ನು ಹತ್ತಿರದ ಹಳ್ಳ , ಹೊಳೆ,ನದಿ* ಹೀಗೆ ಅನುಕೂಲವನ್ನು ಗಮನಿಸಿ ವಿಸರ್ಜಿಸುವ ಕಾರ್ಯದಲ್ಲಿ ಭಾಗಿಯಾಗುವುದು. ಇದರ ಜವಬ್ದಾರಿಯನ್ನು ತಿಳಿದವರು *ಈ ಶ್ರೇಷ್ಠ ಪದ್ಧತಿಯನ್ನು ಅರ್ಥೈಸಿಕೊಂಡು* ಆಚರಣೆ ರೂಪದಲ್ಲಿ ಪಾಲಿಸುವವರು ವಾಸ್ತುಪ್ರಕಾರವಾಗಿ ಅಚ್ಚುಕಟ್ಟಾಗಿ ಮುಗಿಸಿ ಬಿಳ್ಕೊಡುವ ಕಾರ್ಯದಲ್ಲಿ ಉತ್ತಮ ರೀತಿಯ *ಜವಬ್ದಾರಿಯನ್ನು ಪೂರ್ಣಗೊಳಿಸಿ* ಅಳವಡಿಸಿಕೊಂಡು ಬಂದಿರುವಂತದ್ದು.
ಆದರೆ *ನಮ್ಮ ಮೂಡಿಗೆರೆಯ ಬೀಜುವಳ್ಳಿಯ ಸುಂಡೇಕೆರೆ ಹಳ್ಳ* ಎಂಬುದಾಗಿ ಏನು ಕರಿತೀವಿ ಇಲ್ಲಿ *ಇತ್ತೀಚೆಗೆ ವಿಸರ್ಜನೆ ಮಾಡಲಾಗಿರುವಂತಹ* ಒಂದು ಗಣೇಶ ವಿಗ್ರಹದ ಪರಿಸ್ಥಿತಿ ಇಂದು ಮನಸ್ಸಿಗೆ ಬಾಹುಕವನ್ನು ಉಂಟುಮಾಡಿತು, ನಮ್ಮ ಧರ್ಮದಲ್ಲಿ ಇಂತಹ ರೀತಿಯ ತಪ್ಪುಗಳು ಸರ್ವೇ ಸಾಮಾನ್ಯವಾಗಿವೆ . ವಿಸರ್ಜನೆ ವಿಚಾರವಾಗಿ ಈ ಹಿಂದೆಯೂ ಇಂತಹ ತಪ್ಪುಗಳು ಈ ಹೊಳೆಯಲ್ಲಿ ನಡೆದಿರಬಹುದು. ಆದರೂ ಕೂಡ ಇದನ್ನು ನೇರವಾಗಿ ಗಮನಿಸಿದಾಗ ಸಣ್ಣ ತಪ್ಪು ಎಂದು ಭಾವಿಸಲಾಗದು, ಮನಸ್ಸಿಗೆ ಸಮಾಧಾನ ಭಾವದಿಂದ ಜೀರ್ಣಿಸಿಕೊಳ್ಳಲು ಸಾಧ್ಯವಾಗದು. *ಅಷ್ಟೊಂದು ದಿನಗಳು ಭಗವಂತನ ಸೇವೆಮಾಡಿ* ಭಾವನಾತ್ಮಕವಾದ ಆಚರಣೆಯ ಕೊನೆಯಲ್ಲಿ ಈ ರೀತಿ ಅಭಾಸವಾದರೆ ಏನು ಪ್ರಯೋಜನ ?? ಪುಣ್ಯ ಅನ್ನುವಂತದ್ದು ಏನ್ಬಂತು ,ಪಾಪ ಸುತ್ಕೊಳಲ್ವೇ ??
*ವಿಘ್ನೇಶ್ವರನ ವಿಗ್ರಹದ* ಹೊರತಾಗಿ *ಹೊಳೆಯಲ್ಲಿ ವಿಸರ್ಜಿಸುವ ಮೂರ್ತಿಗಳನ್ನು* ಹೇಗೇಗೆ ನದಿಗಳಿಗೆ ಬಿಸಾಡ್ತಾರೆ ಎನ್ನುವಂತದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಂಡ ನಾವುಗಳು,
*ನಮ್ಮದು* ಹತ್ತು ಅಡಿ ಗಣಪತಿ , ಹದಿಮೂರು,ಹದಿನೈದು ಎಂದು ಹುಬ್ಬೇರಿಸಿ ಅದ್ದೂರಿ ಆಡಂಬರದ ಕಾರ್ಯಕ್ರಗಳಿಗೆ ಸಾಕ್ಷಿಯಾಗಿ ಶ್ರೇಷ್ಠತೆಯನ್ನು ಸಾರಿ ಮೆರೆಸುವ ಮನಸ್ಸುಗಳಿಗೆ ಆ ಹತ್ತು ,ಹದಿಮೂರು,ಹದಿನೈದು ಅಡಿಯ ಮತ್ತಷ್ಟು ಮೊಗದಷ್ಟು ದೊಡ್ಡ ಎತ್ತರದ ನೀರಿನಲ್ಲಿ ಕರಗದ ಗಣಪತಿಗಳನ್ನು ಪ್ರತಿಷ್ಠಾಪಿಸಿ ವಿಸರ್ಜಿಸುವಾಗ ಎಷ್ಟು ಆಳವಾದ ಗುಂಡಿಗಳನ್ನು ತೆಗೆದು ವಿಸರ್ಜಿಸಬೇಕು ಎಂಬ ಸಾಮಾನ್ಯ ಜ್ಞಾನ ಬೇಡವೇ ??
*ಧರ್ಮದ ಧಾರ್ಮಿಕ* ಆಚರಣೆಗಳಲ್ಲಿ ಭಕ್ತಿಪೂರ್ವಕವಾಗಿ ತೊಡಗಿಕೊಂಡು ಸಂಭ್ರಮಿಸುವ ಒಬ್ಬ ಧರ್ಮದ ಸೇವಕನಾಗಿ ಈ ಬೇಸರದ ಸಂಗತಿಯನ್ನ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ . ಇಂತಹ ತಪ್ಪುಗಳು ಮುಂದಿನ ದಿನಗಳು ,ವರುಷಗಳಲ್ಲಿ ನಡೆಯ ಬಾರದೆಂಬ ಸದುದ್ದೇಶದಿಂದಷ್ಟೆ.
*ನಿನ್ನೆ* ರಾತ್ರಿ ನಡೆದಂತಹ *ದುರ್ಗಿ ವಿಸರ್ಜನಾ* ಕಾರ್ಯಕ್ರಮದ ಸಂದರ್ಭದಲ್ಲಿ *ಸೇತುವೆ ಬಲಭಾಗದ ಪಂಪ್ ಸೆಟ್* ಕಡೆಗೆ ವಿಸರ್ಜಿಸಿರುವ ಗಣಪತಿ ವಿಗ್ರಹವನ್ನು ಈ ರೀತಿಯಾಗಿ ಕಂಡು ಗಮನಿಸಿದ ಮಹಿಳೆಯರು ಮಕ್ಕಳು ಹಿರಿಯರು ಚರ್ಚಿಸಿ ಬೇಸರ ವ್ಯಕ್ತಪಡಿಸಿದರು. ಇವರಿಗೂ ಹಾಗೂ ರಸ್ತೆಯಲ್ಲಿ ಸಂಚರಿಸುವಾಗ ಸೇತುವೆಯ ಬಳಿಯಿಂದ ಕೆಳಗೆ ನೇರವಾಗಿ ಕಾಣುವ ಈ ದೃಶ್ಯದಿಂದ ಅನ್ಯ ಧರ್ಮೀಯರಿಗೂ ಧರ್ಮದ ಆಚರಣೆಯ ಪಾಲುದಾರರಾಗಿ ಈ ಗಣಪತಿಯ ಸಮಿತಿಯವರು *ಏನು ಸಂದೇಶವನ್ನು ಸಾರುತ್ತಿರುವಿರಿ ??*
*ನನ್ಗೇಕೆ ಎನ್ನುವ* ಮನಸ್ಥಿತಿಯ ಬದಲಾಗಿ *ಅತೀ ಸಾಮಾನ್ಯನಲ್ಲಿ ಸಾಮಾನ್ಯನಾಗಿ* ನಾಲ್ಕು ಸಾಲುಗಳಲ್ಲಿ ಸಾಮಾನ್ಯ ಪದಗಳೊಂದಿಗೆ, ನನ್ನ ಧರ್ಮ ಶ್ರೇಷ್ಠ ಧರ್ಮ ಎಂಬ ಉತ್ತಮ ಉದ್ದೇಶದಿಂದ ಸರಾಗ ಮನಸ್ಥಿತಿಯಲ್ಲಿ ಕಣ್ಣಿಗೆ ಕಂಡದ್ದನ್ನು ಕೈ ಬರಹಕ್ಕೆ ಹಸ್ತಾಂತರಿಸಿದ್ದೇನಷ್ಟೆ.
*ದಯಾಮಾಡಿ* ಸಂಬಂಧಪಟ್ಟ ಗಣಪತಿ ಸೇವಾ ( ಉಸ್ತುವಾರಿ ) ಸಮಿತಿಯವರು ಈ ಯಡವಟ್ಟನ್ನು ಸರಿಪಡಿಸಿಕೊಳ್ಳುವಂತಹ ಪ್ರಯತ್ನವನ್ನು ಮಾಡಿ.
*ಧನ್ಯವಾದಗಳೊಂದಿಗೆ,*
*ಅಕ್ಷತ್ ✍🏻 ಪಟ್ಟದೂರು*

